ಸಂಪ್ರದಾಯಕ ಗಣೇಶೋತ್ಸವ ಆಚರಿಸಿದ ಮಂಡಳಿಗಳಿಗೆ ಬಹುಮಾನ ವಿತರಣೆ
ಯಮಕನಮರಡಿ 03: ಸ್ಥಳೀಯ ಪೋಲಿಸ ಠಾಣೆ ಸಿಪಿಐ ಜಾವೇದ ಮುಸಾಪುರಿ ಅವರು ಕಾನೂನು ಸುವ್ಯಸ್ಥೆಯನ್ನು ರಕ್ಷಿಸುವುದರ ಜೊತೆಗೆ ಸಮಾಜದಲ್ಲಿ ಶಾಂತಿ ನೆಲೆಸುವಂತೆ ಮಾಡುವುದು ಪೋಲಿಸರ ಕೆಲಸ. ಆದರೆ ಈ ಪೋಲಿಸ ಠಾಣೆಯಲ್ಲಿ ಅಪರೂಪದ ಅಧಿಕಾರಿ ಯಾದ ಜಾವೇದ ಮುಸಾಪುರಿ ರವರ ಧರ್ಮ ಬೇರೆಯಾದರು ಸ್ವಾಸ್ತ್ಯಪೂರ್ಣ ಸಂಪ್ರದಾಯಸ್ತ ಸಮಾಜ ನಿರ್ಮಿಸುವ ಕಾರ್ಯವನ್ನು ಮಾಡಿದ್ದು ಶ್ಲಾಘನೀಯ ಕಾರ್ಯವಾಗಿದೆ. ಇದರ ಜೊತೆಗೆ ಗಣೇಶನ ಹಬ್ಬದ ಸಂದರ್ಭದಲ್ಲಿ ಮಂಡಳಗಳು ಭಕ್ತಿ ಭಾವದೊಂದಿಗೆ ಗಣೇಶ ಉತ್ಸವವನ್ನು ಆಚರಿಸುವ ಮಾರ್ಗದರ್ಶನವನ್ನು ತಿಳಿಸಿಕೊಟ್ಟಿದ್ದಾರೆ. ಸಂಪ್ರದಾಯಕವಾಗಿ ಗಣೇಶೋತ್ಸವ ಆಚರಿಸಿದ ಮಂಡಳಗಳಿಗೆ ನಗದು ಬಹುಮಾನ ನೀಡಿ ಪ್ರೇರೆಪಿಸುವ ಕೆಲಸವನ್ನು ಮಾಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಗಣೇಶೋತ್ಸವದಲ್ಲಿ ಭಕ್ತಿ ಕೊರತೆ ಕಾಣುತ್ತಿದೆ. ಅಲ್ಲದೆ ಸ್ಪರ್ಧಾತ್ಮಕ ಗಣೇಶೋತ್ಸವಗಳು ಆರಂಭಗೊಂಡಿದ್ದು ಸಂಪ್ರದಾಯದ ಎಲ್ಲೆಯನ್ನು ಮೀರಿ ಸಾಗುತ್ತಿವೆ. ಅದರಿಂದ ಧರ್ಮ ಮತ್ತು ಸಂಪ್ರದಾಯವನ್ನು ಮುಂದುವರೆಸಲು ಮತ್ತು ಸ್ವಾಸ್ತ್ಯಪೂರ್ಣ ಸಮಾಜವನ್ನು ನಿರ್ಮಿಸಲು ಸದಾ ಶ್ರಮಿಸುವ ಪೋಲಿಸ ಅಧಿಕಾರಿ ಜಾವೇದ ಮುಸಾಪುರಿ ಇವರ ಯೋಜನೆ ಯಶಸ್ವಿಯಾಗಿದ್ದು, ಪೋಲಿಸ ಠಾಣೆ ವ್ಯಾಪ್ತಿಯ 72 ಹಳ್ಳಿಗಳಲ್ಲಿ 2 ಮಂಡಳಗಳನ್ನು ಆಯ್ಕೆ ಮಾಡಿ ಅವರಿಗೆ ಸೂಕ್ತ ಬಹುಮಾನ ನೀಡಿ ದಿ. 2ರಂದು ಪೋಲಿಸ್ ಠಾಣಾ ಆವರಣದಲ್ಲಿ ಸನ್ಮಾನಿಸಲಾಯಿತು.ಎಲ್ಲ ಪೋಲಿಸ ಸಿಬ್ಬಂದಿಗಳು ಅಧಿಕಾರಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.