ಗ್ರಾಮ ಪಂಚಾಯತಿಗಳಿಗೆ ಜಿಲ್ಲಾ ಉಪಕಾರ್ಯದರ್ಶಿ:ಬಿ ಎಸ್ ರಾಠೋಡ ಬೇಟಿ ನೀಡಿ ಕಾಮಗಾರಿ ಪರೀಶೀಲನೆ
ಇಂಡಿ 16 : ಇಂಡಿ ತಾಲೂಕು ಹಾಗೂ ಚಡಚಣ ತಾಲ್ಲೂಕಿನ ಬಳ್ಳೊಳ್ಳಿ,ನಂದರಗಿ,ಬಬಲಾದ, ಮತ್ತು ಚವಡಿಹಾಳ ಗ್ರಾಮ ಪಂಚಾಯತಿಗಳಿಗೆ ವಿಜಯಪೂರ ಜಿಲ್ಲಾ ಉಪಕಾರ್ಯದರ್ಶಿಗಳಾದ ಶ್ರೀ ಬಿ ಎಸ್ ರಾಠೋಡ ಬೇಟಿ ನೀಡಿ ವಿವಿಧ ಯೋಜನೆಗಳ ಕಾಮಗಾರಿಗಳನ್ನು ಪರೀಶೀಲನೆ ಮಾಡಿದರು.ನಂದರಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿಗೆ ಭೇಟಿ ನೀಡಿ. ವೀಕ್ಷಣೆ ಮತ್ತು ಪರೀಶೀಲನೆ ನಡೆಸಿದರು ಇದೇ ಸಂದರ್ಭದಲ್ಲಿ ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಮಕ್ಕಳೊಂದಿಗೆ ಸಂವಾದ ನಡೆಸಿ ಪರೀಕ್ಷಿಸಿದರು. ಮಕ್ಕಳು ಉತ್ತಮ ರೀತಿಯಲ್ಲಿ ಕಲಿಕಾ ವಿಷಯದ ಕುರಿತು ಉತ್ತರಿಸಿದಾಗ ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪ್ರಗತಿ ಹಂತದಲ್ಲಿರುವ ಉಘಒ ಸೋಕ್ ಫಿಟ್ ಕಾಮಗಾರಿಗಳ ವೀಕ್ಷಣೆ ಮತ್ತು ಪರೀಶೀಲನೆ ಮಾಡಿ. ಎಲ್ಲಾ ಕಾಮಗಾರಿಗಳನ್ನು ಬೇಗನೆ ಮುಕ್ತಾಯಗೊಳಿಸಲು ಸೂಚನೆ ನೀಡಿದರು.ಬಳ್ಳೋಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೋಮಣ್ಣ ಸಂಗೋಗಿ ಜಮೀನಿನ ಹತ್ತಿರ ಹೂಳು ಎತ್ತುವುದು ಕಾಮಗಾರಿ ಸ್ಥಳಕ್ಕೆ ಬೇಟಿ ನೀಡಿ ಪರೀಶೀಲನೆ ಮಾಡಿ ಕೂಲಿ ಕಾರ್ಮಿಕರ ಜೊತೆ ಸಂವಾದ ನಡೆಸಿ ಕುಂದು ಕೊರತೆಗಳನ್ನು ಆಲಿಸಿದರು.ಹಾಗೂ ಕೂಲಿಕಾರರ ಹಾಜರಾತಿ , ಕಾಮಗಾರಿಯ ಕಡತಗಳನ್ನು ಪರೀಶೀಲಿಸಿದರು. ಪೂರ್ಣ ಪ್ರಮಾಣ ಕೆಲಸ ಮಾಡಿ ಪೂರ್ತಿ ಹಣ ಪಡೆದುಕೊಳ್ಳಿ ಎಂದು ತಿಳಿಸಿದರು. ಬೇಸಿಗೆ ಅವಧಿಯಲ್ಲಿ ನಿರಂತರ ಕೆಲಸ ನೀಡುವುದಾಗಿ ತಿಳಿಸಿದರು.ತದನಂತರ ಬಬಲಾದ ಗ್ರಾಮ ಪಂಚಾಯಿತಿಗೆ ಬೇಟಿ ನೀಡಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಪ್ರಗತಿ ಕುರಿತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜೊತೆ ಚರ್ಚಿಸಿದರು.ಹಾಗೂ ಪ್ರಗತಿ ಹಂತದಲ್ಲಿರುವ ಕಾಮಗಾರಿಗಳ ಮಾಹಿತಿ ಪಡೆದು ಕಾಮಗಾರಿಯ ಕಡತಗಳನ್ನು ಪರೀಶೀಲಿಸಿ ಸರಿ ಪಡಿಸಿಕೊಳ್ಳುವಂತೆ ತಾಂತ್ರಿಕ ಸಹಾಯಕರಿಗೆ ಸೂಚಿಸಿದರು. ಪಂಚಾಯತ್ ವ್ಯಾಪ್ತಿಯ ಕೂಸಿನ ಮನೆಗೆ ಬೇಟಿ ನೀಡಿ ಕೂಸಿನ ಮನೆಯಲ್ಲಿನ ಮಕ್ಕಳ ಹಾಜರಾತಿ , ಮಕ್ಕಳಿಗೆ ನೀಡುತ್ತಿರುವ ಆಹಾರದ ಮೆನು ಗಮನಿಸಿ ಉತ್ತಮವಾದ ಆಹಾರವನ್ನು ನೀಡಿ ಎಂದು ಆರೈಕೆದಾರರಿಗೆ ಸೂಚಿಸಿದರು. ಹಾಗೂ ಮಕ್ಕಳಿಗೆ ನೀಡಿದ ಆಹಾರವನ್ನು ಸವಿದರು ಹಾಗೂ ಸ್ವಚ್ಚತೆ ಕಂಡು ಸಂತೋಷ ವ್ಯಕ್ತಪಡಿಸಿದರು .ಹಾಗೂ ಕೂಸಿನ ಮನೆಯಲ್ಲಿ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಿ ಕೊಡಿ ಎಂದು ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.ತದನಂತರ ಚವಡಿಹಾಳ ಗ್ರಾಮ ಪಂಚಾಯಿತಿಗೆ ಬೇಟಿ ನೀಡಿ ಗ್ರಾಮ ಪಂಚಾಯಿತಿ ಕಟ್ಪದಲ್ಲಿರುವ ಗ್ರಂಥಾಲಯ ,ಎನ್ ಆರ್ ಎಲ್ ಎಂ ಕೊಠಡಿ ಹಾಗೂ ಪಂಚಾಯತ್ ಮೇಲ್ಚಾವಣಿ ಅಲ್ಲಿ ಅಳವಡಿಸಿರುವ ಸೋಲಾರ್ ಪೇನಲ್ ಕಾಮಗಾರಿಗಳನ್ನು ವೀಕ್ಷಿಸಿದರು. ಗ್ರಂಥಾಲಯ ದಲ್ಲಿರುವ ಹೊಸ ಪುಸ್ತಕಗಳು , ಟೇಬಲಗಳು , ಇಂಟರ್ನೆಟ್ ವ್ಯವಸ್ಥೆ ಕುರಿತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಸಿ ಜೆ ಪಾರೆ ಅವರು ತಿಳಿಸಿದರು. ಹಾಗೂ ಸೋಲಾರ್ ಪೇನಲ್ ದ ಉಪಯೋಗ ಹಾಗೂ ಪಂಚಾಯತಗೆ ಆಗುವ ಅನುಕೂಲ ಕುರಿತು ಮಾಹಿತಿ ಹಂಚಿಕೊಂಡರು , ಅದೇ ರೀತಿ ಅಂಗನವಾಡಿ ಕೇಂದ್ರಗಳಿಗೆ ನೀಡುವ ಆಟಿಕೆ ಸಾಮಗ್ರಿಗಳನ್ನು ಪರೀಶೀಲಿಸಿ ಬೇಗ ಅಂಗನವಾಡಿಗಳಿಗೆ ತಲುಪಿಸಿ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು. ಅದೇ ರೀತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆ ಅಡಿಯಲ್ಲಿನ ಕಾಮಗಾರಿಗಳ ಕಿರು ಚಿತ್ರ ತೋರಿಸುವುದ ಮೂಲಕ ನರೇಗಾ ಯೋಜನೆ ಅಡಿಯಲ್ಲಿ ಕೂಲಿಕಾರರಿಗೆ ಬೇಸಿಗೆ ಅವಧಿಯಲ್ಲಿ ಕೆಲಸ ನೀಡುವುದಾಗಿ ತಿಳಿಸಿದರು. ಉತ್ತಮ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವಠೆ ಸೂಚಿಸಿದರು.ಈ ಸಂದರ್ಭದಲ್ಲಿ ಶ್ರೀ ಸಂಜಯ ಖಡಗೆಕರ್ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ)ತಾಲೂಕ ಪಂಚಾಯತ ಇಂಡಿ, ಶ್ರೀ ಮಹಾಂತೇಶ್ ಹೂಗೋಡಿ ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ ) ತಾಲೂಕ ಪಂಚಾಯತ ಚಡಚಣ, ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಾದ ಶ್ರೀ ಸಿದ್ದರಾಯ ಬಿರಾದಾರ,ಶ್ರೀ ಸಿ ಜಿ ಪಾರೆ , ತಾಂತ್ರಿಕ ಸಂಯೋಜಕರು ಸಾಹಿಲ್ ದನಶೆಟ್ಟಿ, ಪ್ರದೀಪ ಹಿಳ್ಳಿ, ನರೇಗಾ ಸಿಬ್ಬಂದಿಗಳು, ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಇದ್ದರು.