ಕೊಪ್ಪಳ 07: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಕೊಪ್ಪಳದಲ್ಲಿ ಹಮ್ಮಿಕೊಳ್ಳಲಾದ ಜಿಲ್ಲಾ ಮಟ್ಟದ ಬೇಸಿಗೆ ಶಿಬಿರದ ಸಮಾರೊಪದ ಸಮಾರಂಭವು ಯಶಸ್ವಿಯಾಗಿ ಜರುಗಿತು.
ಜಿಲ್ಲಾ ಮಟ್ಟದ ಬೇಸಿಗೆ ಶಿಬಿರವನ್ನು ಬೆಂಗಳೂರು ಬಾಲ ಭವನ ಸೊಸೈಟಿ, ಕೊಪ್ಪಳ ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರ ಸಹಯೋಗದಲ್ಲಿ ಮೇ. 20 ರಿಂದ ಜೂನ್. 03 ರವರೆಗೆ 15 ದಿನಗಳಕಾಲ ಸಕರ್ಾರಿ ಬಾಲಕರ/ ಬಾಲಕೀಯರ ಬಾಲಮಂದಿರದಲ್ಲಿ ಆಯೋಜಿಸಲಾಗಿತ್ತು.
ಸಮಾರೋಪ ಸಮಾರಂಭ ಉದ್ಘಾಟಿಸಿದ ಕೊಪ್ಪಳ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ನಿಲೋಫರ್ ಎಸ್. ರಾಂಪುರಿ ಅವರು ಮಾತನಾಡಿ, ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸಲು ಬೆಂಗಳೂರು ಬಾಲ ಭವನ ಸೊಸೈಟಿ ರವರು ಮಕ್ಕಳಿಗೆ ಬೇಸಿಗೆ ಶಿಬಿರದಲ್ಲಿ ಪ್ರತಿ ದಿನ ಯೋಗ, ಕ್ರೀಡೆ, ಕರಾಟೆ, ಮೆಹಂದಿ, ಜೇಡೆಮಣ್ಣಿನ ಕಲೆ, ಸಮೂಹ ಗೀತೆ ಇತ್ಯಾದಿ ಸೃಜನಾತ್ಮಕ ಕಲೆಗಳ ಬಗ್ಗೆ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಿ ಮಕ್ಕಳನ್ನು ತಯಾರುಮಾಡುವ ಉದ್ದೇಶದಿಂದ ಅವರ ಅಗತ್ಯಕ್ಕನುಗುಣವಾಗಿ ಮಕ್ಕಳಿಗೆ ಪೂರಕವಾಗಿ ಶಿಬಿರವನ್ನು ಆಯೋಜಿಸಿದ್ದು.ಇದರಲ್ಲಿ ಮಕ್ಕಳೆಲ್ಲರೂ ಈ ಸಕ್ರೀಯವಾಗಿ ಭಾಗವಹಿಸಿ ಈ ಕಾರ್ಯಕ್ರಮದ ಸದುಪಯೋಗ ಪಡಿಸಿಕೊಂಡಿರುವುದು ಮಕ್ಕಳು ತಯಾರಿಸಿರುವ ಮಣ್ಣಿನ ಕಲೆ, ಪೇಪರ್ ಕಟಿಂಗ್ಸ್ ಹಾಗೂ ಹಾಡು ಡ್ಯಾನ್ಸ ಕರಾಟೆ ಪ್ರದರ್ಶನದಿಂದ ತಿಳಿಯುತ್ತದೆ. ಇದರೋಂದಿಗೆ ಮಕ್ಕಳಿಗೆ ಪಠ್ಯದ ವಿಷಯಕ್ಕೆ ಅದರಲ್ಲೂ ಇಂಗ್ಲéೀಷ ವಿಷಯಕ್ಕೆ ಹೆಚ್ಚು ಒತ್ತುನೀಡಿದರೆ ಮಕ್ಕಳಿಗೆ ತುಂಬಾ ಅನುಕೂಲವಾಗುದು ಎಂದು ಸಲಹೆ ನೀಡಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವೀರೆಂದ್ರ ನಾವದಗಿ ಮಾತನಾಡಿ, ಬಾಲ ಮಂದಿರದ ಮಕ್ಕಳು ಅವಕಾಶ ವಂಚಿತರು/ಸೌಲಭ್ಯವಂಚಿತರು ಎನ್ನುತಾರೆ ಆದರೆ ನಮ್ಮ ಬಾಲ ಮಂದಿರದ ಮಕ್ಕಳಿಗೆ ಬೆಸಿಗೆ ಶಿಬಿರದಂತಹ ಕಾರ್ಯಕ್ರವನ್ನು ಜಿಲ್ಲಾ ಬಾಲ ಭವನ ಹಲವಾರು ಕಾರ್ಯಕ್ರಮವನ್ನು ನೀಡುತ್ತಿರುವದರಿಂದ ಸೌಲಭ್ಯವಂತರು ಎಂದರು ಮಕ್ಕಳು ಇಲ್ಲಿ ಕಲಿತ ಕಲೆ ಗಳನ್ನು ಮುಂದುವರಿಸಿಕೊಂಡು ಹೋಗಬೇಕೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಅಧಿಕಾರಿ ಜಯಶ್ರೀ ಆರ್. ಮಾತನಾಡಿ, ಶಿಬಿರದಲ್ಲಿ ಮಕ್ಕಳು ತಯಾರಿಸಿದ ಬಳೆ, ಓಲೆ ಹಾಗೂ ಮೆಹಂದಿ ಕಲೆಗಳ ಪ್ರಾಂತ್ಯಕ್ಷತೆಗಳಿಂದ ಮಕ್ಕಳು ಶಿಬಿರದ ಸದುಪಯೋಗ ಪಡಿಸಿಕೊಂಡಿರುದು ತಿಳಿದುಬರುತ್ತದೆ. ಮಕ್ಕಳ ಪ್ರತಿಭೆಯನ್ನು ಇನ್ನು ಹೆಚ್ಚಿಸಲು ಉಪನಿಧರ್ೆಶಕರು ಸ್ವಾತಂತ್ರ್ಯ ದಿನಾಚರಣೆ ಆಚರಣೆದಿನದಂದು ಬಾಲ ಮಂದಿರದ ಮಕ್ಕಳಿಗೆ ಸಮೂಹ ನೃತ್ಯ ಪ್ರದರ್ಶನಕ್ಕೆ ಅವಕಾಶ ನೀಡಲು ಪ್ರಯತ್ನಿಸುವುದಾಗಿ ಹೆಳಿರುತ್ತಾರೆ ಈ ಒಂದು ಕಾರ್ಯಕ್ರಮಕ್ಕೆ ಬಾಲಭವನ ಸೊಸೈಟಿಯು ಸಹಕಾರ ನೀಡುತ್ತಿದೆ ಎಂದರು.
ಅಕಾರ್ಯಕ್ರಮದಲ್ಲಿ ಬಾಲಕಿಯರ ಬಾಲಮಂದಿರ ಅಧೀಕ್ಷಕರಾದ ಮಹೇಶ್ವರ ಜಿ., ಜಿಲ್ಲಾ ಬಾಲ ಭವನ ಸೊಸೈಟಿ ಕಾರ್ಯಕ್ರಮ ಕಛೆರಿ ಸಹಾಯಕ ಉಮೇಶ ಬರಡ್ಡಿ, ಮಕ್ಕಳ ಕಲ್ಯಾಣ ಸಮಿತಿ ಸದಸ್ಯೆ ಯಮನಾ ಬೆಸ್ತರ್, ಕೊಪ್ಪಳ ಶಿಶು ಅಭಿವೃಧ್ದಿ ಯೋಜನಾಧಿಕಾರಿ ಸಿಂಧೂ ಅಂಗಡಿ, ಸರಕಾರಿ ಬಾಲಕರ ಬಾಲಮಂದಿರ ಅಧೀಕ್ಷಕರು ರೋಹಿಣಿ ಕೊಟಗಾರ, ರಾಘವೇಂದ್ರ, ವಿರುಪಾಕ್ಷ, ರೇವತಿ ನಾಗರತ್ನ, ಮೇಹಬೂಬ ಸಾಬ ಇಲಾಹಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.