ತಂದೆ-ತಾಯಿಗಳನ್ನು ನೋಯಿಸದ ಶಿಕ್ಷಣ ಬೇಕು: ಡಾ. ಜಿನದತ್ತ ಹಡಗಲಿ

ಧಾರವಾಡ 04: ತಂದೆ ತಾಯಿಗಳು ತಮ್ಮ ಸುಖ-ನೆಮ್ಮದಿಗಳನ್ನೆಲ್ಲ ತ್ಯಾಗ ಮಾಡಿ, ತಮ್ಮೆಲ್ಲ ಸಂಕಷ್ಟಗಳ ನಡುವೆಯೂ ಮಕ್ಕಳ ಏಳ್ಗೆಗಾಗಿ ಹೆಣಗಾಡುತ್ತಾರೆ. ಪ್ರತಿಯಾಗಿ ಮಕ್ಕಳು ತಮ್ಮ ಇಲ್ಲಸಲ್ಲದ ಬೇಡಿಕೆಗಾಗಿ ತಂದೆ-ತಾಯಿಗಳಿಗೆ ಚಿತ್ರ ಹಿಂಸೆ ಮಾಡುತ್ತಾರೆ. ಇಂಥ ಮನೋಭಾವಗಳು ಬದಲಾಗಿ ತಂದೆ-ತಾಯಿಗಳನ್ನು ನೋಯಿಸದ ಮಾನವೀಯ ಶಿಕ್ಷಣದ ಅಗತ್ಯವಿದೆ ಎಂದು ಜೆ.ಎಸ್.ಎಸ್. ಬನಶಂಕರಿ ಪದವಿ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಜಿನದತ್ತ ಹಡಗಲಿಯವರು ಹೇಳಿದರು.

        ದಿ: 02ರಂದು ಜರುಗಿದ ಜೆ.ಎಸ್.ಎಸ್. ಮಂಜುನಾಥೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ 2018-19 ನೆಯ ಶೈಕ್ಷಣಿಕ ವರ್ಷದ ವಾಷರ್ಿಕ ಸ್ನೇಹ ಸಮ್ಮೇಳನದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡುತ್ತಿದ್ದರು. ವಿದ್ಯಾಥರ್ಿಗಳು ಚಂಚಲೆಯಾದ ಲಕ್ಷ್ಮೀಯ ಬೆನ್ನುಹತ್ತದೆ ಯಾವಾಗಲೂ ವ್ಯಕ್ತಿತ್ವದ ಭಾಗವಾಗಿರುವ ಸರಸ್ವತಿಯ ಆರಾಧನೆ ಮಾಡಿದರೆ ಲಕ್ಷ್ಮೀ ತಾನಾಗಿಯೇ ಬಂದೇ ಬರುತ್ತಾಳೆ ಎಂದು ಅವರು ತಿಳಿಸಿದರು.

ವಿಶೇಷ ಆಹ್ವಾನಿತರಾಗಿ ಅಗಮಿಸಿದ ಜೆ.ಎಸ್.ಎಸ್. ಸಂಸ್ಥೆಯ ವಿತ್ತಾಧಿಕಾರಿ ಡಾ. ಅಜಿತ ಪ್ರಸಾದ ಅವರು ಮಂಜುನಾಥೇಶ್ವರ ಪದವಿಪೂರ್ವ ಮಹಾವಿದ್ಯಾಲಯವು ಗುಣಾತ್ಮಕ ಶಿಕ್ಷಣಕ್ಕೆ ನಿರಂತರ ಪರಿಶ್ರಮ ಪಡುವುದನ್ನು ಸ್ಮರಿಸಿ ವಿದ್ಯಾಥರ್ಿಗಳು ಇದರ ಪ್ರಯೋಜನ ಪಡೆದು ತಮ್ಮ ಛಲ ನಿಷ್ಠೆಗಳಿಂದ ಭವಿಷ್ಯತ್ತನ್ನು ಕಟ್ಟಿಕೊಳ್ಳಬೇಕೆಂದು ನುಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಜೆ.ಎಸ್.ಎಸ್. ಸಂಸ್ಥೆಗಳ ಕಾರ್ಯದಶರ್ಿ ಡಾ.ನ.ವಜ್ರಕುಮಾರ ಅವರು ಪ್ರಯತ್ನ ಪಡುವವರಿಗೇ ಅದೃಷ್ಟ ಒಲಿಯುತ್ತದೆ ಎಂದು ತಿಳಿಸಿದ ಅವರು ಅವರವರ ಭಾವನೆಗೆ ತಕ್ಕಂತೆ ಭಗವಂತನ ಒಲುಮೆ ಇರುತ್ತದೆ ಎಂದು ಹೇಳಿ ವಿದ್ಯಾಥರ್ಿಗಳಿಗೆ ಶುಭ ಕೋರಿದರು. 

ಪ್ರಾಸ್ತಾವಿಕವಾಗಿ ಮಾತನಾಡಿದ ಎಸ್.ಎಮ್.ಪಿ.ಯು. ಕಾಲೇಜಿನ ಪ್ರಾಚಾರ್ಯ ಡಾ.ವಾಯ್.ಎಸ್.ರಾಯಬಾಗಿ ಅವರು ಅತಿಥಿ ಗಣ್ಯರಿಗೆ ಸ್ವಾಗತ ಕೋರಿದರು. ಅಲ್ಲದೆ ಪ್ರಾಸ್ತಾವಿಕವಾಗಿ ಮಾತನಾಡಿ ಜೆ.ಎಸ್.ಎಸ್ ಸಂಸ್ಥೆ ಹಾಗೂ ಎಸ್.ಎಮ್.ಪಿ.ಯು ಮಹಾವಿದ್ಯಾಲಯ ನಡೆದು ಬಂದ ಯಶಸ್ಸಿನ ದಾರಿಯನ್ನು ಕುರಿತು ವಿವರಿಸಿದರು. 

ಡಾ.ವಿ.ಎಸ್.ಜೋಶಿಯವರು ಗಣ್ಯರ ಸಂದೇಶಗಳನ್ನು ವಾಚಿಸಿದರು. ಕ್ರೀಡಾ ಹಾಗೂ ಸಾಂಸ್ಕೃತಿಕ ವಿಭಾಗದ ಉಪಾಧ್ಯಕ್ಷ ಪ್ರೊ. ಬಸವರಾಜ ವಕ್ಕುಂದ ಅವರು ಮಹಾವಿದ್ಯಾಲಯದ ಚಟುವಟಿಕೆಗಳ ವಾಷರ್ಿಕ ವರದಿಯನ್ನು ಓದಿದರು. "ಶಿಕ್ಷಣ ಸಿರಿ ಪ್ರಶಸ್ತಿ" ಪಡೆದ ಡಾ. ಅಜಿತ ಪ್ರಸಾದ, "ಎಜುಕೇಶನಲ್ ಎಕ್ಸಲನ್ಸ್ ಪ್ರಶಸ್ತಿ" ಪಡೆದ ಡಾ.ವಾಯ್.ಎಸ್.ರಾಯಬಾಗಿ, ಈ ವರ್ಷ ನಿವೃತ್ತರಾದ ಪ್ರೊ. ಬಸವರಾಜ ವಕ್ಕುಂದ ಅವರನ್ನು ಸನ್ಮಾನಿಸಲಾಯಿತು. 

ನಂತರ ರಾಜ್ಯ ಹಾಗೂ ರಾಷ್ಟ್ರಮಟ್ಟದ ಸಾಧನೆಗೈದ ವಿದ್ಯಾಥರ್ಿ ಪ್ರತಿಭೆಗಳಿಗೆ ಬಹುಮಾನ ವಿತರಿಸಲಾಯಿತು. ಪವನ ಗೊರವರ, ವಿದ್ಯಾಥರ್ಿ ಕಾರ್ಯದಶರ್ಿ ದರ್ಶನ ಸಿದ್ದಪ್ಪಗೌಡರ  ಹಾಗೂ ವೈಷ್ಣವಿ ದಲಾಲ ಅವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಪ್ರೊ ಆಶಾ ಪಾಟೀಲ, ಪ್ರೊ.ಬಿ.ಎಮ್ ಹುಕ್ಕೇರಿ, ಪ್ರೊ ರವಿವರ್ಮ ಜೋಶಿ, ಪ್ರೊ ವಿ.ಬಿ ಚೌಗಲೆ, ಡಾ.ಎಸ್.ಕೆ ನಡುವಿನಕೇರಿ, ನರಸಿಂಗನವರ ಮೊದಲಾದವರನ್ನಳಗೊಂಡು ಬೋಧಕ-ಬೋಧಕೆತರ ಸಿಬ್ಬಂದಿಗಳೆಲ್ಲ ಕಾರ್ಯಕ್ರಮದ ವ್ಯವಸ್ಥೆಯಲ್ಲಿ ಕ್ರಿಯಾಶೀಲರಾಗಿ ಭಾಗಿಗಳಾಗಿದ್ದರು. ಅತಿಥಿ-ಗಣ್ಯರುಗಳ ಪರಿಚಯ  ಮೊದಲಾಗಿ ಈ ಸಲದ ವೇದಿಕೆಯ ಎಲ್ಲ ಚಟುವಟಿಕೆಗಳನ್ನು ವಿದ್ಯಾಥರ್ಿಗಳೇ ನಿರ್ವಹಿಸಿದ್ದು ವಿಶೇಷ. ಭೂಮಿಕಾ ಅಂಗಡಿ ಹಾಗೂ ಸುದರ್ಶನ ಕಾರ್ಯಕ್ರಮ ನಿರೂಪಿಸಿದರು. 

ಮಧ್ಯಾಹ್ನ ಪ್ರಥಮ ಪಿಯುಸಿ ವಿದ್ಯಾಥರ್ಿಗಳಿಂದ ದ್ವಿತೀಯ ಪಿಯುಸಿ ವಿದ್ಯಾಥರ್ಿಗಳಿಗೆ ಬೀಳ್ಕೊಡುವ ಸಮಾರಂಭ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ನಡೆದವು.