10ರ ಸಾಧಕರ ಹತ್ತಿರ ಶಾಲೆ ಮುಖ್ಯೋಪಾಧ್ಯಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಮನೆ ಮನೆಗೆ ತೆರಳಿ ಪಾಠ

Door to door tutoring for 10th graders, school principal, Essex students

10ರ ಸಾಧಕರ ಹತ್ತಿರ ಶಾಲೆ ಮುಖ್ಯೋಪಾಧ್ಯಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಮನೆ ಮನೆಗೆ ತೆರಳಿ ಪಾಠ 

ಬೆಟಗೇರಿ 27: ಪ್ರಸಕ್ತ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆ ದಿನಾಂಕ ಘೊಷಣೆಯಾಗುತ್ತಿದ್ದಂತೆ ಈ ವರ್ಷ ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಿಸುವ ನಿಟ್ಟಿನಲ್ಲಿ ಹತ್ತರ ಸಾಧಕರ ಹತ್ತಿರ ಶಾಲೆಯ ಮುಖ್ಯೋಪಾಧ್ಯಯ ಎಂಬ ವಿನೂತನ ವಿಶೇಷ ಕಾರ್ಯಕ್ರಮದ ಮೂಲಕ ಮೂಡಲಗಿ ಶೈಕ್ಷಣಿಕ ವಲಯ ವ್ಯಾಪ್ತಿಯ ಬೆಟಗೇರಿ ಗ್ರಾಮದ ಸರಕಾರಿ ಪ್ರೌಢ ಶಾಲೆಯ ಮುಖ್ಯಾಧ್ಯಾಪಕ ರಮೇಶ ಅಳಗುಂಡಿ ಶಾಲೆಯ 10ನೇ ವರ್ಗದ ವಿದ್ಯಾರ್ಥಿಗಳ ಮೇಲೆ ವಿಶೇಷ ಗಮನ ಹರಿಸುತ್ತಿದ್ದಾರೆ.  

  ಪ್ರತಿ ದಿನ ಶಾಲಾವಧಿ ಮುಗಿದ ಬಳಿಕ ಹಲವು ದಿನಗಳಿಂದ ಶಾಲೆಯ 295 ಜನ 10ನೇ ತರಗತಿ ವಿದ್ಯಾರ್ಥಿಗಳ ಮನೆ ಮನೆಗೆ ತೆರಳಿ ಪಠ್ಯದ ವಿಷಯದಲ್ಲಿರುವ ಕಠಿಣ ಪಾಠ ಮತ್ತು ಮಕ್ಕಳ ಮುಂದಿನ ಕನಸು, ಕಲಿಕೆಗೆ ಈಗ ಬೇಕಾದ ಸಮಸ್ಯೆಗೆ ಪರಿಹಾರ, ಪರೀಕ್ಷೆ ಬರೆಯುವ ವಿಧಾನ, ಪರೀಕ್ಷೆ ಪ್ರಯುಕ್ತ ತಮ್ಮ ಮಕ್ಕಳ ಮೇಲೆ ಪಾಲಕರು ವಿಶೇಷ ಗಮನ ಹರಿಸುವಂತೆ ಸಲಹೆ ಸೂಚನೆ ನೀಡಿ, ವಿದ್ಯಾರ್ಥಿಗಳು ಓದುವಂತೆ ಪ್ರೇರಪಿಸುತ್ತಿದ್ದಾರೆ. 

ಬಾಕ್ಸ್‌ ಐಟಮ್‌: ಶಾಲಾ ಮಕ್ಕಳ ಕಲಿಕೆ ಮತ್ತು ಸಮಸ್ಯೆಗೆ ಸ್ಪಂದನೆ: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪಾಠ-ಪ್ರವಚನ ಸೇರಿದಂತೆ ಹತ್ತು ಹಲವಾರು ವಿಷಯಗಳ ಕುರಿತು ಹೆಚ್ಚಿನ ಗಮನ ಕೊಡುವುದಲ್ಲದೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬಗ್ಗೆ ಮಕ್ಕಳಲ್ಲಿ ಅರಿವು, ಪರೀಕ್ಷೆಯ ಭಯ ಮುಕ್ತ ವಾತಾವರಣ ನಿರ್ಮಾಣ, ಮಕ್ಕಳ ಕಲಿಕೆಗೆ ಬೇಕಾದ ಪಾಠೋಪಕರಣಗಳ ನಿಜ ಸಮಸ್ಯೆಗಳನ್ನು ಅರಿತು ಅಂತ ವಿದ್ಯಾರ್ಥಿಗಳಿಗೆ ಸ್ಥಳೀಯ ಶಿಕ್ಷಣ ಪ್ರೇಮಿಗಳ ಮೂಲಕ ಸಹಾಯ, ಸಹಕಾರ ಪೂರೈಸಲಾಗುತ್ತಿದೆ. ಎಂದು ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ತಿಳಿಸಿದ್ದಾರೆ. 

“ಹತ್ತರ ಸಾಧಕರ ಹತ್ತಿರ ಶಾಲೆಯ ಮುಖ್ಯೋಪಾಧ್ಯಯ ಎಂಬ ವಿನೂತನ ಕಾರ್ಯಕ್ರಮ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ವಾರ್ಷಿಕ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಪ್ರೇರಣಾ ಪೂರಕವಾಗಿದೆ. 10ನೇ ವರ್ಗದ ವಿದ್ಯಾರ್ಥಿಗಳ ಮನೆಗೆ ಮುಖ್ಯೋಪಾಧ್ಯರು, ಶಾಲಾ ಶಿಕ್ಷಕರು ಹೊಗುವುದರಿಂದ ಮಕ್ಕಳ ಕಲಿಕೆಗೆ ಮತ್ತಷ್ಟು ಪ್ರೇರಣೆ ಜೊತೆಗೆ ಕುಟುಂಬದ ನಿಜ ಸ್ಥಿತಿ-ಗತಿ, ಸಮಸ್ಯಗಳು ಮನವರಿಕೆಯಾಗುತ್ತವೆ. ವಿದ್ಯಾರ್ಥಿ, ಪಾಲಕರು ಹಾಗೂ ಶಾಲಾ ಶಿಕ್ಷಕರ ನಡುವಿನ ಅವಿನಾಭಾವ ಸಂಬಂಧವೂ ಸಹ ಬೆಸೆಯುತ್ತದೆ. * ಅಜೀತ ಮನ್ನಿಕೇರಿ. ಬಿಇಒ ಮೂಡಲಗಿ ವಲಯ. 

“ವಿದ್ಯಾರ್ಥಿಗಳ ಜೀವನದಲ್ಲಿ 10ನೇ ತರಗತಿ ಬಹುಮುಖ್ಯವಾದ ಘಟ್ಟ. ವಿದ್ಯಾರ್ಥಿಗಳಿಗೆ ಈ ವಿನೂತನ ವಿಶೇಷ ಕಾರ್ಯಕ್ರಮದ ಮೂಲಕ ಕಲಿಕೆಗೆ ಪ್ರೇರಣೆ ನೀಡುತ್ತಿರುವ ಸ್ಥಳೀಯ ಪ್ರೌಢ ಶಾಲೆಯ ಮುಖ್ಯೋಪಾಧ್ಯಯರ ಸೇವೆ ಶ್ಲಾಘನೀಯವಾಗಿದೆ. * ರಾಮಪ್ಪ ನೀಲಣ್ಣವರ. ಅಧ್ಯಕ್ಷರು ಎಸ್‌ಡಿಎಮ್‌ಸಿ ವಿವಿಡಿ ಸ.ಪ್ರೌ.ಶಾಲೆ ಬೆಟಗೇರಿ, ತಾ.ಗೋಕಾಕ.