ಪಟ್ಟಣದಲ್ಲಿ ವಿಜೃಂಭಣೆಯ ಡಾ. ಅಂಬೇಡ್ಕರ್ ಜಯಂತಿ

Dr. Ambedkar Jayanti celebrated in the town

ಪಟ್ಟಣದಲ್ಲಿ ವಿಜೃಂಭಣೆಯ ಡಾ. ಅಂಬೇಡ್ಕರ್ ಜಯಂತಿ  

ತಾಳಿಕೋಟಿ 14: ಭಾರತ ರತ್ನ, ಸಂವಿಧಾನ ಶಿಲ್ಪಿ, ಡಾ.ಬಿ.ಆರ್‌.ಅಂಬೇಡ್ಕರ್ ಅವರ 134 ನೇ ಜಯಂತೋತ್ಸವವನ್ನು ತಾಲೂಕ ಆಡಳಿತ, ತಾಲೂಕ ಪಂಚಾಯತ್, ಪುರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಸೋಮವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು.  

ಜಯಂತಿ ಅಂಗವಾಗಿ ಬೆಳಿಗ್ಗೆ 10 ಗಂಟೆಗೆ ಪಟ್ಟಣದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ವೃತ್ತದಲ್ಲಿರುವ ಅವರ ಮೂರ್ತಿಗೆ ತಾಲೂಕಾಡಳಿತದ ವತಿಯಿಂದ ಪುಷ್ಪ ನಮನ ಸಲ್ಲಿಸಲಾಯಿತು. ನಂತರ ನಡೆದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರದ ಭವ್ಯ ಮೆರವಣಿಗೆ ಕಾರ್ಯಕ್ರಮಕ್ಕೆ ತಹಸಿಲ್ದಾರ್ ಡಾ.ವಿನಯಾ ಹೂಗಾರ ಚಾಲನೆ ನೀಡಿದರು.  

ಅಲ್ಲಿಂದ ಆರಂಭವಾದ ಮೆರವಣಿಗೆಯಲ್ಲಿ ಡಿಜೆ ಸೌಂಡ್ಸ್‌ ನಲ್ಲಿ ಹಾಕಿದ ಬಾಬಾ ಸಾಹೇಬರ ಜೀವನಗಾತೆ ಹಾಡುಗಳಿಗೆ ಯುವಕರು ಸ್ಟೆಪ್ ಹಾಕಿ ಬಾಬಾ ಸಾಹೇಬರ ಮೇಲಿರುವ ತಮ್ಮ ಅಭಿಮಾನವನ್ನು ಮೆರೆದರು. ಮೆರವಣಿಗೆ ಉದ್ಧಕ್ಕೂ ಬಾಬಾ ಸಾಹೇಬರ ಉದ್ಘೋಷಣೆಗಳು ನಾಲ್ಕು ದಿಕ್ಕುಗಳಲ್ಲೂ ಮೊಳಗಿದವು. ಮೆರವಣಿಗೆ ಅಂಬೇಡ್ಕರ್ ಸರ್ಕಲ್ ದಿಂದ ಆರಂಭವಾಗಿ ಅಂಬಾಭವಾನಿ ಮಂದಿರ, ಕತ್ರಿ ಬಜಾರ್, ಶಿವಾಜಿ ಸರ್ಕಲ್, ಮಹಾರಾಣಾ ಪ್ರತಾಪ್ ಸಿಂಹ ಸರ್ಕಲ್, ಬಸ್ ನಿಲ್ದಾಣ ಮಾರ್ಗವಾಗಿ ಶ್ರೀ ಬಸವೇಶ್ವರ ವೃತ್ತ ಅಲ್ಲಿಂದ ಮತ್ತೆ ಅಂಬೇಡ್ಕರ್ ಸರ್ಕಲ್ಗೆ ತಲುಪಿತು. ನಂತರ ಅಲ್ಲಿಯೇ ವೇದಿಕೆ ಕಾರ್ಯಕ್ರಮ ಜರುಗಿತು.  

ಮೆರವಣಿಗೆಯಲ್ಲಿ ಸಮಾಜದ ಮುಖಂಡರಾದ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಎಸ್‌.ಬಿ.ಕಟ್ಟಿಮನಿ, ಮುತ್ತಪ್ಪ ಚಮಲಾಪೂರ, ಬಸವರಾಜ ಕಟ್ಟಿಮನಿ, ಜೈಭೀಮ್ ಮುತ್ತಗಿ, ದೇವೇಂದ್ರ ಹಾದಿಮನಿ, ಪರಶುರಾಮ ಕಟ್ಟಿಮನಿ, ಮಹೇಶ ಚಲವಾದಿ, ರಾಘು ಬಿಜಾಪುರ, ಪುರಸಭೆ ಮುಖ್ಯಾಧಿಕಾರಿ ಮೋಹನ ಜಾಧವ, ತಾಪಂ ಇಒ ನಿಂಗಪ್ಪ ಮಸಳಿ, ಸಮಾಜ ಕಲ್ಯಾಣ ಇಲಾಖೆ ಕಾರ್ಯಾಲಯ ಅಧೀಕ್ಷಕ ಶಿವಲಿಂಗ ಹಚಡದ, ಪಿಎಸ್‌ಐ ರಾಮನಗೌಡ ಸಂಕನಾಳ, ಸಿಆರಿ​‍್ಪ ರಾಜು ವಿಜಾಪುರ, ಬಿ.ಆರಿ​‍್ಸ. ಕಾಶಿನಾಥ್ ಸಜ್ಜನ, ಸಿ.ಆರಿ​‍್ಸ. ಇಬ್ರಾಹಿಂ ಆಲಮೇಲ ಹಾಗೂ ತಾಲೂಕ ಮಟ್ಟದ ಅಧಿಕಾರಿಗಳು, ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಸಮಾಜದ ಗಣ್ಯರು ಹಿರಿಯರು ಇದ್ದರು.