ಡಾ. ಪ್ರಿಯಾಂಕ ರೆಡ್ಡಿ ಅತ್ಯಾಚಾರ, ಕೊಲೆ ಖಂಡಿಸಿ ಪ್ರತಿಭಟನೆ
ಬಳ್ಳಾರಿ: ಇಂದು ಬಳ್ಳಾರಿಯಲ್ಲಿ ಎಐಎಮ್ಎಸ್ಎಸ್ ಮತ್ತು ಎಐಡಿಎಸ್ಓ ಜಿಲ್ಲಾ ಸಮಿತಿಗಳ ಸಹಯೋಗದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಎಐಎಮ್ಎಸ್ಎಸ್ ನ ಜಿಲ್ಲಾಧ್ಯಕ್ಷರಾದ ಎ.ಶಾಂತಾರವರು ಈ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
ನಮ್ಮ ಸಮಾಜದಲ್ಲಿ ದಿನೇದಿನೇ ಇಂತಹ ಘನೆಗಳು ಹೆಚ್ಚಾಗುತ್ತಿವೆ. ಇದು ಸಕರ್ಾರಗಳ ಮತ್ತು ನ್ಯಾಯಾಲಯಗಳ ನಿರ್ಲಕ್ಷ್ಯತನವನ್ನು ಎತ್ತಿ ತೋರಿಸುತ್ತದೆ. ನಿರ್ಭಯಾ ಘಟನೆ ನಡೆದ ನಂತರ ಜಸ್ಟೀಸ್ ವಮರ್ಾ ರವರು ಆಯೋಗದ ಶಿಫಾರಸ್ಸು ಮಾಡಿದಂತಹ ಸಲಹೆಗಳನ್ನು ಇನ್ನೂ ಜಾರಿಗೊಳಿಸಿಲ್ಲ. ಅಪರಾಧಿಗಳಿಗೆ ಶಿಕ್ಷೆಯಾಗುತ್ತಿಲ್ಲ. ಇಂತಹ ಘಟನೆಗಳಿಂದ ನಮ್ಮ ಸಮಾಜ ಇನ್ನೂ ಅದೋಗತಿಗೆ ಹೋಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಂತರ ಮಾತನಾಡಿದ ಎಐಡಿಎಸ್ಓ ನ ಅಖಿಲ ಭಾರತ ಉಪಾಧ್ಯಕ್ಷರಾದ ಡಾ.ಪ್ರಮೋದ್ ರವರು ಮಾತನಾಡುತ್ತಾ.., 'ನಮ್ಮ ದೇಶದಲ್ಲಿ ಮಹಿಳೆಯರಿಗೆ ಭದ್ರತೆಯಿಲ್ಲ. ಅತ್ಯಾಚಾರ ನಡೆದ ನಂತರ ಆರೋಪಿಗಳಿಗೆ ರಕ್ಷಣೆ ಸಿಗುತ್ತಿದೆ. ಇದು ನಮ್ಮ ದೇಶದ ದುರಂತ. ಇಂತಹ ವ್ಯವಸ್ಥೆಯಲ್ಲಿ ನಮ್ಮ ಹೆಣ್ಣುಮಕ್ಕಳು ಬದುಕುತ್ತಿದ್ದಾರೆ. ಇಂತಹ ಕೊಳೆತ ಸಮಾಜವನ್ನು ಕಿತ್ತುಹಾಕಿ ಮಹಿಳೆಯರನ್ನು ಗೌರವಿಸುವಂತಹ ಸಮಾಜವನ್ನು ನಾವೆಲ್ಲರೂ ಸೇರಿ ಕಟ್ಟಬೇಕಿದೆ' ಎಂದು ಕರೆ ನೀಡಿದರು.
ನಂತರ ಎಐಡಿಎಸ್ಓ ನ ಜಿಲ್ಲಾಧ್ಯಕ್ಷರಾದ ಸುರೇಶ್.ಜಿ ರವರು ಮಾತನಾಡಿದರು. 'ಯುವಕರ ನೈತಿಕ ಬೆನ್ನೆಲುಬನ್ನು ಮುರಿಯುವ ದುರುದ್ದೇಶವನ್ನಿಟ್ಟುಕೊಂಡ ಸಕರ್ಾರಗಳು ಅಶ್ಲೀಲ ಸಿನಿಮಾ-ಸಾಹಿತ್ಯವನ್ನು ಹರಿಬಿಡುತ್ತಿವೆ. ಈ ಸಕರ್ಾರಗಳೇ ಇಂತಹ ಘಟನೆಗಳಿಗೆ ನೇರ ಹೊಣೆ. ಬರೀ ಚುನಾವಣಾ ರಾಜಕೀಯದಲ್ಲಿ ಮುಳುಗಿರುವ ಸಕರ್ಾರಗಳು ಮಹಿಳೆಯರಿಗೆ ಭದ್ರತೆ ನೀಡುವಲ್ಲಿ ವಿಫಲವಾಗಿವೆ' ಎಂದರು.
ಈ ಪ್ರತಿಭಟನೆಯ ಅಧ್ಯಕ್ಷತೆಯನ್ನು ಎಐಎಮ್ಎಸ್ಎಸ್ ನ ಜಿಲ್ಲಾ ಕಾರ್ಯದಶರ್ಿ ಈಶ್ವರಿ.ಕೆ.ಎಮ್ ವಹಿಸಿದ್ದರು. ಎಐಎಮ್ಎಸ್ಎಸ್ನ ಸದಸ್ಯರಾದ ಪದ್ಮ, ವಿದ್ಯಾ, ಎಐಡಿಎಸ್ಓ ನ ಗುರಳ್ಳಿ ರಾಜ, ರವಿಕಿರಣ್.ಜೆ.ಪಿ, ಕೆ.ಈರಣ್ಣ, ಶಾಂತಿ, ಪ್ರಮೋದ್, ಸಿದ್ದು, ಮಣಿಕಂಠ, ಭರತ್, ಶಿವು ಮತ್ತಿತರರು ಹಾಗೂ ನೂರಾರು ವಿದ್ಯಾಥರ್ಿಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.