ಲೋಕದರ್ಶನ ವರದಿ
ಧಾರವಾಡ 21 : ಇಂದು ಅಗಲಿದ ಲಿಂಗಪೂಜಾ ತಪೋನಿಷ್ಠರಾಗಿದ್ದ ಸಿದ್ಧಗಂಗಾಕ್ಷೇತ್ರದ ಶತಾಯುಷಿ ಡಾ.ಶ್ರೀಶಿವಕುಮಾರ ಮಹಾಸ್ವಾಮಿಗಳು 2002ರಲ್ಲಿ ನಗರದ ಶಿವಗಿರಿಯಲ್ಲಿರುವ ಹಿರೇಮಠ ಅವರ ನೂತನ ಗೃಹಪ್ರವೇಶ ಸಮಾರಂಭಕ್ಕೆ ಆಗಮಿಸಿದ್ದರು. ಅದೇ ಸಂದರ್ಭದಲ್ಲಿ ಕೆಲಗೇರಿ ಮುಖ್ಯ ರಸ್ತೆಗೆ ಹತ್ತಿರದಲ್ಲಿರುವ ಮಹಾಂತೇಶನಗರದಲ್ಲಿರುವ ಹಿರಿಯ ವರ್ತಕರಾದ ರವೀಂದ್ರ ವಸ್ತ್ರದ ಹಾಗೂ ಬಸವರಾಜ ವಸ್ತ್ರದ ಅವರ ನಿವಾಸಕ್ಕೆ ಆಗಮಿಸಿ ತಮ್ಮ ಪಾದಪೂಜೆಗೆ ಅವಕಾಶ ಒದಗಿಸಿ ನೆರೆದ ಭಕ್ತ ಸಮೂಹಕ್ಕೆ ಆಶೀವರ್ಾದ ನೀಡಿದ್ದರು.
"ಬಹಳ ವರುಷಗಳಿಂದ ಸಿದ್ಧಗಂಗೆಯ ಡಾ.ಶಿವಕುಮಾರ ಸ್ವಾಮಿಗಳವರನ್ನು ಧಾರವಾಡದ ತಮ್ಮ ನಿವಾಸಕ್ಕೆ ಕರೆಯಿಸಬೇಕೆಂದು ಮಾಡಿಕೊಂಡಿದ್ದ ಭಕ್ತಿಯ ಸಂಕಲ್ಪ ಪವಾಡ ಸದೃಶವಾಗಿ ತನ್ನಿಂತಾನೇ ನೆರವೇರಿತು.
ನಮ್ಮ ಭಕ್ತಿಯ ಪ್ರಾರ್ಥನೆ ಪೂಜ್ಯರಿಗೆ ನಿವೇದನೆಯಾಯಿತೋ ಏನೋ, ಶಿವಗಿರಿಯಲ್ಲಿರುವ ಹಿರೇಮಠ ಅವರ ನೂತನ ಗೃಹಪ್ರವೇಶ ಸಮಾರಂಭಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಪಾದಪೂಜೆಗಾಗಿ ಮನೆಗೆ ದಯಮಾಡಿಸಬೆಕೆಂದು ಅರಿಕೆಮಾಡಿಕೊಂಡಾಗ ಪ್ರೀತಿಯಿಂದ ಒಪ್ಪಿಕೊಂಡು ನಮ್ಮ ಮನೆಗೂ ಆಗಮಿಸಿ ನಮ್ಮ ಭಕ್ತಿಸೇವೆಯನ್ನು ಸ್ವೀಕರಿಸಿದ್ದರು. ಇದರನಂತರ ಶ್ರೀಗಳು ಧಾರವಾಡಕ್ಕೆ ಬರಲೇ ಇಲ್ಲ." ಎಂದು ಹಿರಿಯ ವರ್ತಕ ರವೀಂದ್ರ ವಸ್ತ್ರದ ಗದ್ಗತಿತರಾಗಿ ಡಾ.ಶಿವಕುಮಾರ ಶ್ರೀಗಳ ಮುಕ್ತ ಮನಸ್ಥಿತಿಯನ್ನು ಸ್ಮರಿಸಿಕೊಂಡರು.
ಧಾರವಾಡದ ಕೆಲಗೇರಿ ಮುಖ್ಯ ರಸ್ತೆಗೆ ಹತ್ತಿರದಲ್ಲಿರುವ ಮಹಾಂತೇಶನಗರದಲ್ಲಿರುವ ಹಿರಿಯ ವರ್ತಕರಾದ ರವೀಂದ್ರ ವಸ್ತ್ರದ ಹಾಗೂ ಬಸವರಾಜ ವಸ್ತ್ರದ ಅವರ ನಿವಾಸಕ್ಕೆ 2002ರಲ್ಲಿ ಸಿದ್ಧಗಂಗಾಕ್ಷೇತ್ರದ ಶತಾಯುಷಿ ಡಾ.ಶ್ರೀಶಿವಕುಮಾರ ಮಹಾಸ್ವಾಮಿಗಳು ಆಗಮಿಸಿದ್ದರು.