ಕಾರ್ಮಿಕರ ಸೌಲಭ್ಯಗಳ ಮಾಹಿತಿ ಹೊಂದಿದ ಎಲ್ ಇಡಿ ಪ್ರಚಾರ ವಾಹನಕ್ಕೆ ಚಾಲನೆ
ಗದಗ 12: ಕಾರ್ಮಿಕ ಇಲಾಖೆ ಹಾಗೂ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಮಾಹಿತಿ ಶಿಕ್ಷಣ ಮತ್ತು ಸಂವಹನ ಚಟುವಟಿಕೆಗಳಡಿಯಲ್ಲಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯ ಸೌಲಭ್ಯಗಳು ಹಾಗೂ ಸಂಸ್ಧೆಯ ನೋಂದಣಿ ಹಾಗೂ ಸುಂಕ ಪಾವತಿ ವಿಧಾನ, ಕರ್ನಾಟಕ ರಾಜ್ಯ ಅಸಂಘಟಿದ ಸಮಾಜಿಕ ಭದ್ರತಾ ಮಂಡಳಿಯ ಯೋಜನೆಗಳು, ಬಾಲ ಕಾರ್ಮಿಕ ಹಾಗೂ ಕೀಶೂರ ಕಾರ್ಮಿಕ ಪಧ್ಧತಿ ನಿಷೇಧ ಬಗ್ಗೆ ಹಾಗೂ ಕಾರ್ಮಿಕ ಇಲಾಖೆಯಿಂದ ಅನುಷ್ಠಾನವಾಗುತ್ತಿರುವ ಯೋಜನೆಗಳ ಬಗ್ಗೆ 6 ದಿನಳವರೆಗೆ ಗದಗ ಜಿಲ್ಲೆಯಾಂದ್ಯತ ಎಲ್ ಇ ಡಿ ಪ್ರಚಾರ ವಾಹನಕ್ಕೆ ಮಾನ್ಯ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಿ ಎಸ್ ಶಿವನಗೌಡ್ರ ಹಾಗೂ ಕಾರ್ಮಿಕ ಅಧಿಕಾರಿಗಳಾದ ಶ್ರೀಶೈಲ ಸೋಮನಕಟ್ಟಿರವರು ಜಿಲ್ಲಾಡಳಿತ ಭವನದಲ್ಲಿ ಬುಧವಾರ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕಾರ್ಮಿಕ ನೀರೀಕ್ಷಕರಾದ ಉಮೇಶ ಹುಲ್ಲಣ್ಣವರ ನೀರೀಕ್ಷಕರು ಗದಗ 2 ನೆ ವೃತ್ತ ಗದಗ, ಕುಮಾರಿ ಸುಷ್ಮಾ ಕಾರ್ಮಿಕ ನೀರೀಕ್ಷಕರು ಗದಗ 1 ನೆ ವೃತ್ತ ಗದಗ, ಎಕ್ಸಿಕ್ಯೂಟಿವ್ ಫಕ್ಕೀರ್ಪ ಹಡಗಲಿ, ಸಂದೇಶ ಪಾಟೀಲ ಯೋಜನ ನಿರ್ದೇಶಕರು ಬಾಲ ಕಾರ್ಮಿಕ ಯೋಜನೆ ಹಾಗೂ ಕಾರ್ಮಿಕ ಇಲಾಖೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.