ನಮ್ಮ ಕ್ಲಿನಿಕನಲ್ಲಿ ಸುಲಭವಾಗಿ ವೈದ್ಯಕೀಯ ಸೌಲಭ್ಯ : ಶಾಸಕ ಪಠಾಣ
ಶಿಗ್ಗಾವಿ 25 : ಬಡವರು, ದಿನಗೂಲಿ ಕಾರ್ಮಿಕರಿಗೆ ಹಾಗೂ ದುರ್ಬಲ ವರ್ಗಗಳಿಗೆ ಸುಲಭವಾಗಿ ವೈದ್ಯಕೀಯ ಸೌಲಭ್ಯ ದೊರಕುವ ನಿಟ್ಟಿನಲ್ಲಿ ನಮ್ಮ ಕ್ಲಿನಿಕ್ ಸೇವೆ ಸಲ್ಲಿಸುತ್ತದೆ ಎಂದು ಶಾಸಕ ಯಾಶೀರಖಾನ ಪಠಾಣ ಹೇಳಿದರು. ತಾಲೂಕಿನ ಗಂಗೆಬಾವಿಯ ಕೆ.ಎಸ್.ಆರ್.ಪಿ.10ನೇ ಪಡೆಯ ನಮ್ಮ ಕ್ಲಿನಿಕ್ ಉದ್ಘಾಟಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಕೆ.ಎಸ್.ಆರ್.ಪಿ ಪಡೆಯ ಸೇವೆ ಅಪಾರವಾಗಿದೆ ಆ ನಿಟ್ಟಿನಲ್ಲಿ ಅವರ ಹಾಗೂ ಕುಟುಂಬಸ್ಥರ ಆರೋಗ್ಯವು ಕೂಡ ಮುಖ್ಯವಾಗಿದ್ದು ಅಲ್ಲದೇರೋಗಿಗಳಿಗೆ ಪ್ರಾಥಮಿಕ ಹಂತದಲ್ಲಿಯೇ ಉತ್ತಮ ಚಿಕಿತ್ಸೆ ಲಭಿಸುವ ನಿಟ್ಟಿನಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಕಾರ್ಯನಿರ್ವಹಿಸುವದು ನಮ್ಮ ಕ್ಲಿನಿಕ್ ನ ಉದ್ದೇಶವಾಗಿದೆ ಎಂದರು.
ಶಾಸಕ ಯಾಶೀರಖಾನ ಪಠಾಣರನ್ನು ಕೆ.ಎಸ್.ಅರ್.ಪಿ ಕಮಾಂಡೆಂಟ್ ಎನ್.ಬಿ.ಮೆಳ್ಳಾಗಟ್ಟಿ ಗೌರವಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಕಮಾಂಡೆಂಟ್ ನಾಗನಗೌಡ ಬಿ ಮೆಳ್ಳಾಗಟ್ಟಿ, ಡೆಪೋಟಿ ಕಮಾಂಡೆಂಟ್ ಮಂಜಪ್ಪ ಕೋಟಿಹಾಳ, ತಾಲೂಕ ಆರೋಗ್ಯ ಅಧಿಕಾರಿ, ಡಾ. ಸತೀಶ್ ಎ ಆರ್, ಗುಡ್ಡಪ್ಪ ಜಲದಿ,ಅಣ್ಣಪ್ಪ ಲಮಾಣಿ, ಶಂಭುಲಿಂಗಪ್ಪ ಆಜೂರ, ಮಹಾಂತೇಶ ಸಾಲಿ, ಜಿಲ್ಲಾ ಸಂಯೋಜಕ ಸಂತೋಷ್ ಹೊಸಮನಿ, ಆಡಳಿತ ವೈದ್ಯಾಧಿಕಾರಿ ಡಾ. ರಂಜಿತಾ, ಡಾ. ಮಲ್ಲೇಶ ಟಿ, ಅಶೋಕ ಬಿ ಅಮಾತಣ್ಣವರ, ರಾಮನಗೌಡ ಪಾಟೀಲ, ಗುರುನಾಥ ಹಾಗಲೂರ, ಗುರವ್ವ ಸಿಸ್ಟರ್ ಸೇರಿದಂತೆ ಆಶಾ ಕಾರ್ಯಕರ್ತೆಯರು ಆರೋಗ್ಯ ಮತ್ತು ಪೋಲಿಸ ಪಡೆ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು