ಸಾರ್ವಜನಿಕರ ಕ್ರೀಡಾ ಮನೋಭಾವಕ್ಕೆ ಉತ್ತೇಜನ: ಡಿ.ಸಿ ಜಾನಕಿ

Encouragement of sportsmanship among the public: DC Janaki

ಸಾರ್ವಜನಿಕರ ಕ್ರೀಡಾ ಮನೋಭಾವಕ್ಕೆ ಉತ್ತೇಜನ: ಡಿ.ಸಿ ಜಾನಕಿ  

ಬೀಳಗಿ, 25 : ರಾಷ್ಟ್ರ ಕ್ರೀಡೆಯನ್ನು ಉತ್ತೇಜಿಸುವ ಸಲುವಾಗಿ ಕಬಡ್ಡಿಯಂತ ಆಟಗಳನ್ನು ಆಯೋಜನೆ ಮಾಡಿರುವ ಮಾಜಿ ಸಚಿವ ಎಸ್‌.ಆರ್‌.ಪಾಟೀಲರು ಕ್ರೀಡಾಭಿಮಾನಿಗಳಿಗೆ ಮತ್ತು ಪ್ರೇಕ್ಷಕರಿಗೆ ಹಾಗೂ ಸಾರ್ವಜನಿಕರಿಗೆ ಕ್ರೀಡಾ ಮನೋಭಾವ ಉತ್ತೇಜನ ನೀಡಿದಂತಾಗಿದೆ ಎಂದು ಬಾಗಲಕೋಟೆ ಜಿಲ್ಲಾಧಿಕಾರಿ ಜಾನಕಿ ಕೆ.ಎನ್ ಹೇಳಿದರು. 

    ಪಟ್ಟಣದ ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆ ಆವರಣದಲ್ಲಿ, ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್ ರಜತ ಮಹೋತ್ಸವ ನಿಮಿತ್ಯವಾಗಿ ಹಮ್ಮಿಕೊಂಡ ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾವಳಿ ಬಹುಮಾನ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 

  ಕ್ರೀಡಾಕೂಟ ಹಮ್ಮಿಕೊಳ್ಳುವುದು ಒಂದು ಉತ್ತಮ ಪರಂಪರೆ, ಇಂತಹ ಕಾರ್ಯಕ್ರಮಗಳು ಪ್ರತಿವರ್ಷ ನಡೆದರೆ ಮಾತ್ರ ಕ್ರೀಡಾಭಿಮಾನಿಗಳಿಗೆ ಒಂದು ಶಕ್ತಿ ನೀಡಿದಂತೆ, ಈ ನಿಟ್ಟಿನಲ್ಲಿ ಬೀಳಗಿ ಪಟ್ಟಣ ಬ್ಯಾಂಕಿನ ಅಧ್ಯಕ್ಷರಾದ ಎಸ್‌.ಆರ್‌.ಪಾಟೀಲರು ಬ್ಯಾಂಕಿನ ರಜತ ಮಹೋತ್ಸವ ನಿಮಿತ್ಯ ಇಂತಹ ಸಮಾಜ ಮುಖಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದ್ದು ಶ್ಲಾಘನೀಯವಾಗಿದೆ ಎಂದರು.   

   ನಾವು ಸರಕಾರದಿಂದ ಆಯೋಜನೆ ಮಾಡುವ ಕಾರ್ಯಕ್ರಮದಲ್ಲಿ ಯಾವದಾದರೊಂದು ಕೊರತೆ ಎದ್ದು ಕಾಣುತ್ತದೆ. ಆದರೆ ಮಾಜಿ ಸಚಿವರಾದ ಎಸ್‌.ಆರ್‌.ಪಾಟೀಲರು ಮತ್ತು ಆವರ ತಂಡದರು ಆಯೋಜನೆ ಮಾಡಿರುವ ಕಾರ್ಯಕ್ರಮವು ಅಚ್ಚುಕಟ್ಟಾಗಿದೆ ಎಂದರು. 

  ಬಾಗಲಕೋಟೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಮಾತನಾಡಿ, ಮಾಜಿ ಸಚಿವರಾದ ಎಸ್‌.ಆರ್‌.ಪಾಟೀಲರು ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕಿನ ರಜತ ಮಹೋತ್ಸವ ಕಾರ್ಯಕ್ರಮದ ನಿಮಿತ್ಯವಾಗಿ ಬೀಳಗಿ ಪಟ್ಟಣದಲ್ಲಿ ರಾಷ್ಟ್ರ ಮಟ್ಟದ ಪುರುಷರ ಹಾಗೂ ಮಹಿಳೆಯ ಕಬಡ್ಡಿ ಪಂದ್ಯಾವಳಿಗೆ ಏರ​‍್ಾಡು ಮಾಡುವ ಮೂಲಕ ಕ್ರೀಡಾಭಿಮಾನಿಗಳಿಗೆ ಒಂದು ಅವಕಾಶ ಕಲ್ಪಿಸಿದ್ದು ಅವರ ಕಾರ್ಯ ಮೆಚ್ಚುವಂತದ್ದು. ಅಚ್ಚುಕಟ್ಟಾಗಿ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಿ ಕ್ರೀಡಾಕೂಟ ಆಯೋಜನೆ ಮಾಡಿದ್ದಾರೆ ಇದಕ್ಕೆ ಈ ಕಾರ್ಯಕ್ರಮವೇ ಸಾಕ್ಷೀಯಾಗಿದೆ ಎಂದರು. 

   ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷರಾದ ಎಸ್‌.ಆರ್‌.ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕಿನವರು ಜಿಲ್ಲೆಯಲ್ಲಿ ಪ್ರಥಮವಾಗಿ ಬೀಳಗಿ ಪಟ್ಟಣದಲ್ಲಿ ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾವಳಿ ಆಯೋಜಿಸಿದ್ದಾರೆ. ರಾಷ್ಟ್ರದ ಮೂಲೆ ಮೂಲೆಯಿಂದ ಆಗಮಿಸಿದ ಕ್ರೀಡಾಪಟುಗಳಿಗೆ ಹಾಗೂ ವೀಕ್ಷಣೆ ಮಾಡಲು ಬಂದ ಸಾರ್ವಜನಿಕರಿಗೆ ಮತ್ತು ಕಬಡ್ಡಿ ಪಂದ್ಯಾವಳಿ ನಡೆಸಿಕೊಡಲು ಬಂದ ನಿರ್ಣಾಯಕರಿಗೆ, ಬೀಳಗಿ ಪಟ್ಟಣ ಬ್ಯಾಂಕಿನ ಮತ್ತು ಸ್ವಾಮಿ ವಿವೇಕಾನಂದ ಸಮೂಹ ಸಂಸ್ಥೆಯ ಎಲ್ಲ ಸಿಬ್ಬಂದಿ ವರ್ಗದವರಿಗೆ ಕೃತಜ್ಞತೆ ಸಲ್ಲಿಸಿದರು. 

   ಜಿಲ್ಲಾ ಪಂಚಾಯತ ಸಿಒಓ ಶಶಿಧರ ಕೂರೆರ, ಎಸ್‌.ಆರ್‌.ಪಾಟೀಲ ಶಿಕ್ಷಣ ಪ್ರತಿಷ್ಠಾನ ಸಂಸ್ಥೆಯ ಕಾರ್ಯದರ್ಶಿ ಎಂ.ಎನ್‌.ಪಾಟೀಲ, ಬ್ಯಾಂಕಿನ ಉಪಾಧ್ಯಕ್ಷ ಸತ್ಯಪ್ಪ ಮೇಲ್ನಾಡ, ಪ್ರಧಾನ ವ್ಯವಸ್ಥಾಪಕ ಎಲ್‌.ಬಿ.ಕುರ್ತಕೋಟಿ, ಉಪಪ್ರಧಾನ ವ್ಯವಸ್ಥಾಪಕ ಜಿ.ಎಸ್‌.ಬನ್ನಟ್ಟಿ, ಸಹಕಾರ ಸಂಘಗಳ ಉಪ ನಿಬಂಧಕ ದಾನಯ್ಯ ಹಿರೇಮಠ, ಕೆ.ಎಸ್‌.ಪತ್ರಿ, ಹೇಮಾದ್ರಿ ಕೊಪ್ಪಳ, ಕೆ.ಎಚ್‌.ಬೀಳಗಿ ಇತರರು ಇದ್ದರು. 

  ಮಹಿಳಾ ವಿಭಾಗ: ಹರಿಯಾಣ ಗುರುಕುಲ ಕಬಡ್ಡಿ ತಂಡ ಪ್ರಥಮ. ಸೆಂಟ್ರಲ್ ರೈಲ್ವೆ ದ್ವಿತೀಯ. ಪುಣೆ ಧರ್ಮವೀರ ತಂಡ  ಹಾಗೂ ಬಾಗಲಕೋಟೆ ವಿಜಯ ವಾರಿಯರ​‍್ಸ‌ ಎಸ್‌.ಆರ್‌.ಪಾಟೀಲ ತಂಡ ತೃತೀಯ ಸ್ಥಾನ ಪಡೆದುಕೊಂಡಿವೆ. 

ಪುರುಷರ ವಿಭಾಗ: ಗ್ರೀನ್ ಆರ್ಮಿ ತಂಡ ಪ್ರಥಮ. ಪುಣೆ ಡಾ.ಡಿ.ವಾಯ್ ಪಾಟೀಲ ತಂಡ ದ್ವಿತೀಯ. ದೆಹಲಿ ಚಂದವಲ್ಲಿ ಹಾಗೂ ಬೆಂಗಳೂರು ಆರ್ಬನ್ ಡಿಸ್ಟಿಕ್ ತೃತೀಯ ಸ್ಥಾನ ಪಡೆದುಕೊಂಡಿವೆ.