ಗ್ರಾಮೀಣ ಪ್ರದೇಶದ ಮಕ್ಕಳಿಗೆ ಶಿಕ್ಷಣ ನೀಡುವುದು ಪ್ರಶಂಸನೀಯ ಕಾರ್ಯ: ಗೆಹ್ಲೋಟ
ಬಳ್ಳಾರಿ 17: ಭಾರತದ ಭವಿಷ್ಯತ್ತಿಗೆ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಶಿಕ್ಷಣ ನೀಡುವ ಕಾರ್ಯ ಪ್ರಶಂಸನೀಯ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ ಹೇಳಿದ್ದಾರೆ. ಅವರು ೆ ಬಳ್ಳಾರಿ ಜಿಲ್ಲೆ ಕುರುಗೋಡು ತಾಲೂಕಿನ ದಮ್ಮೂರಿನ ಎಸ್.ಬಿ.ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ಸ್ ನ ವಾರ್ಷಿಕ ಮಹೋತ್ಸವ ಮತ್ತು ಕಟ್ಟಡಗಳ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು.
ಶಿಕ್ಷಣ ವಿಷಯದಲ್ಲಿ ಭಾರತ ಪುರಾತನ ಕಾಲದಿಂದಲೂ ಮಹತ್ವ ಪಡೆದಿದೆ.ಖಗೋಳ ಶಾಸ್ತ್ರದಲ್ಲಿ ಭಾರತೀಯರ ಕೊಡುಗೆ ಮಹತ್ವದ್ದು, ತಕ್ಷ ಶಿಲ, ನಳಂದ ವಿವಿಗಳಿಂದ ನೀತಿ, ಅರ್ಥ, ರಾಜಕೀಯ ಮೊದಲಾದ ಶಾಸ್ತ್ರಗಳನ್ನು ಕಲಿಸಲಾಗುತ್ತಿತ್ತು. ಅಂತಹ ವಿವಿಗಳು ಪರಕೀಯರಿಂದ ನಾಶವಾಗಿದ್ದವು. ಪ್ರಧಾನಿಯವರು ನಳಂದ ವಿವಿಯನ್ನು ಪುನರ್ ನಿರ್ಮಿಸಿದ್ದಾರೆಂದರು. ದೇಶದ ಆರ್ಥಿಕ ಸ್ಥಿತಿ ವಿಶ್ವದಲ್ಲಿ ಐದನೇ ಸ್ಥಾನದಲ್ಲಿದ್ದು ಉತ್ತಮವಾಗಿದೆ ಮತ್ತಷ್ಡು ಸುಧಾರಣೆಯಾಗಬೇಕಿದೆ.
ಶಿಕ್ಷಣದಿಂದ ಮಾತ್ರ ವ್ಯಕ್ತಿ ವಿಕಾಸ ಸಾಧ್ಯ, ಶಿಕ್ಷಣ ಜೀವನದಲ್ಲಿ ಮಾನಿಸಿಕ ಮತ್ತು ಭದ್ಧಿಕ ವಿಕಾಸ ನೀಡಲಿದೆಂದರು. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ದೇಶದ ಹಲವು ರಾಜ್ಯಗಳಲ್ಲಿ ಜಾರಿಯಲ್ಲಿದೆ. ಕರ್ನಾಟಕದಲ್ಲೂ ಜಾರಿ ಇದೆ. ಮಾತೃಭಾಷೆಗಳಲ್ಲಿ ಶಿಕ್ಷಣ ನೀಡಬೇಕೆಂಬುದು ಸರಿಯಾದ ವಿಚಾರ. ಆಯಾ ರಾಜ್ಯಗಳಲ್ಲಿ ಎಲ್ಲಾ ರೀತಿಯ ಶಿಕ್ಷಣ ನೀಡಬೇಕಿದೆ.
ಇದಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿ ಅಡ್ಡಿಯಾಗದು ಎಂದರು. ಅಧುನಿಕ ಭಾರತದಲ್ಲಿ ವಿದ್ಯಾರ್ಥಿಗಳು ಕೇವಲ ಓದಿದರೆ ಅಷ್ಟೇ ಸಾಲದು ಕ್ರೀಡೆ ಮತ್ತಿತರ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಹೊಸ ಸಂಕಲ್ಪಗಳನ್ನು ಕೈಗೊಂಡು ಮುನ್ನಡೆಯಿರಿ ಈ ಶಿಕ್ಷಣ ಸಂಸ್ಥೆ ಭವಿಷ್ಯದಲ್ಲಿ ವಿವಿಯಾಗಲು ಎಲ್ಲಾ ರೀತಿಯ ಸಹಕಾರ ನೀಡಲಿದೆಂದರು. ಸಮಾರಂಭದಲ್ಲಿ ಶಾಸಕ ಗಾಲಿ ಜನಾರ್ಧನರೆಡ್ಡಿ ಮಾತನಾಡಿ, ಬೆಂಗಳೂರು ನಂತರ ಬಳ್ಳಾರಿ ಅಭಿವೃದ್ಧಿ ಜಿಲ್ಲೆಯನ್ನಾಗಿ ಮಾಡುವ ಕನಸಿತ್ತು. ಈ ದಿಶೆಯಲ್ಲಿ ಭವ್ಯ ಮತ್ತು ಶೇಖರ್ ಅವರು ಇಂತಹ ಗ್ರಾಮೀಣ ಪ್ರದೇಶದಲ್ಲಿ ಈ ಸಂಸ್ಥೆ ಆರಂಭಿಸಿ ಉತ್ತಮ ಶಿಕ್ಷಣ ನೀಡುತ್ತಿದ್ದಾರೆ.