ಕೊಪ್ಪಳ್ : ರಾಜ್ಯದಲ್ಲಿ ನರೇಗಾದಡಿ 12.5ಕೋಟಿ ಉದ್ಯೋಗ ಸೃಜನೆಗೆ ಪ್ರಯತ್ನ: ರಾಜ್ಯ ಗ್ರಾಮೀಣಾಭಿವೃದ್ಧಿ ಅತೀಕ್

ಕೊಪ್ಪಳ 30: ನರೇಗಾದಡಿ ಈ ಹಿಂದೆ ರಾಜ್ಯದಲ್ಲಿ 8.5 ಕೋಟಿ ಉದ್ಯೋಗ ಸೃಜಿನೆಯಾಗಿ ಅದು ಈಗ 10.5 ಕೋಟಿಗೆ ಏರಿಕೆಯಾಗಿದ್ದು, ಮುಂದಿನ ದಿನಗಳಲ್ಲಿ 12.5 ಕೋಟಿಗೆ ಉದ್ಯೋಗ ಸೃಜನೆಗೆ ಪ್ರಯತ್ನಿಸಲಾಗುತ್ತಿದೆ ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ಎಲ್.ಕೆ. ಅತೀಕ್ ಅವರು ಹೇಳಿದರು.  

ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕೊಪ್ಪಳ ಜಿಲ್ಲಾ ಪಂಚಾಯತ್ ಹಾಗೂಕರ್ನಾಟಕ ಪ್ರಾಂತ್ಯ ರೈತ ಸಂಘದ ಜಿಲ್ಲಾ ಸಮಿತಿ ಇವರ ಸಹಯೋಗದಲ್ಲಿ ನಗರದ ಭಾಗ್ಯನಗರ ರಸ್ತೆಯ ಬಾಲಾಜಿ ಫಂಕ್ಷನ್ ಹಾಲ್ನಲ್ಲಿ ಮಂಗಳವಾರದಂದು (ಜುಲೈ.30) ಆಯೋಜಿಸಲಾದ ಕಾಯಕ ಬಂಧುಗಳ ಸಮಾವೇಶದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.  

ನರೇಗಾ ಯೋಜನೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರೀಯವಾದ ಕಾರ್ಯಕ್ರಮವಾಗಿದೆ.  ಜನ ಸಾಮಾನ್ಯರಿಗೆ ನೆರವಾಗುವಂತಹ ಯೋಜನೆ ಇದಾಗಿದೆ.  ಬರದಿಂದ ಮುಕ್ತವನ್ನಾಗಿಸುವಂತಹ ಕೆಲಸ ಇದಾಗಿದೆ.  ಮಳೆಯ ಕೊರತೆಗಳಿಂದಾಗಿ ನೀರನ್ನು ವೈಜ್ಞಾನಿಕವಾಗಿ ಸಂರಕ್ಷಿಸುವ ನಿಟ್ಟಿನಲ್ಲಿ ಕೆರೆಗಳ ಹೂಳೆತ್ತುವ ಕಾಮಗಾರಿಗಳನ್ನು ಹಮ್ಮಿಕೊಳ್ಳುತ್ತಿರುವುದು ಮಹತ್ತರವಾದ ಜಲ ಸಂರಕ್ಷಣೆ ಕಾರ್ಯ ಇದಾಗಿದೆ.  ನರೇಗಾ ಕೆಲಸ ಇಲ್ಲದ ಕೂಲಿಕಾರರಿಗೆ ಕೆಲಸ ನೀಡುವ ಒಂದು ಮಹತ್ತರವಾದ ಯೋಜನೆಯಾಗಿದ್ದು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿಗಳು, ತಾ.ಪಂ. ಕಾರ್ಯನಿವರ್ಾಹಕ ಅಧಿಕಾರಿಗಳು  ಹಾಗೂ ಗ್ರಾಮ ಪಂಚಾಯತ್ ಪಿಡಿಓಗಳು ಈ ನರೇಗಾ ಯೋಜನೆಗೆ ಹೆಚ್ಚಿನ ಒತ್ತು ನೀಡಬೇಕು.  ಕೆಲಸ ಬೇಡಿಕೆ ಇರುವ ಕಡೆ ನರೇಗಾದಡಿ ಉದ್ಯೋಗ ಸೃಜಿಸಿ.  ನಮೂನೆ-6 ಕ್ಕೆ ಸಂಬಂಧಿಸಿದಂತೆ ಅನೇಕ ದೂರುಗಳು ಕೂಲಿಕಾರರಿಂದ ಹಾಗೂ ಇವರಿಗೆ ಸಂಬಂಧಿಸಿದ ಸಂಘಟನೆಗಳಿಂದ ಬರುತ್ತಿದ್ದು, ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು.  ಜಿಲ್ಲೆಯ ಯಾವ ತಾಲೂಕಿನಲ್ಲಿ ಉದ್ಯೋಗ ಖಾತ್ರಿಯಡಿ ಕೆಲಸದ ಅವಶ್ಯಕತೆ ಇದೆ.  ಅಲ್ಲಿ ಕೂಡಲೇ ಕೂಲಿಕಾರರಿಗೆ ಮಾನವ ದಿನಗಳನ್ನು ಸೃಜಿಸಿ ಉದ್ಯೋಗ ಕಲ್ಪಿಸಿ.  ಕೇಂದ್ರದಿಂದ ಬರುವ ಅನುದಾನವು ನಿಗದಿತ ಅವಧಿಯೊಳಗೆ ಬರದೇ ಇರುವುದರಿಂದ ಹಾಗೂ ತಾಂತ್ರಿಕ ತೊಂದರೆಗಳು ಉಂಟಾಗಿರುವುದರಿಂದ ಕೂಲಿಕಾರರಿಗೆ ಕೂಲಿ ಪಾವತಿಯಲ್ಲಿ  ವಿಳಂಬವಾಗಿದೆ.  ನರೇಗಾ ಪ್ರಸಕ್ತ ಕೂಲಿ ಪಾವತಿಗೆ ಕೇಂದ್ರ ಸಕರ್ಾರದಿಂದ ಅನುದಾನವು ಶೀಘ್ರವಾಗಿ ಬರಲಿದ್ದು, ಇನ್ನೂ 15 ದಿನಗಳೊಳಗಾಗಿ ಎಲ್ಲಾ ಕೂಲಿಕಾರರಿಗೆ ಕೂಲಿ ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು.  ಈ ನಿಟ್ಟಿನಲ್ಲಿ ಗ್ರಾಮ ಪಂಚಾಯತ್ ಪ್ರಕ್ರೀಯೇ ತ್ವರಿತವಾಗಬೇಕು ಎಂದರು. 

ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಕೊಪ್ಪಳ ಜಿಲ್ಲೆಯಲ್ಲಿ ಹೆಚ್ಚು-ಹೆಚ್ಚು ಕಾಮಗಾರಿಗಳು ಕೈಗೊಂಡಿದ್ದು, ತುಂಬಾ ಸಂತೋಷದ ವಿಷಯವಾಗಿದೆ.  ಈ ಕಾಮಗಾರಿಗಳು ಇನ್ನೂ ಹೆಚ್ಚಾಗಬೇಕು.  ನರೇಗಾ ಯೋಜನೆ ಯಶಸ್ವಿಯಾಗಬೇಕಾದರೆ.  ಕಾಯಕ ಬಂಧುಗಳ ಪಾತ್ರ ಬಹಳ ಪ್ರಮುಖವಾದದ್ದಾಗಿದೆ.  ಉದ್ಯೋಗ ಖಾತ್ರಿಯಡಿ ಕೂಲಿಕಾರರಿಗೆ ಆಗುವ ಯಾವುದೇ ರೀತಿಯ ಸಮಸ್ಯೆಗಳು ಉಂಟಾದಲ್ಲಿ ಅವುಗಳನ್ನು ನೇರವಾಗಿ ಇಲಾಖೆಯ ಗಮನಕ್ಕೆ ತರುವ ನಿಟ್ಟಿಲ್ಲಿ ಸಂಘಟನೆಗಳು ಕಾರ್ಯನಿರ್ವಹಿಸಬೇಕು.  ನರೇಗಾದಡಿ ಕೂಲಿಕಾರರು ಮಾಡುವ ಕೆಲಸವು ನೆಲ, ಜಲ ಸಂರಕ್ಷಣೆಯಾಗಿದ್ದು, ಕೂಲಿಕಾರರೂ ಸಹ ದೇಶದ ರಕ್ಷಕರುಗಳಾಗಿದ್ದಾರೆ ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಕರ್ಾರದ ಪ್ರಧಾನ ಕಾರ್ಯದಶರ್ಿಗಳಾದ ಎಲ್.ಕೆ. ಅತೀಕ್ ಅವರು ಹೇಳಿದರು.  

ಸಮಾರಂಭದ ಅಧ್ಯಕ್ಷತೆಯನ್ನು ಕನರ್ಾಟಕ ಪ್ರಾಂತ್ಯ ರೈತ ಸಂಘದ ಜಿಲ್ಲಾಧ್ಯಕ್ಷ ದೊಡ್ಡನಗೌಡರವರು ವಹಿಸಿದ್ದರು.  ಕರ್ನಾಟಕ  ಪ್ರಾಂತ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಾರುತಿ ಮಾರಪಡೆ, ಕೊಪ್ಪಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘುನಂದನ ಮೂತರ್ಿ, ಪ್ರೊಬೇಷನರಿ ಐಎಎಸ್ ಅಧಿಕಾರಿ ಸ್ನೇಹಾ ಜೈನ್, ಜಿ.ಪಂ. ಉಪ ಕಾರ್ಯದರ್ಶಿ  ಎನ್.ಕೆ ತೊರವಿ, ಯೋಜನಾ ನಿದೇಶಕ ರವಿ ಬಿಸರಳ್ಳಿ, ತಾ.ಪಂ. ಕಾರ್ಯನಿವರ್ಾಹಕ ಅಧಿಕಾರಿ ಟಿ.ಕೃಷ್ಣಮೂತರ್ಿ, ಕರ್ನಾಟಕ ಪ್ರಾಂತ್ಯ ರೈತ ಸಂಘದ ಜಿಲ್ಲಾ ಘಟಕದ ಜಿ. ನಾಗರಾಜ, ಶಿವಕುಮಾರ್, ಗವಿಸಿದ್ದಪ್ಪ ಸೇರಿದಂತೆ ಮತ್ತಿತರರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.