ಏಕ್ ಮುಠ್ಠಿ ಅನಾಜ್: ಶಶಿಧಾಮ ವೃದ್ಧಾಶ್ರಮಕ್ಕೆ ಆಹಾರ ಧಾನ್ಯ ವಿತರಣೆ
ವಿಜಯಪುರ 2: ವಸುದೈವ ಕುಟುಂಬಕಂ ಎನ್ನುವ ನಮ್ಮ ಸಂಸ್ಕೃತಿ ನಮ್ಮದು. ನಮ್ಮ ಮಕ್ಕಳಲ್ಲಿ ತಂದೆ-ತಾಯಿ, ವಯೋವೃದ್ಧ ಅಜ್ಜ-ಅಜ್ಜಿ ಮತ್ತು ಕುಟುಂಬದ ಹಿರಿಯ ಜೀವಿಗಳ ಬಗ್ಗೆ ಗೌರವ ಭಾವನೆ, ಚೆನ್ನಾಗಿ ನೋಡಿಕೊಳ್ಳುವುದು, ಆರೋಗ್ಯ ಕಾಪಾಡುವದು, ವಯಸ್ಸಾದ ನಂತರ ಅವರನ್ನು ವೃದ್ಧಾಶ್ರಮಗಳಿಗೆ ಕಳುಹಿಸುವ ಮನೋಭಾವನೆಯನ್ನು ಹೋಗಲಾಡಿಸಬೇಕು. ತನ್ಮೂಲಕ ಮಕ್ಕಲ್ಲಿ ನೈತಿಕ, ಮೌಲ್ವಿಕ ಮತ್ತು ಜೀವನ-ಮೌಲ್ಯಗಳನ್ನು ಒಡಮೂಡಿಸಬೇಕೆಂಬ ಉದ್ದೇಶದಿಂದ ನಗರದ ಅಥಣಿ ರಸ್ತೆಯ ಅಲ್-ಅಮೀನ ಆಸ್ಪತ್ರೆಯ ಎದುರಿಗೆ ಇರುವ ವಿದ್ಯಾ ಇಂಗ್ಲೀಷ್ ಮಾಧ್ಯಮ ಶಾಲೆಯ ಮಕ್ಕಳು ಮತ್ತು ಶಿಕ್ಷಕರು ಸೇರಿ “ಏಕ್ ಮುಠ್ಠಿ ಅನಾಜ” ವಿಷಯದ ಶಿರ್ಷೀಕೆಯಡಿಯಲ್ಲಿ ನವರಸಪುರದಲ್ಲಿರುವ ಶಶಿಧಾಮ ವೃದ್ಧಾಶ್ರಮದಲ್ಲಿ ಹೊಸ ವರ್ಷಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಶಾಲೆಯ ಮಕ್ಕಳು ಹಾಗೂ ಶಿಕ್ಷಕರು ಸ್ವಯಂ ಸಂತೋಷದಿಂದ ವೃದ್ಧಾಶ್ರಮದಲ್ಲಿರುವ ವಯೋವೃದ್ಧ ಹಿರಿಯ ಜೀವಿಗಳಿಗೆ ಸಹಾಯ ಹಸ್ತ ಚಾಚಲು ಒಂದು ಬೊಗಸೆ ಆಹಾರ ಧಾನ್ಯ ಎಂಬ ಘೋಷವಾಕ್ಯದೊಂದಿಗೆ ದೈನಂದಿನವಾಗಿ ಅಗತ್ಯವಾದ ಆಹಾರ ಧಾನ್ಯಗಳನ್ನು ಶಶಿಧಾಮ ವೃದ್ಧಾಶ್ರಮಕ್ಕೆ ವಿತರಿಸಿದರು. ಬಸವಳಿದ ಹಿರಿಯ ಜೀವಿಗಳೊಂದಿಗೆ ಸೇರಿ ಕೇಕ್ ಕತ್ತರಿಸಿ, ಸಾಮೂಹಿಕವಾಗಿ ಹೊಸ ವರ್ಷಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಮುಖ್ಯ ಗುರುಗಳಾದ ದಿಲಶಾದ್ ಬದಾಮಿ, ಸಲೀಂ ಬದಾಮಿ, ಸನಾಕೌಸರ್, ಮುಸ್ಕಾನ್, ತಸ್ಮೀಂ, ಶ್ರೀ ಮೇಡಂ, ಡಿ. ಎಂ. ಅನಿತಾ, ಸರೋಜಿನಿ, ದಾನಮ್ಮ ಮೇಡಂ ಇನ್ನಿತರರು ಸಹ ಉಪಸ್ಥಿತರಿದ್ದರು.