ಧಾರವಾಡ,.28 : ಕಡಿಮೆ ಅವಧಿಯಲ್ಲಿ ಕಡಿಮೆ ನೀರನ್ನು ಬಳಸಿಕೊಂಡು ಹೆಚ್ಚು ಇಳುವರಿ ಕೊಡುವ ತಳಿಗಳು ನಮ್ಮ ರೈತ ಸಮುದಾಯಕ್ಕೆ ಅಗತ್ಯವಿದ್ದು, ಈ ನಿಟ್ಟಿನಲ್ಲಿ ವ್ಯಾಪಕ ಕೃಷಿ ಸಂಶೋಧನೆಗಳು ಇಂದಿನ ತುತರ್ು ಅಗತ್ಯವಾಗಿದೆ ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಚೈತ್ರಾ ಶಿರೂರ ಹೇಳಿದರು.
ಅವರು ಸಾರ್ವಜನಿಕ ಶಿಕ್ಷಣ ಇಲಾಖೆ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳ ಜಂಟಿ ಆಶ್ರಯದೊಂದಿಗೆ ನಗರದ ಡಯಟ್ ಆವರಣದಲ್ಲಿ ಹಮ್ಮಿಕೊಂಡಿರುವ 2 ದಿನಗಳ ರಾಜ್ಯ ಮಟ್ಟದ ಇನ್ಸ್ಪೈರ್-ಮಾನಕ ಅವಾರ್ಡ ವಿಜ್ಞಾನ ಮಾದರಿಗಳ ಪ್ರದರ್ಶನವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡುತ್ತಿದ್ದರು. ವಿದ್ಯಾಥರ್ಿಗಳು ಕೇವಲ ಪುಸ್ತಕ ಓದುವುದು ಹಾಗೂ ಅಂಕ ಗಳಿಸುವುದನ್ನಷ್ಟೇ ಕೇಂದ್ರೀಕರಿಸದೇ ಪಾಠದ ಜೊತೆಗೆ ಆಟವೂ ಇರಲಿ. ಮಕ್ಕಳ ಪ್ರತಿಭೆಯನ್ನು ಪೋಷಿಸಿ, ಅವರ ಆಸಕ್ತಿ ಕ್ಷೇತ್ರದಲ್ಲಿ ಸ್ವತಂತ್ರವಾಗಿ ಬೆಳೆಯಲು ಅವಕಾಶ ನೀಡಿ, ಅವರಲ್ಲಿರಬಹುದಾದ ಅನ್ವೇಷಣಾ ಪ್ರವೃತ್ತಿ ನಿರಂತರವಾಗಿ ವಿಕಾಸ ಹೊಂದಲು ಶಿಕ್ಷಕರು ಮತ್ತು ಪಾಲಕರು ಶ್ರಮಿಸಬೇಕು ಎಂದರು.
'ಸಿಸ್ಲೆಪ್-ಕನರ್ಾಟಕ' ಸಂಸ್ಥೆಯ ನಿದರ್ೆಶಕ ಬಿ.ಎಸ್. ರಘುವೀರ ಮಾತನಾಡಿ, ಜ್ಞಾನದಿಂದ ವಿಜ್ಞಾನ, ವಿಜ್ಞಾನದಿಂದ ಅಭಿವೃದ್ಧಿ ಸಾಧ್ಯವಾಗುತ್ತದೆ. ಸುಮಾರು 42 ಸಾವಿರ ವಿದ್ಯಾಥರ್ಿಗಳು ಕನರ್ಾಟಕದಿಂದ ಇನ್ಸ್ಪೈರ್-ಮಾನಕ ಅವಾರ್ಡ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ವೈಜ್ಞಾನಿಕ ಅನ್ವೇಷಣೆಗಳನ್ನು ಪ್ರಸ್ತುತ ಪಡಿಸಲು ನೋಂದಣಿ ಮಾಡಿಕೊಂಡಿರುವುದು ದೇಶದಲ್ಲಿಯೇ ಅತಿ ಹೆಚ್ಚು ಸಂಖ್ಯೆಯಲ್ಲಿ ಕನರ್ಾಟಕದ ವಿದಾಥರ್ಿಗಳು ವಿಜ್ಞಾನದಲ್ಲಿ ಆಸಕ್ತಿ ಹೊಂದಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಮಹಾನಗರಗಳಲ್ಲಿ ತ್ಯಾಜ್ಯ ನಿರ್ವಹಣೆ ಪರಿಸರಕ್ಕೆ ದೊಡ್ಡ ಸವಾಲಾಗಿದ್ದು, ತ್ಯಾಜ್ಯದ ಮರು ಚಕ್ರೀಕರಣದ ಮೂಲಕ ಶಕ್ತಿ ಉತ್ಪಾದನೆಗೆ ಇನ್ಸ್ಪೈರ್-ಮಾನಕ ಅವಾರ್ಡ ವಿಜ್ಞಾನ ಕಾರ್ಯಕ್ರಮಗಳು ಸಾಕ್ಷಿಯಾಗಲಿ ಎಂದರು.
ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ರವೀಂದ್ರನಾಥ ಹುಂಜೆ ಮಾತನಾಡಿ, ಮೂಲ ವಿಜ್ಞಾನದ ಕಡೆಗೆ ಹೆಚ್ಚೆಚ್ಚು ವಿದ್ಯಾಥರ್ಿಗಳು ತೆರೆದುಕೊಳ್ಳುವ ಮೂಲಕ ನೂತನ ಆವಿಷ್ಕಾರಗಳಿಗೆ ಪೂರಕವಾದ ಪ್ರಯೋಗಶೀಲತೆಯನ್ನು ಬೆಳೆಸಿಕೊಳ್ಳಬೇಕು ಎಂದರು.
ಡಯಟ್ ಪ್ರಾಚಾರ್ಯ ಅಬ್ದುಲ್ ವಾಜೀದ್ ಖಾಜಿ ಅಧ್ಯಕ್ಷತೆವಹಿಸಿದ್ದರು. ಡಿಡಿಪಿಐ ಆರ್.ಎಸ್. ಮುಳ್ಳೂರ, ಮುಖ್ಯ ತೀಪರ್ುಗಾರರಾದ ಕ.ವಿ.ವಿ. ಪ್ರಾಣಿಶಾಸ್ತ್ರ ಪಾಧ್ಯಾಪಕಿ ಡಾ. ಲಕ್ಷ್ಮಿ ಇನಾಮದಾರ(ದೊಡಮನಿ), ಎಸ್.ಡಿ.ಎಂ ಇಂಜನೀಯರಿಂಗ್ ಕಾಲೇಜಿನ ಭೌತಶಾಸ್ತ್ರ ಪ್ರಾಧ್ಯಾಪಕ ಡಾ. ಎಂ.ಎನ್. ಕಳಸದ, ಕ.ವಿ.ವಿ. ರಸಾಯನಶಾಸ್ತ್ರ ಅ. ಪ್ರಾಧ್ಯಾಪಕಿ ಡಾ. ಮಂಜಲಿ ಸಾಳುಂಕೆ, ಕ.ವಿ.ವಿ. ಪಾಣಿಶಾಸ್ತ್ರ ಅ. ಪ್ರಾಧ್ಯಾಪಕ ಡಾ.ಧೀರಜ ವೀರನಗೌಡರ, ವೀಕ್ಷಕರಾಗಿ ಆಗಮಿಸಿದ್ದ ಗುಜರಾತ ಗಾಂಧೀನಗರದ ನ್ಯಾಷನಲ್ ಇನ್ನೋವೇಷನ್ ಫೌಂಡೇಷನ್ನ ಪ್ರತಿನಿಧಿಗಳಾದ ಹರದೇವ ಚೌಧರಿ, ಸೈಯ್ಯದ್ ನದೀಮ್ ಹಾಗೂ ಮೊಮಿತಾ ಗೋರೈ ಇದ್ದರು.
ಡಯಟ್ ಹಿರಿಯ ಉಪನ್ಯಾಸಕ ವೈ.ಬಿ.ಬಾದವಾಡಗಿ ಸ್ವಾಗತಿಸಿದರು. 'ಜೀವನ ಶಿಕ್ಷಣ' ಮಾಸಪತ್ರಿಕೆ ಜಂಟಿ ಸಂಪಾದಕ ಗುರುಮೂತರ್ಿ ಯರಗಂಬಳಿಮಠ ನಿರೂಪಿಸಿದರು. ಡಯಟ್ ಉಪನ್ಯಾಸಕಿ ಡಾ. ರೇಣುಕಾ ಅಮಲಝರಿ ವಂದಿಸಿದರು. ಉತ್ತರ ಕನರ್ಾಟಕ ಭಾಗದ ಕಲಬುಗರ್ಿ, ಬಳ್ಳಾರಿ, ಬೀದರ, ರಾಯಚೂರ, ಕೊಪ್ಪಳ, ಯಾದಗೀರ, ಧಾರವಾಡ, ಗದಗ, ಹಾವೇರಿ, ಬೆಳಗಾವಿ, ವಿಜಯಪುರ, ಬಾಗಲಕೋಟ, ಉತ್ತರ ಕನ್ನಡ, ಶಿರಸಿ ಹಾಗೂ ಚಿಕ್ಕೋಡಿ 15 ಜಿಲ್ಲೆಗಳ 6 ರಿಂದ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾಥರ್ಿಗಳು ಸಿದ್ಧಪಡಿಸಿರುವ ವಿಜ್ಞಾನ ಮಾದರಿಗಳು ಪ್ರದರ್ಶನಗೊಂಡಿವೆ. ಸುಮಾರು 323 ವಿದ್ಯಾಥರ್ಿಗಳು ಮತ್ತು 323 ಮಾರ್ಗದಶರ್ಿ ಶಿಕ್ಷಕರು ಸೇರಿ ಸುಮಾರು 650 ಜನರು ಭಾಗವಹಿಸಿದ್ದಾರೆ.