ಪಠ್ಯೇತರ ಚಟುವಟಿಕೆಗಳು ಸರ್ವತೋಮುಖ ಬೆಳವಣಿಗೆಗೆ ಸಹಕಾರಿ: ಪಾಂಡುರಂಗಿ

ಧಾರವಾಡ 04: ಪಠ್ಯೇತರ ಚಟುವಟಿಕೆಗಳು ಸರ್ವತೋಮುಖ ಬೆಳವಣಿಗೆಗೆ ಸಹಾಯ ಮಾಡುತ್ತವೆ ಅಲ್ಲದೆ ಮಾನಸಿಕ, ದೈಹಿಕ, ಭಾವನಾತ್ಮಕ ಬೆಳವಣಿಗೆಗೆ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ವಿಜ್ಞಾನ ವಿಷಯ ಓದಿದವರಿಗೆ ಮಾತ್ರ ಹೆಚ್ಚು ಅವಕಾಶಗಳು ಸಿಗುತ್ತವೆ ಎಂಬುದು ಸುಳ್ಳು ಅಲ್ಲದೆ ವಾಣಿಜ್ಯ ಹಾಗೂ ಕಲಾ ವಿಷಯಗಳನ್ನು ಓದಿದರೆ ಅಷ್ಟೇನು ಹೆಚ್ಚು ಅವಕಾಶಗಳು ಸಿಗುವುದಿಲ್ಲ ಎಂಬುದು ತಪ್ಪು ಕಲ್ಪನೆ ಎಂದು ಖ್ಯಾತ ನರ ಹಾಗೂ ಮನೋರೋಗ ತಜ್ಞರು ಡಾ. ಆನಂದ ಪಾಂಡುರಂಗಿ ಹೇಳಿದರು.

 ಧಾರವಾಡದ ಡಾ. ಬಿ. ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ಸಾಯಿ ಪದವಿ ಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ವಾಷರ್ಿಕ ಸ್ನೇಹ ಸಮ್ಮೇಳನ ಪ್ರತಿಭಾ ಪುರಸ್ಕಾರ ಸಮಾರಂಭ ಹಾಗೂ ದ್ವಿತೀಯ ವರ್ಷದ ವಿದ್ಯಾಥರ್ಿಗಳ ಬಿಳ್ಕೋಡುಗೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಉದ್ಘಾಟಿಸಿ ಅವರು ಮಾತನಾಡಿದರು.  

ಐಕಉ ಯುಗದಲ್ಲಿ ಎಲ್ಲಾ ವಿದ್ಯಾಥರ್ಿಗಳಿಗೆ ಅವಕಾಶಗಳಿವೆ. ದೇಶ ಬಲಿಷ್ಠವಾಗಲು ಎಲ್ಲ ವಿಷಯದವರು ಬೇಕಾಗುತ್ತದೆ. ಗ್ರಾಮಾಂತರ ಜೀವನದಲ್ಲಿ ಎತ್ತರ ವ್ಯಕ್ತಿಗಳಾಗಲು ಬಡತನ ಎಂದೂ ಅಡ್ಡಿಯಾಗಿಲ್ಲ. ಎ ಪಿ ಜಿ ಅಬ್ದುಲ್ ಕಲಾಂ ಅವರು ಅತ್ಯಂತ ಬಡತನ ಕುಟುಂಬದವರು ಅವರು ದಿನ ಪತ್ರಿಕೆಯನ್ನು ಹಂಚಿ ತಮ್ಮ ಜೀವನ ನಡೆಸುತ್ತಿದ್ದರು. ಮುಂದೆ ಜಗತ್ತು ಮೆಚ್ಚುವಂತಹ ವಿಜ್ಞಾನಿಯಾದರು ಮತ್ತು ಡಾ ಬಾಬಾ ಸಾಹೇಬ ಅಂಬೇಡ್ಕರವರು ಕೂಡಾ ಬಡಕುಟುಂಬದಿಂದ ಬಂದವರು ಅವರು ಈ ದೇಶ ಒಪ್ಪುವಂತಹ ಒಬ್ಬ ಶ್ರೇಷ್ಠ ವ್ಯಕ್ತಿಗಳಾಗಿ ಬೆಳೆದರು ಎಂದು ಪಾಂಡುರಂಗಿ ಹೇಳಿದರು.

ಹುಬ್ಬಳ್ಳಿ ಸಂಚಾರಿ ಪೊಲೀಸ್ ಠಾಣೆ ಸಿ ಪಿ ಐ ಶ್ರೀಕಾಂತ ತೋಟಗಿ ಅವರು ಮಾತನಾಡಿ ವಿದ್ಯಾಥರ್ಿಗಳು ದುಶ್ಚಟಗಳಿಗೆ ಬಲಿಯಾಗದೆ ನೈತಿಕತೆ, ಪ್ರಾಮಾಣಿಕತೆ, ಶಿಸ್ತು, ಅಧ್ಯಯನಶೀಲ ಗುಣಗಳನ್ನು ಬೆಳೆಸಿಕೊಳ್ಳಬೇಕು. ಒಂದು ಸಂಸ್ಥೆ ಬೆಳೆಯ ಬೇಕಾದರೆ ಎಲ್ಲ ಸಿಬ್ಬಂದಿಗಳ ಸಹಕಾರ ಅತ್ಯಗತ್ಯ ಈ ಒಂದು ಸಂಸ್ಥೆಯಲ್ಲಿ ಒಳ್ಳೆಯ ಸಿಬ್ಬಂದಿಗಳಿದ್ದು ಸಂಸ್ಥೆ ಉನ್ನತ ಸ್ಥಾನವೆರಲು ಎರಡುಮಾತಿಲ್ಲ ಎಂದು ನುಡಿದರು.

ಸಂಸ್ಥೆಯ ಹಾಗೂ ಮಹಾವಿದ್ಯಾಲಯದ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿದರ್ೇಶಕಿ ಡಾ. ವೀಣಾ ಬಿರಾದಾರ ಅವರು ಮಾತನಾಡಿ ಮಹಾವಿದ್ಯಾಲಯದ ಎಲ್ಲ ವಿದ್ಯಾಥರ್ಿಗಳು ಅತ್ಯಮೂಲ್ಯ ರತ್ನಗಳು ಇದ್ದ ಹಾಗೆ ಎಂದರು. ಯಾವುದೇ ಒಂದು ವ್ಯವಸ್ಥೆ ಸರಿಯಾಗಿ ನಡೆಸಬೇಕಾದರೆ ಎಲ್ಲರ ಸಹಕಾರ ಅತ್ಯಗತ್ಯ. ಹೀಗಾಗಿ ಮಹಾವಿದ್ಯಾಲಯದ ಎಲ್ಲ ಸಿಬ್ಬಂದಿಗಳ ಕಾರ್ಯವನ್ನು ಶ್ಲಾಘಿಸಿದರು.

ಪ್ರಾಸ್ತಾವಿಕ ನುಡಿಯನ್ನಾಡಿದ ಕಾಲೇಜಿನ ನಿದರ್ೇಶಕರು ಹಾಗೂ ಪ್ರಾಚಾರ್ಯ ಪ್ರೊ. ನಾಗರಾಜ ಶಿರೂರ ಮಾತನಾಡಿ ಮಹಾವಿದ್ಯಾಲಯವನ್ನು ಪ್ರಾರಂಭಿಸುವಾಗ ಎದುರಿಸಿದ ಎಲ್ಲ ಸಮಸ್ಯೆಗಳನ್ನು ನಿವಾರಿಸಲು ಪಟ್ಟ ಕಷ್ಟವನ್ನು ನೆನಪಿಸಿಕೊಂಡು ಇಂದಿನ ಮಹಾವಿದ್ಯಾಲಯದ ಬೆಳವಣಿಗೆಗೆ ಹರ್ಷ ವ್ಯಕ್ತ ಪಡಿಸಿದರು.  

ವೇದಿಕೆಯ ಮೇಲೆ ಸಂಸ್ಥೆಯ ಕಾರ್ಯದಶರ್ಿ ಅನ್ನಪೂರ್ಣ ಗುರುಮಠ, ಡಾ. ಸುರೇಶ ಗಾಡಿ, ಡಾ. ಶಾಂತಯ್ಯ ಗುರುಮಠ, ಉಪ ಪ್ರಾಚಾರ್ಯರು ಪ್ರೊ. ವಿನಾಯಕ ರಗಟಿ, ಕಾಲೇಜಿನ ಪ್ರಧಾನ ಕಾರ್ಯದಶರ್ಿ ಕುಮಾರ ಪ್ರತೀಕ ಗಾಡಿ ಉಪಸ್ಥಿತರಿದ್ದರು.  

ಕಾರ್ಯಕ್ರಮದಲ್ಲಿ ಎಲ್ಲ ವಿದ್ಯಾಥರ್ಿಗಳು, ಉಪನ್ಯಾಸಕರು, ಬೇರೆ ಬೇರೆ ಕಾಲೇಜಿನ ಪ್ರಾಚಾರ್ಯರು, ಮತ್ತು ಪಾಲಕರು, ಮಾಧ್ಯಮ ಪ್ರತಿಗಳು ಉಪಸ್ಥಿತರಿದ್ದರು. ಪ್ರೊ. ಎಸ್. ಎಮ್. ತಾರಿಹಾಳ ಸ್ವಾಗತಿಸಿದರು. ಪ್ರೊ. ನಂದಾ ಗೋಡಸೆ ವಂದಿಸಿದರು. ಪ್ರೊ. ವಿನಾಯಕ ರಗಡಿ ನಿರೂಪಿಸಿದರು.