ಲೋಕದರ್ಶನ ವರದಿ
ಬೆಳಗಾವಿ, 11: ಕಣ್ಣು ಪಂಚೇಂದ್ರಿಯಗಳಲ್ಲೇ ಸರ್ವಶ್ರೇಷ್ಠವಾದದು. ಆದರೆ ವಯಸ್ಸಾದ ನಂತರ ಶರೀರದಲ್ಲಾಗುವ ಕೆಲವೊಂದು ಬದಲಾವಣೆಗಳಿಂದ ಮೋತಿಬಿಂದು ಹಾಗೂ ಇನ್ನಿತರೆ ಸಮಸ್ಯೆಗಳಿಗೆ ಒಳಗಾಗುತ್ತವೆ. ಆದ್ದರಿಂದ ಕಣ್ಣಿನ ಉತ್ತಮ ಆರೋಗ್ಯಕ್ಕಾಗಿ ನಿಯಮಿತ ತಪಾಸಣೆ ಪೌಷ್ಟಿಕ ಆಹಾರದ ಸೇವನೆಗಳಿಂದ ಉತ್ತಮ ದೃಷ್ಟಿಯನ್ನು ಹೊಂದಬಹುದಾಗಿದೆ ಎಂದು ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ನಿದೆರ್ೇಶಕ ಡಾ. ಎಸ್ ಸಿ ಧಾರವಾಡ ಮಾತನಾಡುತ್ತಿದ್ದರು. ಅವರು ಇಂದು ನಗರದ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆ ಹಾಗೂ ಜಿಲ್ಲಾ ಅಂಧತ್ವ ನಿವಾರಣಾ ಕಾರ್ಯಕ್ರಮದ ಸಹಭಾಗಿತ್ವದಲ್ಲಿ ನಡೆದ ಉಚಿತ ಮೋತಿ ಬಿಂದು ಶಸ್ತ್ರಚಿಕಿತ್ಸಾ ಶಿಬಿರವನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಶಿಬಿರವು ಉಚಗಾಂವ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವಿಸ್ತೀರ್ಣದಲ್ಲಿ ಬರುವ ಸುಮಾರು 45ಕ್ಕೂ ಅಧಿಕ ನಾಗರಿಕರಿಗೆ ಮೋತಿಬಿಂದು ತಪಾಸಣೆ ಮಾಡಲಾಗಿ ಅವರಲ್ಲಿ 6 ಜನರಿಗೆ ಮೋತಿಬಿಂದು ಶಸ್ತ್ರಚಿಕಿತ್ಸೆಯ ಅವಶ್ಯಕತೆ ಕಂಡು ಬಂದಿತು. ಅವರಿಗೆ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ವಾಹನದಲ್ಲಿ ಉಚಿತವಾಗಿ ಕರೆತಂದು ಶಸ್ತ್ರಚಿಕಿತ್ಸೆಯನ್ನು ನೆರವೇರಿಸಿ ಪುನಃ ಅವರ ಊರಿಗೆ ಬಿಡಲಾಯಿತು. ಶಸ್ತ್ರಚಿಕಿತ್ಸೆಯನ್ನು ನೆರವೇರಿಸಿದ ನೇತ್ರ ತಜ್ಞರಾದ ಹಾಗೂ ನೇತ್ರ ವಿಭಾಗದ ಮುಖ್ಯಸ್ಥರಾದ ಡಾ.ಪದ್ಮಜಾ ಹಂಜಿ ಮತ್ತು ಅಡಿವೆಪ್ಪಾ ಪರಾಯಿ, ಇವರನ್ನು ಆಸ್ಪತ್ರೆಯ ನಿದರ್ೇಶಕ ಡಾ. ಎಸ್ ಸಿ ಧಾರವಾಡ ಅಭಿನಂದಿಸಿದ್ದಾರೆ. ಸಕರ್ಾರ ಹಾಗೂ ಖಾಸಗೀ ಸಂಸ್ಥೆಯ ಸಮಾಗಮದಲ್ಲಿ ನಡೆಯುತ್ತಿರುವ ಇಂತಹ ಸಮಾಜಮುಖಿ ಕಾರ್ಯಕ್ಕೆ ಯು ಎಸ್ ಎಮ್ ಕೆ ಎಲ್ ಇ ಯ ನಿದರ್ೇಶಕ ಡಾ. ಹೆಚ್ ಬಿ ರಾಜಶೇಖರ ಶುಭ ಕೋರಿದ್ದಾರೆ.