ರೈತರ ಮನೆ ಬಾಗಿಲಿಗೆ ಹಸು ಎಮ್ಮೆಗಳಿಗೆ ಉಚಿತ ಗರ್ಭಧಾರಣೆ ಸೇವೆಯನ್ನು ನೀಡುತ್ತಿದ್ದು ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು
ಮುಂಡರಗಿ 20 : ಬಿ.ಎಸ್.ಎಸ್ ಮೈಕ್ರೋ ಫೈನಾನ್ಸ್ ರೈತರಿಗೆ ಉಪಯೋಗವಾಗಬೇಕೆಂದು ಬೈಪ್ ಸಂಸ್ಥೆಯ ಮೂಲಕ ರೈತರ ಮನೆ ಬಾಗಿಲಿಗೆ ಹಸು ಎಮ್ಮೆಗಳಿಗೆ ಉಚಿತ ಗರ್ಭಧಾರಣೆ ಸೇವೆಯನ್ನು ನೀಡುತ್ತಿದ್ದು ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು ಎಂದು ಮುಂಡರಗಿ ತಾಲೂಕ ವೈದ್ಯಾಧಿಕಾರಿ ಡಾ.ಎಸ್.ವಿ.ತಿಗರಿಮಠ ಹೇಳಿದರು.
ತಾಲೂಕಿನ ಮೇವುಂಡಿ ಗ್ರಾಮದಲ್ಲಿ ಬಿ.ಎಸ್.ಎಸ್ ಮೈಕ್ರೋಫೈನಾನ್ಸ್ ಲಿಮಿಟೆಡ್ ಮತ್ತು ಬೈಪ್ ಸಂಸ್ಥೆ ಮತ್ತು ಪಶುಪಾಲನೆ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಹಸು ಎಮ್ಮೆ ಸೇರಿದಂತೆ ವಿವಿಧ ತಳಿಗಳ ಗರ್ಭಧಾರಣೆ ಬರಡು ಜಾನುವಾರುಗಳ ಚಿಕಿತ್ಸೆ ನೀಡುವುದರ ಮೂಲಕ ಚಾಲನೆ ನೀಡಿ ಮಾತನಾಡಿದ ಹೈನುಗಾರಿಕೆ ರೈತರನ್ನು ಆರ್ಥಿಕವಾಗಿ ಸಭಲರನ್ನಾಗಿ ಮಾಡುತ್ತದೆ. ಜಾನುವಾರುಗಳಿಗೆ ಕಾಲ ಕಾಲಕ್ಕೆ ಚಿಕಿತ್ಸೆಗೆ ಒಳಪಡಿಸಬೇಕು ಎಂದು ಹೇಳಿದರು.
ಬೈಪ್ ಸಂಸ್ಥೆಯ ಜಿಲ್ಲಾ ಸಂಯೋಜಕ ಎಮ್.ಡಿ.ಹಳ್ಳಿ ಮಾತನಾಡಿ ಜಾನುವಾರು ಅಭಿವೃದ್ಧಿ ಯೋಜನೆಯಡಿ ಬೈಪ್ ಸಂಸ್ಥೆಗೆ ಆರ್ಥಿಕ ಸಹಾಯವನ್ನು ಬಿ.ಎಸ್.ಎಸ್.ಮೈಕ್ರೋಫೈನಾನ್ಸ್ ಲಿಮಿಟೆಡ್ ಅವರು ಉಚಿತವಾಗಿ ದೇಶಿಯ ವಿದೇಶಿಯ ತಳಿಗಳಾದ ಗೀರ್, ಹಳ್ಳಿಕೌರ್, ಖಿಲಾರಿ, ಎಚ್.ಎಫ್.ಆಕಳು, ಮುರ್ರಾ, ಜಾಬ್ರಾಬಾವಿ ಎಮ್ಮೆಯ ತಳಿಗಳಿಗೆ ಕೃತಕ ಗರ್ಭಧಾರಣೆ ಸೇವೆಯನ್ನು ಸಂಪೂರ್ಣವಾಗಿ ಉಚಿತ ಚಿಕಿತ್ಸಾ ಸೇವೆಯನ್ನು ನೀಡುತ್ತದೆ ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಹೇಳಿದರು.
ಮೇವುಂಡಿ ಗ್ರಾಮದ 50ಕ್ಕು ಹೆಚ್ಚು ಹಸು ಎಮ್ಮೆಗಳಿಗೆ ಉಚಿತ ತಪಾಸಣೆ ಮೂಲಕ ಓಷಧ ಮತ್ತು ಲವಣಾಂಶವುಳ್ಳ ಮಿನರಲ್ ಮಿಕ್ಸರ್ ನೀಡಲಾಯಿತು.
ಕಾರ್ಯಕ್ರಮದಲ್ಲಿ ಡಾ.ಶಿವಲಿಕಾ, ಐ.ಎ.ಗೋಕಾವಿ, ಬಿ.ಎಮ್.ಮಾಚೇನಳ್ಳಿ, ಎಮ್.ವಿ.ಹಿರೇಗೌಡ, ಹಸು ಎಮ್ಮೆ ಕೃತಕ ಗರ್ಭಧಾರಣೆ ಚಿಕಿತ್ಸೆಯ ಕಾರ್ಯಕರ್ತ ಶಂಕರ ಪವಾರ, ರೈತರು ಇದ್ದರು. ಬೈಪ್ ಸಂಸ್ಥೆಯ ಮೂಲಕ ಹಸು ಎಮ್ಮೆಗಳಿಗೆ ಕೃತಕ ಗರ್ಭಧಾರಣೆ ಮನೆ ಬಾಗಿಲಿಗೆ ಸಂಪರ್ಕಿಸುವ ಪೋನ ಸಂಖ್ಯೆ.9731708843.