ಫೆ. 1ರಿಂದ ಹರೇ ಕೃಷ್ಣ ರಥ ಯಾತ್ರೆ

Feb. Hare Krishna Rath Yatra from 1

ಫೆ. 1ರಿಂದ ಹರೇ ಕೃಷ್ಣ ರಥ ಯಾತ್ರೆ  

ಬೆಳಗಾವಿ 29: ಅಂತರಾಷ್ಟ್ರೀಯ ಕೃಷ್ಣ ಪ್ರಜ್ಞೆ ಸಂಘ ಬೆಳಗಾವಿ ವತಿಯಿಂದ 27ನೇ ವಾರ್ಷಿಕ ಹರೇ ಕೃಷ್ಣ ರಥ ಯಾತ್ರೆ ಮಹೋತ್ಸವವನ್ನು  ಫೆ. 1 ಮತ್ತು 2ರಂದು ಆಚರಿಸಲಾಗುತ್ತಿದೆ. ಎಂದು ಭಕ್ತಿರಸಾಮೃತ ಸ್ವಾಮಿಜಿ ಹೇಳಿದರು. 

 ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಶನಿವಾರ ದಿ. 1ರಂದು ರಥಯಾತ್ರೆ ಮೆರವಣಿಗೆಯು ಧರ್ಮವೀರ ಸಂಭಾಜಿ ಚೌಕನಿಂದ ಮಧ್ಯಾಹ್ನ 1ಘಂಟೆಗೆ ಪ್ರಾರಂಭವಾಗಿ ಇಸ್ಕಾನ್ ದೇವಸ್ಥಾನದಲ್ಲಿ ಸಂಜೆ 6.30ಕ್ಕೆ ಕೊನೆಗೊಳ್ಳುತ್ತದೆ. ಸಾಯಂಕಾಲ 6.30ಕ್ಕೆ ರಾಧಾ ಕೃಷ್ಣ ಮತ್ತು ಗೌರ್ ನಿತಾಯಿ ಅವರ ಆರತಿ, ಸಂಜೆ 6.30ರಿಂದ 7ರವರೆಗೆ ಕೀರ್ತನೆ, 7ರಿಂದ 9.30ಕ್ಕೆ ಇಸ್ಕಾನ್ ವರಿಷ್ಠ ಭಕ್ತರಿಂದ ಪ್ರವಚನ ಮತ್ತು ಆಧ್ಯಾತ್ಮಿಕ ನಾಟ್ಯಲೀಲಾ ಕಾರ್ಯಕ್ರಮ ಜರುಗಲಿವೆ. ನಂತರ ಮಹಾಪ್ರಸಾದ ನಡೆಯಲಿದೆ ಎಂದು ತಿಳಿಸಿದರು. 

ಪತ್ರಿಕಾಗೋಷ್ಠಿಯಲ್ಲಿ ಭಕ್ತಿರಸಾಮೃತ ಸ್ವಾಮಿಜಿ ಅವರೊಂದಿಗೆ ಕಮಿಟಿ ಅಧ್ಯಕ್ಷ ಬಾಲಕೃಷ್ಣ ಭಟ್ಟಡ ಮತ್ತು ಎಚ್‌.ಡಿ.ಕಾಟವಾ ಉಪಸ್ಥಿತರಿದ್ದರು.