ಧಾರವಾಡ 28: ನಶಿಸುವ ದಾರಿಯಲ್ಲಿರುವ ಬಯಲಾಟ, ಸಣ್ಣಾಟ ಮತ್ತು ದೊಡ್ಡಾಟ ಸೇರಿದಂತೆ ಎಲ್ಲಾ ಜಾನಪದ ಕಲಾ ಪ್ರಕಾರಗಳನ್ನು ಉಳಿಸಿ, ಬೆಳೆಸುವ ದಿಸೆಯಲ್ಲಿ ಸಮಾಜ ಮತ್ತು ಸಕರ್ಾರ ಎರಡರ ಪ್ರೋತ್ಸಾಹವೂ ಅಗತ್ಯವಿದೆ ಎಂದು ಧಾರವಾಡ ಜಿ.ಪಂ. ಅಧ್ಯಕ್ಷೆ ಚೈತ್ರಾ ಶಿರೂರ ಹೇಳಿದರು.
ನಗರದ ಅಂಬೇಡ್ಕರ ಭವನದಲ್ಲಿ ಬುಧವಾರ, ಭಾರತ ಸಕರ್ಾರ ಸಂಸ್ಕೃತಿ ಮಂತ್ರಾಲಯ ಸಹಯೋಗದಲ್ಲಿ ರಂಗ ನಿದರ್ೆಶಕಿ ವಿಶ್ವೇಶ್ವರಿ ಬಸವಲಿಂಗಯ್ಯ ಹಿರೇಮಠ ಪ್ರಸ್ತುತಪಡಿಸಿದ ಶ್ರೀಕೃಷ್ಣ ಪಾರಿಜಾತ ಪರಿಷ್ಕೃತ ರಂಗರೂಪ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಜಾನಪದ ಸಂಶೋಧನಾ ಕೇಂದ್ರದ ಶ್ರೀಕೃಷ್ಣ ಪಾರಿಜಾತ ಸಾವಿರ ಪ್ರಯೋಗ ಸಂಭ್ರಮಕ್ಕೆ ಜಿ.ಪಂ. ದಿಂದ ಸಹಕಾರ ನೀಡುವದಾಗಿ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಮಾತನಾಡಿ, ಜಾನಪದವನ್ನು ಆಧುನಿಕತೆಗೆ ಬದಲಾಯಿಸಿಕೊಳ್ಳುವ ನಿಟ್ಟಿನಲ್ಲಿ ನಿರಂತರ ಪ್ರಯೋಗಗಳು ನಡೆಯುತ್ತಲೇ ಇರಬೇಕು. ಇದಕ್ಕೆ ಪೂರಕವಾಗಿ ಶ್ರೀಕೃಷ್ಣ ಪಾರಿಜಾತವನ್ನು ಪರಿಷ್ಕರಿಸಿ ನಗರ ಪ್ರೇಕ್ಷಕರಿಗೂ ತಲುಪಿಸಿ ಯಶಸ್ವಿಯಾದ ಕಲಾವಿದ ದಂಪತಿಗಳಾದ ವಿಶ್ವೇಶ್ವರಿ, ಬಸವಲಿಂಗಯ್ಯಾ ಅವರ ಕಾರ್ಯ ಶ್ಲಾಘನೀಯವೆಂದು ಹೇಳಿದರು.
ಅತಿಥಿಗಳಾಗಿದ್ದ ಭಾರತ ಸಕರ್ಾರ ಸಂಸ್ಕೃತಿ ಮಂತ್ರಾಲಯ ತಜ್ಞ ಸದಸ್ಯ ಡಾ. ಶಶಿಧರ ನರೇಂದ್ರ ಮಾತನಾಡಿ, ಕೇವಲ ಸಂಶೋಧನೆಗೆ ಸೀಮಿತವಾಗಿರುವ ಉತ್ತರ ಕನರ್ಾಟಕ ಜಾನಪದ ಕಲಾ ಪ್ರಕಾರಗಳು ಪ್ರಯೋಗಗಳ ದೃಷ್ಟಿಯಿಂದ ಸೋತಿವೆ. ಯಕ್ಷಗಾನದೆತ್ತರಕ್ಕೆ ಬೆಳೆಯಲು ಸಕರ್ಾರ ಮತ್ತು ಸಂಘ ಸಂಸ್ಥೆಗಳ ಆಥರ್ಿಕ ನೆರವು ಪಡೆಯಬೇಕು. ಇದನ್ನು ಜಾನಪದ ಸಂಶೋಧಕರು, ಹವ್ಯಾಸಿ ಕಲಾವಿದರು ಬೆಂಬಲಿಸಬೇಕೆಂದು ಹೇಳಿದರು.
ಕ.ವಿ.ವ. ಸಂಘದ ಪ್ರಧಾನ ಕಾರ್ಯದಶರ್ಿ ಪ್ರಕಾಶ ಉಡಿಕೇರಿ ಮಾತನಾಡಿದರು.
ಕ.ಸಾ.ಪ. ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಪ್ರೊ. ಹೇಮಾ ಪಟ್ಟಣಶೆಟ್ಟಿ ಉಪಸ್ಥಿತರಿದ್ದರು.
ರಂಗ ನಿದರ್ೆಶಕಿ ವಿಶ್ವೇಶ್ವರಿ ಬ.ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ಕುಪ್ಪಸಗೌಡರ ನಿರೂಪಿಸಿದರು. ಸತೀಶ ತುರಮರಿ ವಂದಿಸಿದರು. ಕ.ವಿ.ವ. ಸಂಘದ ಪದಾಧಿಕಾರಿಗಳು ಹಾಗೂ ಜಾನಪದ ಸಂಶೋಧನಾ ಕೇಂದ್ರದ ಪದಾಧಿಕಾರಿಗಳು ಉಪಸ್ಥಿತರಿದ್ದರು. ನಂತರ ಶ್ರೀಕೃಷ್ಣ ಪಾರಿಜಾತ 113 ನೇ ಪ್ರಯೋಗ ಪ್ರದಶರ್ಿಸಲ್ಪಟ್ಟಿತು.