ಧಾರವಾಡ 07ನಾವು ಎಷ್ಟೆ ಉನ್ನತ ಸ್ಥಾನಕ್ಕೇರಿದರು ನಮ್ಮ ಜನನಕ್ಕೆ ಕಾರಣವಾದ ತಂದೆ-ತಾಯಿಯನ್ನು ಮರೆಯುವುದಿಲ್ಲ ಹಾಗೆಯೇ ನಮ್ಮ ಜಾನಪದವು ನಮ್ಮ ತಂದೆ-ತಾಯಿಯ ಸ್ಥಾನದಲ್ಲಿದೆ. ನಮ್ಮ ನಾಡು ನುಡಿ ಸಂಸ್ಕೃತಿಯನ್ನು ಕಟ್ಟಿಕೊಂಡಿದೆ. ಎನ್ನುವುದಕ್ಕೆ ಈ 84ನೇ ಅಖಿಲ ಭಾರತ ಸಮ್ಮೇಳನದಲ್ಲಿ ಜಾನಪದ, ನೃತ್ಯ, ನಾಟಕ ಇಂತಹ ಎಲ್ಲ ಸಾಂಸ್ಕೃತೀಕ ಕಾರ್ಯಕ್ರಮಗಳು ಯುವಕ-ಯುವತಿಯರಲ್ಲಿ ಜನಪದ ಸಂಸ್ಕೃತಿ ಬೆಳೆಸುವ ಕಾರ್ಯ ಮಾಡಲು ಸಾದ್ಯ ಎಂದು ಹಿರಿಯ ಸಾಹಿತಿಗಳಾದ ಡಾ. ವ್ಹಿ. ಸಿ. ಐರಸಂಗ ಅವರು ಮಾತನಾಡಿದರು.
ಸಾಂಸ್ಕೃತೀಕ ನಗರಿಯಲ್ಲಿ 84ನೇ ಅಖಿಲ ಭಾರತ ಸಮ್ಮೇಳನದಲ್ಲಿ ಎರಡನೇ ದಿನ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾದವು ಕನರ್ಾಟಕ ವಿದ್ಯಾವರ್ದಕ ಸಂಘದಲ್ಲಿ ಡಾ. ವ್ಹಿ. ಸಿ. ಐರಸಂಗ ಕಲಾ ತಂಡದಿಂದ ಜಾನಪದ ಗಾಯನದಲ್ಲಿ "ಮಟ್ಟೆಸ್ವಾಮಿಯ ಹಾಡು", "ಸಿದ್ಧಯ್ಯಸ್ವಾಮಿ ಬನ್ನಿ", ಮುಗುಂಡದ ಮಾದೇಶ್ವರ" ಹಾಡುಗಳನ್ನು ಸಂಘದ ಕಾರ್ಯದಶರ್ಿ ಯಮನಪ್ಪ ಜಾಲಗಾರ, ಫಕ್ಕಿರಪ್ಪ ಮಾದನಬಾವಿ, ಪ್ರಮೋದ ಕೆಂಗೇರಿ, ಶ್ರೀಧರ ಭಜಂತ್ರಿ, ಶಿವಕುಮಾರ ಮಂಗಳೂರ, ಅನಿತಾ ಆರ್, ಪ್ರೀಯಾಂಕ ಭಜಂತ್ರಿ, ಅಪೂರ್ವ ಭಜಂತ್ರಿ ಹಾಗೆಯೇ ಡೂಲಕ್ದಲ್ಲಿ ಮಹಮ್ಮದ ಶಪಿ, ಕ್ಯಾಶೊದಲ್ಲಿ ಶೆಫಿ ನುಲ್ಕರ್, ತಬಲಾದಲ್ಲಿ ಮಲ್ಲೇಶ ಹೂಗಾರ, ಈ ತಂಡದಿಂದ ಕೇಳುಗರನ್ನು ಜಾನಪದ ಕಾರ್ಯಕ್ರಮದಲ್ಲಿ ರಂಜಿಸಿದರು. ನಂತರ ಹಿರಿಯ ಸಾಹಿತಿಗಳಾದ ಡಾ. ವ್ಹಿ. ಸಿ. ಐರಸಂಗ, ಡಾ. ಪ್ರಕಾಶ ಮಲ್ಲಿಗವಾಡ, ಪ್ರಭು ಹಂಚಿನಾಳ ಈ ಎಲ್ಲಾ ಕಲಾವಿದರಿಗೆ ಪ್ರಶಸ್ತಿ ಪತ್ರ ಸವಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.