ಶರಣ ಚಿಂತನ ಮಾಲಿಕೆಯ 11ನೇ ಉಪನ್ಯಾಸದ ಪಾಕ್ಷಿಕ ಕಾರ್ಯಕ್ರಮ

Fortnightly program of 11th lecture of Sharan Chintana Maliki

ಶರಣ ಚಿಂತನ ಮಾಲಿಕೆಯ 11ನೇ ಉಪನ್ಯಾಸದ ಪಾಕ್ಷಿಕ ಕಾರ್ಯಕ್ರಮ  

ಮುಂಡರಗಿ 18: ಪಟ್ಟಣದ ತಾಲೂಕ ಶರಣ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಚೈತನ್ಯ ಶಿಕ್ಷಣ ಸಂಸ್ಥೆಯ 'ಸೌರಭ' ಇವುಗಳ ಸಂಯುಕ್ತ ಆಶ್ರಯದಲ್ಲಿ ಚೈತನ್ಯ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಸಿಗೆ ನೀರೆರೆಯುವ ಮೂಲಕ ಶರಣ ಚಿಂತನ ಮಾಲಿಕೆಯ 11ನೇ ಉಪನ್ಯಾಸದ ಪಾಕ್ಷಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 12ನೇ ಶತಮಾನದ ಕರ್ನಾಟಕದ ಕಲ್ಯಾಣ ಪುರವು ಮಾನವ ಹಿತಸಾಧನೆಯ ಕಾರ್ಯಕ್ಷೇತ್ರವಾಗಿತ್ತು. ಬಸವಾದಿ ಶರಣರು ಮನುಕುಲದ ಉದ್ದಾರಕ್ಕಾಗಿ ಮಹಾ ಮನೆಯಲ್ಲಿ ತೊಡಗಿಕೊಂಡಿರುವ ಕೀರ್ತಿ ಎಲ್ಲೆಡೆ ಹಬ್ಬಿತ್ತು ಎಂದು ನಿವೃತ್ತ ಪ್ರಾಚಾರ್ಯರಾದ ಎಸ್‌.ಬಿ.ಕೆ.ಗೌಡರ್ ಅವರು ಹೇಳಿದರು. ಬಸವಾದಿ ಶಿವಶರಣರ ಕೀರ್ತಿಯಿಂದ ಆಕರ್ಷಿತರಾಗಿ ಡೋಹರ ಕಕ್ಕಯ್ಯನವರು ಕಲ್ಯಾಣಕ್ಕೆ ಬಂದು ನೆಲೆಸಿದ್ದರು. ವಯಸ್ಸಿನಲ್ಲಿ ಹಿರಿಯರಾದ ಡೋಹರ ಕಕ್ಕಯ್ಯನವರ ಕುರಿತು ಅಪಾರ ಅಭಿಮಾನವನ್ನು ಹೊಂದಿದ ಬಸವಣ್ಣನವರು ಜಾತಿಯಿಂದ ಕೀಳಾದರೂ ಆಚರಣೆಯಲ್ಲಿ ಮೇಲುಗೈ ಹೊಂದಿದ್ದರು ಎಂದು ಕಕ್ಕಯ್ಯನವರನ್ನು ಹೊಗಳಿ ತಮ್ಮ ವಚನಗಳಲ್ಲಿ ಬರೆದಿದ್ದಾರೆ. ಜನರು ತಮ್ಮ ದೈನಂದಿನ ಜಂಜಾಟಗಳನ್ನು ಎದುರಿಸಲು ಶರಣ ಚಿಂತನೆಯನ್ನು ಮಾಡುವುದು ಅತ್ಯವಶ್ಯಕವಾಗಿರುವ ಇಂದಿನ ದಿನಮಾನಗಳಲ್ಲಿ ಮೂರು ಸಂಘಟನೆಗಳು ಸೇರಿ ಶರಣ ಚಿಂತನ ಮಾಲಿಕೆಯನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿರುವುದು ಸಂತಸದ ಸಂಗತಿ ಎಂದು ಹೇಳಿದರು. ಹೆಸರೂರು ಸರಕಾರಿ ಪ್ರೌಢಶಾಲೆ ಶಿಕ್ಷಕ ಎಚ್‌.ಎಸ್‌.ಮಹೇಶ್ ಉಪನ್ಯಾಸ ನೀಡಿ, ಶರಣರ ಅನುಭವ ಮತ್ತು ಅನುಭಾವದ ಅಂತಃಕರಣದ ಮಾತುಗಳು ಶರಣ ಸಾಹಿತ್ಯದ ವೈಶಿಷ್ಟತೆಯನ್ನು ಪಡೆದಿದೆ. ಅದನ್ನು ನಾವು ಶರಣ ಸಾಹಿತ್ಯವೆಂದು ಅನುಸರಿಸಿ ನಡೆದವನಿಗೆ ಶರಣ ಎಂದು, ಈ ಸಾಹಿತ್ಯದ ಕಿಮ್ಮತ್ತನ್ನು ಎಲ್ಲರಿಗೂ ತಿಳಿಸಲು ಸಹಾಯ ಮಾಡುವ ಸಂಘಗಳಿಗೆ ಶರಣ ಸಾಹಿತ್ಯ ಸಂಘಗಳು ಎಂದು ಕರೆದಿದ್ದೇವೆ. 12ನೇ ಶತಮಾನದ ಕಲ್ಯಾಣ ಕರ್ನಾಟಕದ ಮಹಾಮನೆಯ ಕೀರ್ತಿಯನ್ನು ಕೇಳಿ, ಮಾಳವ ಅಂದರೆ ಇಂದಿನ ಮಧ್ಯಪ್ರದೇಶದಿಂದ ಕಕ್ಕಯ್ಯನವರು ಕಲ್ಯಾಣಕ್ಕೆ ವಲಸೆ ಬಂದರು. ಕಕ್ಕಯ್ಯನವರು ಚಂಡಾಲರ ಒಂದು ಪಂಗಡವಾದ ಡೋಹರ ಪಂಗಡಕ್ಕೆ ಸೇರಿದವರಾಗಿದ್ದು, ಚರ್ಮ ಹದ ಮಾಡುವ ವೃತ್ತಿಯನ್ನು ಹೊಂದಿದ್ದರು. ಶರಣರ ಆಚಾರ-ವಿಚಾರಗಳಿಂದ ಪ್ರಭಾವಿತರಾಗಿ ಇಷ್ಟಲಿಂಗ ದೀಕ್ಷೆಯನ್ನು ಹೊಂದಿ ತನ್ನ ಆಚಾರ ಸಂಪನ್ನತೆಯಿಂದ ವೀರ ಮಾಹೇಶ್ವರನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ತಾಲೂಕು ಅಧ್ಯಕ್ಷ ಎಂ.ಜಿ.ಗಚ್ಚಣ್ಣವರ ವಹಿಸಿದ್ದರು. ಪ್ರಾರಂಭದಲ್ಲಿ ಹುಲಿಗೆಮ್ಮ ಭಜಂತ್ರಿ ಪ್ರಾರ್ಥನೆಗೈದರು. ಕಸಾಪ ಗೌರವ ಕಾರ್ಯದರ್ಶಿ ಮಂಜುನಾಥ್ ಮುಧೋಳ ಸ್ವಾಗತಿಸಿದರೆ, ಶರಣ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷ ಡಾ.ಸಂತೋಷ್ ಹಿರೇಮಠ ವಂದಿಸಿದರು. ಕಾರ್ಯಕ್ರಮದಲ್ಲಿ ಆರ್‌.ಎಲ್‌.ಪೊಲೀಸ್‌ಪಾಟೀಲ್, ವಿ.ಕೆ.ಗುಡದಪ್ಪನವರ, ಆರ್‌.ಕೆ.ರಾಯನಗೌಡ್ರು. ಶಂಕರ ಕುಕನೂರ, ವಿ.ಸಿ.ಅಲ್ಲಿಪುರ, ವಿಶ್ವನಾಥ ಉಳ್ಳಾಗಡ್ಡಿ, ಮಹೇಶ್ ಮೇಟಿ, ಎಂ.ಎಸ್‌.ಹೊಟ್ಟಿನ್, ಹನುಮರೆಡ್ಡಿ ಇಟಗಿ, ಎಂ.ಎಸ್‌.ಶೀರನಹಳ್ಳಿ, ಸಿ.ಕೆ.ಗಣಪ್ಪನವರ್, ಕೃಷ್ಣ ಸಾಹುಕಾರ್, ಎಂ.ಬಿ.ಮೇಟಿ, ಕೊಟ್ರೇಶ್ ಜವಳಿ, ಎ.ಹೆಚ್‌.ಹೇಮಾದ್ರಿ, ಜಯಶ್ರೀ ಅಳವಂಡಿ, ಅಕ್ಕಮಹಾದೇವಿ ಕೊಟ್ಟೂರ್‌ಶೆಟ್ಟರ್, ಈರಮ್ಮ ಕುಂದಗೋಳ, ವೀಣಾ ಪಾಟೀಲ್, ಮಧುಮತಿ ಇಳಕಲ್ ಇತರರು ಇದ್ದರು.