ಮಡಿವಾಳರ ಜಾಗೃತಿ ವೇದಿಕೆ ಟ್ರಸ್ಟ್ ವತಿಯಿಂದ ಉಚಿತ ಸಾಮೂಹಿಕ ವಿವಾಹ: ಧನಂಜಯ
ಬಳ್ಳಾರಿ 26: ನಗರದ ಮಡಿವಾಳರ ಜಾಗೃತಿ ವೇದಿಕೆ ಟ್ರಸ್ಟ್ ರಾಜ್ಯ ಹಾಗೂ ಜಿಲ್ಲಾಮಟ್ಟದ ಪದಾಧಿಕಾರಿಗಳ ಮೂಲಕ ಸ್ನೇಹ ಸಂಪುಟ ಸಭಾಂಗಣದಲ್ಲಿ ಸುದ್ಧಿಗೋಷ್ಠಿ ಹಮ್ಮಿಕೊಳ್ಳಲಾಯಿತು. ಇದೇ ವೇಳೆಯಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷರಾದ ಧನಂಜಯ ಅವರು ಮಡಿವಾಳರ ಜಾಗೃತಿ ವೇದಿಕೆ ಟ್ರಸ್ಟ್ (ರಿ). ವತಿಯಿಂದ ಪ್ರತಿ ವರ್ಷ ಶ್ರೀ ಮಡಿವಾಳದ ಮಾಚಿ ದೇವರ ಜಯಂತೋತ್ಸವ ವನ್ನು ಅದ್ದೂರಿಯಾಗಿ ಜಿಲ್ಲೆ ಹಾಗೂ ರಾಜ್ಯದಲ್ಲಿ ಮಟ್ಟದಲ್ಲಿ ಆಚರಿಸಿಕೊಂಡು ಬಂದಿದ್ದೇವೆ.ಅದೇ ರೀತಿಯಾಗಿ ಈ ವರ್ಷ ವಿಶೇಷವಾಗಿ ನಮ್ಮ ಸಮಾಜದ ವಧು ವರರಿಗೆ ಉಚಿತ ಸಾಮೂಹಿಕ ಏರಿ್ಡಸಲಾಗಿದ್ದು ಈ ಕಾರ್ಯಕ್ರಮವನ್ನು ಸದುಉಪಯೋಗವನ್ನು ಮಾಡಿಕೊಳ್ಳಬೇಕೆಂದು ಸಮಾಜದ ಬಂದುಗಳಲ್ಲಿ ಕೇಳಿಕೊಳ್ಳುತ್ತೇನೆ ಎಂದು ತಿಳಿಸಿದರು.
ರಾಜ್ಯದ ಪ್ರತಿಯೊಂದು ಜಿಲ್ಲೆಗಳಲ್ಲಿ ಆಯಾ ಜಿಲ್ಲಾಧ್ಯಕ್ಷರನ್ನು ಭೇಟಿಯಾಗಿ ನೋಂದಣಿ ಮಾಡಿಸತಕ್ಕದ್ದು ಎಂದು ಹೇಳಿದರು.ಹಾಗೂ ಕಾರ್ಯಕ್ರಮ ಸ್ಥಳ ಅದಿಚುಂಚನಗಿರಿ ಸಮುದಾಯ ಭವನ, ವಿಜಯನಗರ ಬೆಂಗಳೂರು-560040, 14 ಏಪ್ರಿಲ್ 2025ಸೋಮವಾರ ನೊಂದಣಿ ಮಾಡಲು 31 ಮಾರ್ಚ್ 2025, ಕೊನೆ ದಿನವಾಗಿರುತ್ತದೆ.1. ವಿವಾಹವಾಗುವ ಬಯಸುವವರು ವರನಿಗೆ ವಯಸ್ಸು 21 ವರ್ಷ ವಧುವಿಗೆ 18 ವರ್ಷ ಪೂರ್ಣಗೊಂಡಿರಬೇಕು2. ವಯಸ್ಸಿನ ಬಗ್ಗೆ ಶಾಲೆಯಿಂದ ಪಡೆದ ದಾಖಲಾತಿ ಮತ್ತು ಆಧಾರ್ ಕಾರ್ಡ್ 3. ವಧು ವರರ 3 ಭಾವಚಿತ್ರಗಳು ಹೆಚ್ಚಿನ ಮಾಹಿತಿಗಾಗಿ: ಧನಂಜಯ : 90083 43999 ಮಹೇಶ್ ಬಾಬು:98451 89176ಈ ಸಂದರ್ಭದಲ್ಲಿ ವಿ ಕೃಷ್ಣ ಗೌರವಾಧ್ಯಕ್ಷರು ಮಡಿವಾಳರ ಜಾಗೃತಿ ವೇದಿಕೆ ಟ್ರಸ್ಟ್ (ರೀ ) ಆರ್, ಮಂಜುನಾಥ ಅಧ್ಯಕ್ಷರು, ವಿ ಕೃಷ್ಣ ಗೌರವಾಧ್ಯಕ್ಷರು, ಕಾಶಪ್ಪ ಶಂಕಶ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಕಶ, ಕಲ್ಕಂಬ ಪಂಪಾಪತಿ ಹಾಗೂ ಮಡಿವಾಳ ಸಮುದಾಯದವರು ಟ್ರಸ್ಟಿನ ಪದಾಧಿಕಾರಿಗಳು ಸದಸ್ಯರ ಉಪಸ್ಥಿತರಿದ್ದರು.