ಮಂಗಳ ಗೌರಿ ಮಹಿಳಾ ಸಂಘದಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ
ಬಳ್ಳಾರಿ 28: ನಗರದ ಮಂಗಳ ಗೌರಿ ಮಹಿಳಾ ಸಂಘ ಬಳ್ಳಾರಿ ಜಿಲ್ಲಾ ಆಸ್ಪತ್ರೆ ಸಹಕಾರದಿಂದ ಇಲ್ಲಿನ ರೇಣುಕಾಚಾರ್ಯ ನಗರದ ಕಿಡ್ಸ್ ವಿಲಿನೆಯಂ ಶಾಲೆಯಲ್ಲಿ " ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು " ಡಿ.25 ರಂದು ಹಮ್ಮಿಕೊಂಡಿತ್ತು.ಶಿಬಿರದಲ್ಲಿ 180ಕ್ಕೂ ಹೆಚ್ಚು ಜನತೆ ತಪಾಸಣೆಗೆ ಒಳಗಾದರು. ಇವರಲ್ಲಿ ಎಂಟು ಜನರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರೆಫರ್ ಮಾಡಲಾಗಿದೆ. 60ಕ್ಕೂ ಹೆಚ್ಚು ಜನರಿಗೆ ಕಣ್ಣಿನ ತೊಂದರೆ ಇದ್ದರಿಂದ ಅವರಿಗೆ ಉಚಿತವಾಗಿ ಆಪರೇಷನ್ ಮಾಡಿ ಕನ್ನಡ ನೀಡಲು ನಿರ್ಧರಿಸಿದೆ. ಎಂದು ಶಿವಗೌರಿ ಮಂಗಳ ಮಹಿಳಾ ಸಂಘದ ಅಧ್ಯಕ್ಷೆ ಜೆ. ಬಿ. ಸುಮಂಗಳಮ್ಮ ತಿಳಿಸಿದ್ದಾರೆ.ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಬಿಜೆಪಿಯ ಮುಖಂಡ ಕೆ.ಎ.ರಾಮಲಿಂಗಪ್ಪ, ಪಾಲಿಕೆ ಸದಸ್ಯೆ ಸುರೇಖಾ ಮಲ್ಲನಗೌಡ, ನಗರಸಭೆ ಮಾಜಿ ಸದಸ್ಯ ಗುರುಸಿದ್ದಪ್ಪ ಮೊದಲಾದವರು ಆಗಮಿಸಿದ್ದರು.