ಗದಗ 04 : ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ದುರ್ಬಲ ಪ್ರದೇಶದಲ್ಲಿನ ಮತದಾರರ ಮನೋಸ್ಥೈರ್ಯ ಹೆಚ್ಚಿಸಲು ಪೊಲೀಸ ಇಲಾಖೆ ಹಾಗೂ ಕಂದಾಯ ಇಲಾಖೆಗಳ ಜಂಟಿಯಾಗಿ ಜನರ ಬಳಿ ತೆರಳಿ ವಿಶ್ವಾಸ ಮೂಡಿಸುವ ಅಮಿಷಕ್ಕೆ ಒತ್ತಡಕ್ಕೆ ಓಳಗಾಗದೇ ತಪ್ಪದೇ ಮತ ಚಲಾಯಿಸಲು ಪ್ರೇರಣಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ದಿ. 03ರಂದು ಸಾಯಂಕಾಲ 05.30 ಗಂಟೆಗೆ ವಲ್ನರೇಬಲ್ ಪ್ರದೇಶ ಎಂದು ಗುರುತಿಸಲ್ಪಟ್ಟಿರುವ ಗದಗ ಶಹರ ಪೊಲೀಸ ಠಾಣೆಯ ವ್ಯಾಪ್ತಿಯ ಗಂಗಾಪೂರ ಪೇಟೆಯಲ್ಲಿ ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿಯವರು ಮಾತನಾಡಿ ನಿಷ್ಪಕ್ಷಪಾತವಾಗಿ, ಧೈರ್ಯವಾಗಿ ಮತದಾನ ಮಾಡಬೇಕು. ಅಂಗವಿಕಲರಿಗೆ, ವೃದ್ದರಿಗೆ ವ್ಹೀಲ್ ಚೇರ್ ಮತ್ತು ವಾಹನದ ವ್ಯವಸ್ತೆಯನ್ನು ಮಾಡಲಾಗಿರುತ್ತದೆ ಎಂದು ತಿಳಿಸಿದರು. ಓ.ಬಿ. ಕಲ್ಲೇಶಪ್ಪ ಡಿವಾಯ್ಎಸ್.ಪಿ ಗದಗ ಉಪ ವಿಭಾಗ ಗದಗ ಇವರು ಮಾತನಾಡಿ ಮತದಾರರು ಯಾವುದೇ ಆಮಿಷಕ್ಕೆ ಒಳಗಾಗದೇ, ಕಡ್ಡಾಯವಾಗಿ ಮತದಾನ ಮಾಡಬೇಕು. ತಹಶೀಲ್ದಾರರಾದ ಶ್ರೀನಿವಾಸ ಮೂತರ್ಿ ಕುಲಕಣರ್ಿಯವರು ಮತದಾರರಿಗೆ ಪ್ರಮಾಣ ವಚನ ಬೋಧಿಸಿದರು, ಎಸ್.ಕೆ.ಹೋಳೆಯಣ್ಣವರ ಸಿಪಿಐ ಗದಗ ಶಹರ ವೃತ್ತರವರು ಮತದಾನ ಮಾಡದಂತೆ ಹೆದರಿಸುವ ಮತ್ತು ಮುಕ್ತ ಮತದಾನಕ್ಕೆ ತೊಂದರೆ ಮಾಡುವವರ ವಿರೋಧ ಕಾನೂನು ಕ್ರಮ ಜರುಗಿಸುವದಾಗಿ ಹೇಳಿದರು. ಸೊಮೇಶ ಗೆಜ್ಜಿ ಪಿಎಸ್ಐ ಗದಗ ಶಹರ ಪೊಲೀಸ ಠಾಣೆ ಮಾತನಾಡಿ ಮತದಾರರಿಗೆ ಯಾವುದೇ ರೀತಿಯ ಭೀತಿ ಉಂಟುಮಾಡುವುದಾಗಲಿ, ಅಮಿಷ ತೊರಿಸುವುದಾಗಲಿ, ಮಾಡುವಂತಿಲ್ಲ. ಮತದಾರರು ತಮಗೆ ಇಷ್ಟವಾದ ಅಭ್ಯರ್ಥಿ ಗೆ ಮತ ಹಾಕಲು ಚುನಾವಣಾ ಆಯೋಗವು ಹಲವಾರು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಮತದಾರರು ನಿರ್ಭಯವಾಗಿ ಮತದಾನ ಮಾಡಬೇಕು ಎಂದು ತಿಳಿಸಿದರು.