ಗದಗ: ಮತದಾರರಿಗೆ ಮತದಾನಕ್ಕೆ ಪ್ರೇರಿಪಿಸಲು ಆಶಾ ಕಾರ್ಯಕರ್ತೆಯರಿಗೆ ಜಿಲ್ಲಾಧಿಕಾರಿ ಕರೆ

ಗದಗ 08:  ಪ್ರಜಾಪ್ರಭುತ್ವ ಬಲಪಡಿಸಲು  ಏಪ್ರಿಲ್ 23 ರಂದು ನಡೆಯುವ ಮತದಾನದಲ್ಲಿ  ಅರ್ಹ ಮತದಾರರು  ನಿರ್ಭಿತ , ನಿಷ್ಪಕ್ಷಪಾತವಾಗಿ   ತಪ್ಪದೇ ಮತ ಚಲಾಯಿಸುವಂತೆ ಜಿಲ್ಲೆಯ ಎಲ್ಲ ಆಶಾ ಕಾರ್ಯಕರ್ತೆಯರು ತಮ್ಮ ವ್ಯಾಪ್ತಿಯ ಮತದಾರರನ್ನು  ಪ್ರೇರೇಪಿಸಬೇಕು  ಎಂದು ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ನುಡಿದರು. ಗದಗ ಜಿಲ್ಲಾಡಳಿತ ಭವನದ ಮುಖ್ಯ ಸಭಾಂಗಣದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಏರ್ಪಡಿಸಿದ  ಜಿಲ್ಲೆಯ ಆಶಾ ಕಾರ್ಯಕತರ್ೆಯರಿಗಾಗಿ ಜರುಗಿದ ಮತದಾನ ಜಾಗೃತಿ ಕಾರ್ಯಕ್ರಮವನ್ನುದ್ದೇಶಿಸಿ ಅವರು  ಮಾತನಾಡಿದರು.  

ಗದಗ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ  ಸ್ವೀಪ್ ಸಮಿತಿ ಅಧ್ಯಕ್ಷ ಮಂಜುನಾಥ ಚವ್ಹಾಣ ಅವರು ಮಾತನಾಡಿ ಮತದಾನ ಪ್ರಮಾಣ ಹೆಚ್ಚಿಸಲು  ಹಾಗೂ ನ್ಯಾಯಸಮ್ಮತವಾಗಿ ಚುನಾವಣೆಗಳನ್ನು ನಡೆಸಲು  ಈಗಾಗಲೇ ಸ್ವೀಪ್ ಸಮಿತಿಯಿಂದ ಜಿಲ್ಲೆಯಾದ್ಯಂತ  ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮತದಾರ ಜಾಗೃತಿ ಕಾರ್ಯಕ್ರಗಳನ್ನು ಎರ್ಪಡಿಸಲಾಗುತ್ತಿದೆ ಎಂದರು. ಮತಗಟ್ಟೆ ಹಂತದಲ್ಲೂ ಸಹ ಮತ ಯಂತ್ರ ಪ್ರಾತ್ಯಕ್ಷೀಕೆ ಹಾಗೂ ಮತದಾನ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದೆ.    ಎಲ್ಲ ಆಶಾ ಕಾರ್ಯಕತರ್ೆಯರು ತಮ್ಮ  ಕುಟುಂಬದ ಸದಸ್ಯರು ಸೇರಿದಂತೆ ತಾವು ಕಾರ್ಯ ನಿರ್ವಹಿಸುವ ಪ್ರದೇಶದ ಅರ್ಹ ಮತದಾರರು ಮತದಾನ ಪ್ರಕ್ರಿಯೆಯಲ್ಲಿ  ಪಾಲ್ಗೊಳ್ಳಲು ಪ್ರೋತ್ಸಾಹಿಸಬೇಕು ಎಂದು ಚವ್ಹಾಣ ನುಡಿದರು. 

ಗದಗ ಜಿಲ್ಲಾ ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಟಿ ದಿನೇಶ ಅವರು   ಆಶಾ ಕಾರ್ಯಕತರ್ೆಯರು ಮತದಾರ ಜಾಗೃತಿ ಕುರಿತು ನಿರ್ವಹಿಸಬೇಕಾದ ಕಾರ್ಯಗಳ ಕುರಿತು ವಿವರಿಸಿದರು  ಮತಯಂತ್ರ ಖಾತರಿ ಪ್ರಾತ್ಯಕ್ಷಿಕೆ ಹಾಗೂ ಕಿರುಚಿತ್ರವನ್ನು ಪ್ರದಶರ್ಿಸಲಾಯಿತು.

          ಕಾರ್ಯಕ್ರಮದಲ್ಲಿ  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೀರೂಪಾಕ್ಷರೆಡ್ಡಿ. ಎಸ್.ಮಾದಿನೂರ, ಆರ್.ಸಿ.ಎಚ್ ಅಧಿಕಾರಿ ಡಾ. ಎಸ್.ಎಂ.ಹೊನಕೇರಿ ಹಾಗೂ ಆಶಾ ಕಾರ್ಯಕತರ್ೆಯರು ಭಾಗವಹಿಸಿದ್ದರು.      

        ನಂತರ  ಗದಗ ಜಿಲ್ಲಾಡಳಿತ ಭವನದ ಆವರಣದಲ್ಲಿ  ಮತದಾರ ಕುರಿತು ಜಾಗೃತಿ ಮೂಡಿಸಲು  ಆಶಾ ಕಾರ್ಯಕತರ್ೆಯರಿಂದ  ಮಾನವ ಸರಪಳಿ ಏರ್ಪಡಿಸಲಾಗಿತ್ತು.