ಗದಗ 18: ಬರ ಪರಿಸ್ಥಿತಿಯ ಹಿನ್ನಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಆಗದಂತೆ ಮೇವು ಬ್ಯಾಂಕನ್ನು ಸ್ಥಾಪನೆ ಮಾಡಲಾಗಿದ್ದು, ಗದಗ ಜಿಲ್ಲೆಯ ಬಿಂಕದಕಟ್ಟಿಯ ಮೇವು ಬ್ಯಾಂಕಿಗೆ ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಬೇಟಿ ನೀಡಿ ಪರಿಶೀಲನೆ ನಡೆಸಿದರು.
ಗದಗ ತಹಶೀಲ್ದಾರ ಶ್ರೀನಿವಾಸ ಮೂತರ್ಿ ಕುಲಕಣರ್ಿ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮೌನೇಶ ಬಡಿಗೇರ, ಜಂಟಿ ಕೃಷಿ ನಿದರ್ೇಶಕ ಬಾಲರೆಡ್ಡಿ, ಪಶು ಸಂಗೋಪನಾ ಸಹಾಯಕ ನಿದರ್ೇಶಕ ಡಾ. ತಿಪ್ಪಣ್ಣ, ಬಿಂಕದಕಟ್ಟಿ ಪಶು ವೈದ್ಯಾಧಿಕಾರಿ ಡಾ. ಹೊಸಮಠ ಉಪಸ್ಥಿತರಿದ್ದರು.
ಗ್ರಾಮೀಣ ಪ್ರದೇಶದಲ್ಲಿ ಬರಗಾಲ ಆವರಿಸಿದಾಗ ಜನರು ವಲಸೆ ಹೋಗುವುದನ್ನು ತಪ್ಪಿಸಿ ಉದ್ಯೋಗ ಒದಗಿಸಿ ಆಥರ್ಿಕ ಸ್ವಾವಲಂಬಿಗಳನ್ನಾಗಿ ಉದ್ಯೋಗ ಖಾತರಿ ಯೋಜನೆಯನ್ನು ಜಾರಿಗೆ ತಂದಿದ್ದು, ಗದಗ ಜಿಲ್ಲೆಯ ಬಿಂಕದಕಟ್ಟಿಯಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಕಾಮಗಾರಿಯನ್ನು ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಬೇಟಿ ನೀಡಿ ಪರಿಶೀಲಿಸಿದರು. ತದನಂತರ ಡಂಬಳದ ಗೋಶಾಲೆಗೆ ಜಿಲ್ಲಾಧಿಕಾರಿಗಳು ಭೇಟಿ ನೀಡಿದರು.