ಗದಗ 12: ಪ್ರಜಾಪ್ರಭುತ್ವ ಬಲಪಡಿಸುವಲ್ಲಿ ಲೋಕಸಭಾ ಚುನಾವಣೆ ಕರ್ತವ್ಯವನ್ನು ಅಚ್ಚುಕಟ್ಟಾಗಿ, ನ್ಯಾಯಸಮ್ಮತವಾಗಿ ಹಾಗೂ ಪಾರದರ್ಶಕವಾಗಿ ನಿರ್ವಹಿಸಬೇಕು. ಈ ನಿಟ್ಟಿನಲ್ಲಿ ಸೆಕ್ಟರ್ ಆಫೀಸರ್, ಫ್ಲಾಯಿಂಗ ಸ್ಕ್ವಾಡ್ ಟೀಮ್ (ಎಫ್ ಎಸ್ ಟಿ), ಸ್ಟಾಟಿಕ್ ಸರ್ವಲನ್ಸ್ ಟೀಮ್ (ಎಸ್. ಎಸ್.ಟಿ) ತಂಡಗಳು ಹೆಚ್ಚಿನ ಜವಾಬ್ದಾರಿಯಿಂದ ಹಾಗೂ ಚುರುಕಿನಿಂದ ಕೆಲಸ ನಿರ್ವಹಿಸಬೇಕು ಎಂದು ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ನುಡಿದರು.
ಗದಗ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ನಲ್ಲಿ ಲೋಕಸಭಾ ಚುನಾವಣಾ ಪ್ರಯುಕ್ತ ಗದಗ ಸೆಕ್ಟರ್ ಆಫೀಸರ್, ಫ್ಲಾಯಿಂಗ್ ಸ್ಕ್ವಾಡ್ ಟೀಮ್, ಸ್ಟ್ಯಾಟಿಕ್ ಸರ್ವಲನ್ಸ್ ಸ್ಕ್ವಾಡ್ ಇವರುಗಳ ತರಬೇತಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಗದಗ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾದಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷ ಮಂಜುನಾಥ ಚವ್ಹಾಣ ಅವರು ಮಾತನಾಡಿ ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಅಕ್ರಮ ನಡೆಯುವುದರ ಕುರಿತು ದೂರುಗಳು ಹಾಗೂ ಸಿ ವಿಜಿಲ್ನಲ್ಲಿ ಬರುವ ದೂರುಗಳನ್ನು ಪರಿಶೀಲಿಸಿ ಅವುಗಳ ಕುರಿತು ಕೈಕೊಂಡ ಕ್ರಮಗಳ ಕುರಿತು ಶೀಘ್ರವಾಗಿ ವರದಿಯನ್ನು ಮುಖ್ಯ ಚುನಾವಣಾಧಿಕಾರಿಗಳಿಗೆ ಕಳುಹಿಸಬೇಕಾಗುತ್ತದೆ. ಆದುದರಿಂದ ಸದಾ ಸನನಿಧ್ಯತೆಯಿಂದ ಕರ್ತವ್ಯಗಳನ್ನು, ನಿಷ್ಪಕ್ಷಪಾತವಾಗಿ ನಡೆಸಲು ಅಧಿಕಾರಿಗಳು ಆಸಕ್ತಿಯಿಂದ ಕೆಲಸ ಮಾಡಬೇಕು ಎಂದರು.
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಹಾಗೂ ಸಹಾಯಕ ಚುನಾವಣಾಧಿಕಾರಿ ಸದಾಶಿವ ಮರ್ಜಿ ಅವರು ಚುನಾವಣೆ ಕಾರ್ಯವು ದಕ್ಷತೆ ಹಾಗೂ ಚುರುಕಿನಿಂದ ಕಾರ್ಯನಿರ್ವಹಿಸಲು ಎಸ್.ಎಸ್.ಟಿ. ಮತ್ತು ಎಫ್.ಎಸ್.ಟಿ. ತಂಡಗಳ ಕಾರ್ಯನಿರ್ವಹಣೆ ಕುರಿತು ಮಾಹಿತಿ ನೀಡಿ ಜಿಲ್ಲಾ ಚುನಾವಣಾ ವ್ಯವಸ್ಥೆಯ ಕಣ್ಣು ಮತ್ತು ಕಿವಿಗಳಾಗಿ ಅಂಗಗಳಂತೆ ಕೆಲಸ ನಿರ್ವಹಿಸಬೇಕಾಗುತ್ತದೆ ಎಂದರು.
ಲೋಕಸಭಾ ವ್ಯಾಪ್ತಿಯಲ್ಲಿ ವಿಧಾನಸಭಾ ಕ್ಷೇತ್ರಗಳಲ್ಲಿ ಅಗತ್ಯದ ಎಸ್.ಎಸ್.ಟಿ. ತಂಡಗಳನ್ನು ನಿಯೋಜಿಸಲಾಗಿದೆ. ಚುನಾವಣೆ ಪ್ರಚಾರಕ್ಕಾಗಿ ಅಕ್ರಮ ಹಣ, ಸಾಮಗ್ರಿ ಸರಬರಾಜು ಮಾಡುವುದನ್ನು ತಡೆಗಟ್ಟಲು ಪ್ರತಿ ಚೆಕ್ ಪೋಸ್ಟನಲ್ಲಿ ಶೋಧ ಕಾರ್ಯ ನಡೆಯುತ್ತಿದೆ. ಚೆಕ್ ಪೋಸ್ಟ ನಲ್ಲಿ ಬರುವ ವಾಹನಗಳನ್ನು ತಪಾಸಣೆ ಮಾಡಿ ಚುನಾವಣೆ ಕುರಿತು ಅಕ್ರಮ ವಸ್ತು, ಹಣ ಇದ್ದರೆ ವಶಕ್ಕೆ ತೆಗೆದುಕೊಳ್ಳಬೇಕು. ಹಾಗೂ ಇಡಿ ಸಂಘತಿಯನ್ನು ವಿಡಿಯೋ ರೆಕಾರ್ಡ ಮಾಡಿ ವರದಿಯನ್ನು ಮುಖ್ಯ ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕಾಗುತ್ತದೆ.ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದಂತೆ ಸಹಾಯಕ ಚುನಾವಣಾಧಿಕಾರಿಗಳಿಗೆ, ಜಿಲ್ಲಾ ಚುನಾವಣಾಧಿಕಾರಿಗಳಾದ ಅಪರ ಜಿಲ್ಲಾಧಿಕಾರಿಳಿಗೆ ಬಂದ ದೂರುಗಳನ್ನು ಹಾಗೂ ಚುನಾವಣೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಫ್ಲಾಯಿಂಗ್ ಸ್ಕ್ವಾಡ ಟೀಮ್ ಸದಾ ಕಾಲ ಕಾರ್ಯನಿರ್ವಹಿಸಬೇಕಾಗುತ್ತದೆ. ದೂರುಗಳನ್ನು ಸ್ವೀಕರಿಸಿದ ನಂತರ ದಿ. ವೇಳೆ ಮತ್ತು ಸಮಯಗಳನ್ನು ದಾಖಲಿಸಿ ದೂರುಗಳಿಗೆ ಅನುಸರಣಾ ವರದಿಯನ್ನು ಸಹಾಯಕ ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕು. ಸೆಕಟ್ಟೆರ ಅಧಿಕಾರಿಗಳು ಮತದಾನಕ್ಕಿಂತ ಮುಂಚಿತವಾಗಿ ಮತಗಟ್ಟೆಗಳಲ್ಲಿ ಮೂಲಭೂತ ಸೌಕರ್ಯಗಳ, ವಿವಿ ಪ್ಯಾಟ್ ಯಂತ್ರದ ಕಾರ್ಯನಿರ್ವಹಣೆ, ಮತಗಟ್ಟೆಯಲ್ಲಿನ ಸಿಬ್ಬಂದಿಗಳ ನಿರ್ವಹಣೆ, ತರಬೇತಿ ಮುಂತಾದವುಗಳನ್ನು ಪರಿಶೀಲಿಸುವುದು ಬಹು ಮುಖ್ಯವಾಗಿರುತ್ತದೆ. ಎಂದು ಸೆಕ್ಟರ್ ಅಧಿಕಾರಿಗಳ ಕೆಲಸವಾಗಿರುತ್ತವೆ ಎಂದು ಅವರು ಸದಾಶಿವ ಮರ್ಜಿ ತಿಳಿಸಿದರು.
ಜಿಲ್ಲಾ ನೋಡಲ್ ಅಧಿಕಾರಿಗಳು ಹಾಗೂ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರವಿ ಕರಿಲಿಂಗಣ್ಣವರ್ ಅವರು ಮಾತನಾಡಿ ಚುನಾವಣೆಯನ್ನು ಶಾಂತಿಯುತವಾಗಿ, ಪಾರದರ್ಶಕವಾಗಿ ನಡೆಸಲು ಎಲ್ಲ ತಂಢಗಳನ್ನು ಹೊಂದಾಣಿಕೆ ಹಾಗೂ ಸಮನ್ವಯತೆಯಿಂದ, ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಬೇಕು ಎಂಧರು.
ತರಬೇತಿ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಗದಗ ಜಿಮ್ಸ ಆಡಳಿತಾಧಿಕಾರಿ ಪಿ.ಎಸ್. ಮಂಜುನಾಥ, ಸಹಾಯಕ ಚುನಾವಣಾಧಿಕಾರಿಗಳು, ಎಸ್.ಎಸ್.ಟಿ., ಎಫ್.ಎಸ್.ಟಿ, ತಂಡದ ಅಧಿಕಾರಿ ಸಿಬ್ಬಂದಿ ಹಾಗೂ ಸೆಕ್ಟರ್ ಅಧಿಕಾರಿಗಳು ಭಾಗವಹಿಸಿದ್ದರು.