ಲೋಕದರ್ಶನ ವರದಿ
ಗದಗ 10: ಅನೇಕ ವಿರಳ ರೋಗಗಳು ಹಾಗೂ ಸಾಮಾನ್ಯ ರೋಗಗಳನ್ನು ಪತ್ತೆ ಹಚ್ಚಲು ಉಜಟಿಜ & ಆಓಂ ಖಿಜಛಿಟಿಠಟಠರಥಿ ನಂತಹ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಕಡಿಮೆ ಸಮಯದಲ್ಲಿ ವರದಿಯನ್ನು ಕೊಡಬಹುದಾಗಿದೆ. ಇಂತಹ ವಿರಳ ರೋಗಗಳನ್ನು ಪತ್ತೆ ಹಚ್ಚುವುದರಲ್ಲಿ ಜೀವ ರಸಾಯನ ಶಾಸ್ತ್ರದ ಕೊಡುಗೆ ಅಪಾರ.
ಈ ನಿಟ್ಟಿನಲ್ಲಿ ವೈದ್ಯರುಗಳಲ್ಲಿ ಹಾಗೂ ಜೀವರಸಾಯನ ಶಾಸ್ತ್ರದ ಸ್ನಾತಕೋತ್ತರವಿದ್ಯಾರ್ಥಿಗಳಿಗೆ ವಿಷೇಶವಾಗಿ ದಿ: 10 ರಂದು ಗದಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಜೀವರಸಾಯನ ಶಾಸ್ತ್ರದ ವತಿಯಿಂದ "ಉಜಟಿಜ & ಆಓಂ ಆಧುನಿಕ ತಂತ್ರಜ್ಞಾನಗಳಿಂದ ರೋಗಗಳ ಪತ್ತೆ ಹಚ್ಚುವಿಕೆಯ" ಕುರಿತು ವೈದ್ಯಕೀಯ ಕಾರ್ಯಗಾರವನ್ನು ಡಾ.ತ್ರಿವೇಣಿ ಜಂಬಾಳೆ ಅವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು. ಪ್ರಾಂಶುಪಾಲರು ಹಾಗೂ ಜೀವರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಶ್ರೀನಿವಾಸ ದೇಶಪಾಂಡೆಯವರು ಅತಿಥಿಗಳನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದರು. ಕರ್ನಾಟಕ ಸರ್ಕಾರದ ಯುವ ಮತ್ತು ಕ್ರೀಡಾ ಇಲಾಖೆಯ ಅಪರ ಕಾರ್ಯದರ್ಶಿಗಳಾದ ಡಾ.ಕಲ್ಪನಾ ಗೋಪಾಲನ್ ಕಾರ್ಯಗಾರವನ್ನು ಉದ್ಘಾಟಿಸಿದರು.
ವೈದ್ಯೋ ನಾರಾಯಣೋ ಹರಿ ಎಂಬಂತೆ ವೈದ್ಯ ವೃತ್ತಿಯು ಅತ್ಯಂತ ಪವಿತ್ರವಾಗಿದ್ದು, ರೋಗಿಗಳ ನೋವನ್ನು ನಿವಾರಿಸುವ ಕೆಲಸವನ್ನು ವೈದ್ಯರುಗಳು ಮಾಡಬೇಕು ಮತ್ತು ದೇಶದಲ್ಲಿ ವಿಶ್ವ ಬ್ಯಾಂಕ್ನ ವರದಿಯ ಪ್ರಕಾರ ಹತ್ತುಸಾವಿರ ಜನಸಂಖ್ಯೆಗೆ ಏಳು ವೈದ್ಯರಿರುತ್ತಾರೆ, ಇದು ಅತಿ ಕಡಿಮೆಯಾಗಿದ್ದು ಯುವ ಪೀಳಿಗೆಯು ವೈದ್ಯ ವೃತ್ತಿಯನ್ನು ಪಡೆದು ನಿಷ್ಠೆ, ಗೌರವಗಳಿಂದ ಜನ ಸೇವೆಯನ್ನು ಮಾಡಬೇಕೆಂದು ವೈದ್ಯ ವಿದ್ಯಾಥರ್ಿಗಳನ್ನು ಹಾಗೂ ವೈದ್ಯರನ್ನು ಉದ್ದೇಶಿಸಿ ಮಾತನಾಡಿದರು.
ವಿಷೇಶವಾಗಿ ಈ ವೈದ್ಯಕೀಯ ಕಾರ್ಯಗಾರದಲ್ಲಿ ರಂಗೋಲಿ, ಈಡಿಣಣ ಅಚಿಡಿತಟಿರ ಹಾಗೂ ವೈದ್ಯಕೀಯ ಕವನ ಸಂಕಲನಗಳನ್ನು ಆಯೋಜಿಸಲಾಗಿತ್ತು. ಖ್ಯಾತ ತಜ್ಞರಾದ ಡಾ.ಟಿ.ಎಸ್ ಕೇಶವಪ್ರಸಾದ, ಡಾ.ಶಿವಾಜಿ ಜಾದವ್, ಡಾ.ರವೀಶಗೌಡ ಮತ್ತು ಡಾ.ಬಾಣಪ್ಪ, ಡಾ.ಕೆ ಗೋಡಕಿಂಡಿ ಹಾಗೂ ಡಾ.ಹೆಚ್ ಶ್ರೀನಿವಾಸ ರವರು ಆಧುನಿಕ ತಂತ್ರಜ್ಞಾನಗಳಿಂದ ರೋಗಗಳ ಪತ್ತೆ ಹಚ್ಚುವಿಕೆಯ" ಕುರಿತು ಉಪನ್ಯಾಸ ನೀಡಿದರು.
5ವಸಂತಗಳು ಪೂರೈಸುತ್ತಿರುವ ಈ ಸುಸಂದರ್ಭದಲ್ಲಿ ಅಂಬೆಗಾಲನ್ನಿಡುತ್ತಿರುವ ಜಿಮ್ಸ್ ಸಂಸ್ಥೆಯಲ್ಲಿ ಸಂಶೋಧನೆ, ಆರೋಗ್ಯ ಸೇವೆ ಮತ್ತು ವೈದ್ಯಕೀಯ ಶಿಕ್ಷಣ ರಂಗ ದಲ್ಲಿ ಇಂತಹ ವೈದ್ಯಕೀಯ ಕಾರ್ಯಗಾರಗಳು ದೇಶದ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಗಳೊಂದಿಗೆ ಸರಿಸಮಾನಾಗಿ ನಡೆಸುತ್ತಿರುವುದು ಹಾಗೂ ಗೌರವಾನ್ವಿತ ಕನರ್ಾಟಕಸರ್ಕಾರದ ಯುವ ಮತ್ತು ಕ್ರೀಡಾ ಇಲಾಖೆಯ ಅಪರ ಕಾರ್ಯದರ್ಶಿಗಳಾದ ಡಾ.ಕಲ್ಪನಾ ಗೋಪಾಲನ್ರವರು ಪಂಚ ವಸಂತೋತ್ಸವದ ಸಂಭ್ರಮವನ್ನು ಉದ್ಘಾಟಿಸುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯವೆಂದು ಸಂಸ್ಥೆಯ ನಿದರ್ೇಶಕರಾದ ಡಾ.ಪಿ.ಎಸ್.ಭೂಸರಡ್ಡಿ ಅಭಿಪ್ರಾಯ ಪಟ್ಟರು. ಕಾರ್ಯಗಾರದಲ್ಲಿ 150ಕ್ಕೂ ಹೆಚ್ಚು ವೈದ್ಯರುಗಳು ಹಾಗೂ ಸ್ನಾತಕೋತ್ತರ ವಿದ್ಯಾಥರ್ಿಗಳು ಭಾಗವಹಿಸಿದ್ದರು.