ಗದಗ : ಮತದಾನ ಜಾಗೃತಿ ಅಂಗವಾಗಿ ಜಿಲ್ಲಾ ಮಟ್ಟದ ಕುಸ್ತಿ ಪಂದ್ಯಾವಳಿ

ಗದಗ 03: ದಿ. 2ರಂದು ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಮತದಾನ ಜಾಗೃತಿ ಅಂಗವಾಗಿ ಜಿಲ್ಲಾ ಮಟ್ಟದ ಕುಸ್ತಿ ಪಂಧ್ಯಾವಳಿಯನ್ನು ಪುರುಷರಿಗೆ ಹಾಗೂ ಮಹಿಳೆಯರಿಗೆ ಜಿಲ್ಲಾ ಸ್ವೀಪ ಸಮಿತಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಗದಗ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿತ್ತು. ಜಿಲ್ಲೆಯ ಎಲ್ಲಾ ತಾಲೂಕಿನ ವಿವಿಧ ಕ್ರೀಡಾಪಟುಗಳು ಭಾಗವಹಿಸಿದ್ದರು. ಮಂಜುನಾಥ್ ಆರ್. ಚವ್ಹಾಣ, ಭಾ.ಅ.ಸೇ, ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿಗಳು ಹಾಗೂ ಅದ್ಯಕ್ಷರು, ಜಿಲ್ಲಾ ಸ್ವೀಪ ಸಮಿತಿ ಇವರು ಕುಸ್ತಿ ಪಂಧ್ಯಾವಳಿಗೆ ಚಾಲನೆ ನೀಡಿ ಪ್ರಜಾಪ್ರಭುತ್ವದಲ್ಲಿ ಮತದಾನ ಅತ್ಯಂತ ಮಹತ್ವವಾದುದು. ನಮ್ಮ ಮತ ನಮ್ಮ ಶಕ್ತಿ, ಕಡ್ಡಾಯವಾಗಿ ಮತ ಚಲಾಯಿಸೋಣ ಎಂಬುದಾಗಿ ಕರೆ ನೀಡಿ ಕ್ರೀಡಾಪಟುಗಳು ಕ್ರೀಡಾ ಮನೋಭಾವದಿಂದ ಕುಸ್ತಿಯಲ್ಲಿ ಭಾಗವಹಿಸಬೇಕು. ತಮ್ಮ ಸಂಬಂಧಿಗಳಿಗೆ ಕಡ್ಡಾಯವಾಗಿ ಮತಗಟ್ಟೆಗೆ ತೆರಳಿ ಮತ ಚಲಾಯಿಸಲು ಪ್ರೇರೆಪಿಸಬೇಕೆಂಬುದಾಗಿ ತಿಳಿಸಿದರು. ಸಮಾರಂಭದಲ್ಲಿ ಸ್ವೀಪ್ ಸಮಿತಿಯ ಸದ್ಸಯ ಕಾರ್ಯದಶರ್ಿಗಳಾದ ಟಿ. ದಿನೇಶರವರು ಸಹಾಯಕ ನಿದರ್ೇಶಕ ಬಿ.ಬಿ. ವಿಶ್ವನಾಥ್, ಎಂ.ಎಸ್. ಕುಚಬಾಳ, ಸಹಾಯಕ ಯುವಜನ ಸೇವಾ ಮತ್ತು ಕ್ರೀಡಾಧಿಕಾರಿಗಳು ಹಾಗೂ ಗಣಾಚಾರ, ಹುಬ್ಬಳ್ಳಿ, ಲೋಕಸಭಾ ಚುನಾವಣೆಯ ಜಿಲ್ಲಾ ರಾಯಭಾರಿಯಾದ ಕು.ಪ್ರೇಮಾ ಹುಚ್ಚಣ್ಣನವರ ಹಾಗೂ ವಿವಿಧ ಗಣ್ಯರು ಭಾಗವಹಿಸಿದ್ದರು.