ಗದಗ 22: ತೀವ್ರ ಬರ ಹಿನ್ನಲೆಯಲ್ಲಿ ಜಿಲ್ಲೆಯ ಜಾನುವಾರುಗಳಿಗೆ ಮೇವು ಪೊರೈಸುವುದಕ್ಕಾಗಿ ಮಾ. 16ರಂದು ಮುಂಡರಗಿಯ ಡೋಣಿ ಹಾಗೂ ಶಿರಹಟ್ಟಿಯ ಎಪಿಎಂಸಿ ಗಳಲ್ಲಿ ಮೇವು ಬ್ಯಾಂಕ್ ತೆರೆಯಲಾಗಿದೆ.ಇಲ್ಲಿ ತಲಾ 5 ಮೆಟ್ರಿಕ್ ಟನ್ ಮೇವನ್ನು ಸಂಗ್ರಹಿಸಲಾಗಿದೆ. ಮಾ. 19 ರಂದು ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿಯ ಮೇವು ಬ್ಯಾಂಕ್ ನಲ್ಲಿ 6.9 ಟನ್ ಮುಂಡರಗಿ ತಾಲೂಕಿನ ಕದಾಂಪುರ ಮೇವು ಬ್ಯಾಂಕ್ನಲ್ಲಿ 6.5 ಮೆ.ಟನ್ ಹಾಗೂ ಬಾಗೇವಾಡಿಯಲ್ಲಿ 9.3 ಮೆ.ಟನ್ ಮೇವು ಇದ್ದು, ಆಯಾ ಮೇವು ಬ್ಯಾಂಕ್ ವ್ಯಾಪ್ತಿಯಲ್ಲಿ ಜಾನುವಾರುಗಳನ್ನು ಹೊಂದಿರುವವರು ಪಶು ವೈದ್ಯಕೀಯ ನೀಡಿರುವ ಪ್ರಮಾಣ ಪತ್ರದೊಂದಿಗೆ ಬಂದು ಪ್ರತಿ ಕೆಜಿಗೆ 2 ರೂ ರಿಯಾಯ್ತಿ ದರದಲ್ಲಿ ನಿಗದಿತ ಮೇವನ್ನು ಪಡೆಯಬಹುದಾಗಿದೆ ಎಂದು ಪಶು ವೈದ್ಯ ಇಲಾಖೆ ತಿಳಿಸಿದೆ. ಬೆಳ್ಳಟ್ಟಿಯ ಮೇವು ಬ್ಯಾಂಕಿಗೆ ಗದಗ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಟಿ.ದಿನೇಶ ಬೇಟಿ ನೀಡಿ ಪರಿಶೀಲಿಸಿದರು.