ಗದಗ: ಸರಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಿ: ಸ.ಹಿ.ಪ್ರಾ.ಶಾಲೆ ಮುಖ್ಯೋಪಾದ್ಯಯ ಕಲಕಂಬಿ

ಗದಗ 02:  ಗ್ರಾಮದ ಸ್ವಚ್ಛತೆಯ ಜೊತೆಗೆ ಸುತ್ತಮುತ್ತಲಿನ ಪರಿಸರದ ಬಗ್ಗೆ ಹೆಚ್ಚು ಗಮನಹರಿಸಬೇಕು ಹಾಗೂ ಸರಕಾರದ ಯೋಜನೆಗಳನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಿ ಎಂದು ಅಸುಂಡಿ ಸ.ಹಿ.ಪ್ರಾ.ಶಾಲೆ ಮುಖ್ಯೋಪಾದ್ಯಯ ವಿ.ಎಫ್ ಕಲಕಂಬಿ ತಿಳಿಸಿದರು. 

ವಾರ್ತಾ ಮತ್ತು  ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಹಮ್ಮಿಕೊಂಡದ್ದ ಕ್ಷೇತ್ರ  ಪ್ರಚಾರ ಕಾರ್ಯಕ್ರ ಉದ್ಘಾಟಿಸಿ ಮಾತನಾಡಿದರು. ಆಗಸ್ಟ್ 1ರಂದು ಅಸುಂಡಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ನಡೆದ ಸ್ವಚ್ಛತೆ ಹಾಗೂ. ಸರ್ಕಾರದ  ಯೋಜನೆಗಳ ಕುರಿತು ಕೊತಬಾಳ ಬಸವ ಬಳಗ ಕಲಾ ತಂಡ ಹಾಗೂ ನಿವಲಗುದದ ಜೈ ಭೀಮ ಗೀಗೀ ಮೇಳದವರು ಬೀದಿ ನಾಟಕ ಮತ್ತು ಜಾನಪದ ಹಾಡಿನ ಮೂಲಕ ಸಾರ್ವಜನಿಕರಿಗೆ ಜಾಗೃತಿಯನ್ನು ಮೂಡಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಸದಸ್ಯೆ ಕಾಶಮ್ಮ ಭಜಂತ್ರಿ ಶಾಲಾ ಸಹಶಿಕ್ಷಕರಾದ ಹೆರಕಲ್ ಗುರುಬಸಪ್ಪ, ಎ.ವೈ.ಪತ್ತಾರ, ಪಿ.ಪಿ ನಾಗನೂರು, ಜಿ.ಎಸ್.ಗೌಡರ್, ಎಚ್.ಎಮ್.ಲಮಾಣಿ, ಎ.ಎಸ್.ಕಮ್ಮಾರ, ವಿ.ಎಸ್. ಶಾಂತಗೇರಿ, ಎಸ್.ಎನ್.ಪೋಲಿಸ್ಗೌಡ್ರ. ಶಾಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಿಬ್ಬಂದಿ ಎಮ್.ಟಿ.ನೇಮರಾಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಎಚ್. ಮೊರಬರೆಡ್ಡಿ ವಂದಿಸಿದರು.