ಗದಗ : ನಿಮ್ಮಲ್ಲಿ ನಿಮಗೆ ವಿಶ್ವಾಸವಿರಲಿ: ಪ್ರೇಮರೂಪಾನಂದ ಸ್ವಾಮೀಜಿ

ಲೋಕದರ್ಶನ ವರದಿ

ಗದಗ 01: ಪ್ರತಿಯೊಬ್ಬ ಯುವಕನಲ್ಲಿ ಆತ್ಮ ವಿಶ್ವಾಸ ಜಾಗೃತವಾದಲ್ಲಿ ಅವನ ಭವಿಷ್ಯ ಸದಾ ಉಜ್ವಲವಾಗಿರುತ್ತದೆ. ಆದರೆ ತನ್ನಲ್ಲಿ ಇರುವ ಅತಃಶಕ್ತಿಯ ಅರಿವು ಇರದಿರುವ ಕಾರಣ ಅವನು ಅಂದಃಕಾರದಲ್ಲಿರುತ್ತಾನೆ. ಅದನ್ನು ಅವನಿಗೆ ಅರಿವು ಮೂಡಿಸುವ ಸಾಮಥ್ರ್ಯ ಗುರುಗಳಿಗೆ ಮಾತ್ರ ಸಾಧ್ಯ. ಅರಿವಿನ ಅರಿವು ಆಗಲು ಗುರುವಿನ ಗುಲಾಮರಾಗಲೇಬೇಕು. 

ಆಗ ನಿಮ್ಮಲ್ಲಿರುವ ಶಕ್ತಿ ಸಾಮಥ್ರ್ಯದ ಅರಿವು ಆಗುವುದು ನಿಮ್ಮ ಆತ್ಮ ವಿಶ್ವಾಸವೇ ನಿಮ್ಮ ಪ್ರಗತಿಗೆ ಪೂರಕ ಎಂದು ಗದಗ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿಜಿ ಪ್ರೇಮರೂಪಾನಂದ ಸ್ವಾಮೀಜಿ ನುಡಿದರು ಅವರು ಗದಗ ನಗರದ ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆ ಕಲಾ, ವಿಜ್ಞಾನ ವಾಣಿಜ್ಯ ಮಹಾವಿದ್ಯಾಲಯ ಹಾಗೂ ವಾಣಿಜ್ಯ ಸ್ನಾತಕೋತ್ತರ ಕೇಂದ್ರದಲ್ಲಿ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟವನ್ನು ಪೂಜೆ ಸಲ್ಲಿಸುವುದರ ಮೂಲಕ ಮಾಡಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. 

ರಾಮಕೃಷ್ಣರ ಆಶೀರ್ವಾದ ಫಲದಿಂದ ಸ್ವಾಮಿ ವಿವೇಕಾನಂದರು ಜಗತ್ತಿಗೆ ಬೆಳಕಾದರು. ಇಂದಿನ ಯುವಕರು ಸಹ ಸ್ವಾಮಿ ವಿವೇಕಾನಂದರ ಜೀವನ ಶೆೈಲಿಯನ್ನು ಅಳವಡಿಸಿಕೊಂಡು ಸಾಧಕರಾಗಬೇಕು ಎಂದು ಹೇಳಿದರು. ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಜಿ.ಉಳಿಗೇರ ಸ್ವಾಮಿಜಿಗಳನ್ನು ಸ್ವಾಗತಿಸಿದರು. ದೈಹಿಕ ನಿರ್ದೇಶಕ ಶಶಿಕಾಂತ ಕೊರ್ಲಹಳ್ಳಿ ಕಾರ್ಯಕ್ರಮ ನಿರೂಪಿಸಿದರು. ಮಹಾವಿದ್ಯಾಲಯದ ಸಕಲ ಸಿಬ್ಬಂದಿ ಹಾಗೂ ವಿದ್ಯಾರ್ಥಿ  ಸಮೂಹ ಕಾರ್ಯಮದಲ್ಲಿ ಬಾಗಿಯಾಗಿ ಸ್ವಾಮಿ ವಿವೇಕಾನಂದರ ಪುಸ್ತಕಗಳ ಅವಲೋಕನ ಮಾಡಿ ಖರೀದಿಸಿದರು.