ಗದಗ: ಲೋಕಸಭಾ ಚುನಾವಣೆ ಹಿನ್ನಲೆ ಪೋಲಿಸರಿಂದ ನಗರದಲ್ಲಿ ಪರೇಡ

ಲೋಕದರ್ಶನ ವರದಿ

ಗದಗ  22:  ಲೋಕಸಭಾ ಚುನಾವಣೆಯನ್ನು ಶಾಂತಿಯುತವಾಗಿ ನಡೆಸಲು ಸಿದ್ಧತೆ  ಮಾಡಿಕೊಳ್ಳಲಾಗಿದ್ದು, ಮೊದಲ ಹಂತದ ಮತದಾನದಂದು ಬಿಗಿ ಭದ್ರತೆ ಕೈಕೊಳ್ಳಲಾಗುವುದು.

ಇದೇ ಏ. 23ರಂದು ಜರಗುವ ಲೋಕಸಭಾಚುನಾವಣೆ ಹಿನ್ನೆಲೆಯಲ್ಲಿ ಸೂಕ್ತ ಬಂದೋಬಸ್ತಗೆ  ಆಗಮಿಸಿದ ಎರಡು ಕೆ.ಎಸ್.ಆರ್.ಪಿ ತುಕಡಿಗಳು ಪಟ್ಟಣದಲ್ಲಿರವಿವಾರ ಪರೇಡ ನಡೆಸುವ ಮೂಲಕ ಚುನಾವಣೆಯಲ್ಲಿಯಾವುದೇ ಅಹಿತಕರ. ಘಟನೆಗಳು ಸಂಭವಿಸದಂತೆ  ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳವ ಮೂಲಕ ಚುನಾವಣೆಯನ್ನು ಶಾಂತಿಯುತವಾಗಿ ನಡೆಸವ  ನಿಟ್ಟಿನಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಪಥಸಂಚಲನ ನಡೆಸಿದರು..

ಪಟ್ಟಣದ ಕೆ.ಕೆ.ವೃತ್ತದಿಂದ ಪ್ರಾರಂಭವಾದಕೆ.ಎಸ್.ಆರ್.ಪಿ ಪೋಲಿಸರ್ ಪರೇಡ ನಗರದ  ಶಿವಾಜಿ ವೃತ್ತ, ಅಂಬೇಡ್ಕರ್ ವೃತ್ತ, ದುಗರ್ಾ ವೃತ್ತ, ಹಿರೇ ಬಜಾರ, ಕೊಳ್ಳಿಯವರ ವೃತ್ತ, ಬಸವೇಶ್ವರ ವೃತ್ತದ ಮೂಲಕ ನಗರದ ಪೋಲಿಸ ಠಾಣೆಗೆತಲುಪಿತು.

ಕೆ.ಎಸ್.ಆರ್.ಪಿ. ಎರಡು ಪೋಲಿಸ್ ತುಕ್ಕಡಿಯಲ್ಲಿಒಟ್ಟು 60 ಕ್ಕೂ ಹೆಚ್ಚು ಪೋಲಿಸ್ ಸಿಬ್ಬಂದಿಯವರು ಚುನಾವಣಾ ಕರ್ತವ್ಯಕ್ಕೆ ಆಗಮಿಸಿದ್ದು ಅವರಿಗೆ ಎಲ್ಲ ರೀತಿಯ ಸೌಕರ್ಯವನ್ನು ಮಾಡಿಕೊಡಲಾಗಿದೆ ಎಂದು ಪಿಎಸ್ಐ  ಆರ್.ವಾಯ್.ಜಲಗೇರಿ ತಿಳಿಸಿದರು.

ಈ ಪಂಥ ಸಂಚಲನದ ನೇತೃತ್ವವನ್ನು ಡಿವಾಯ್ ಎಸ್ಪಿ ಉಮೇಶರವರ ಮಾರ್ಗದರ್ಶನದಲ್ಲಿ ನಡೆಸಲಾಯಿತು. ಚುನಾವಣಾ ಬಂದೋಬಸ್ತ   ಕರ್ತವ್ಯಕ್ಕಾಗಿ ಆಗಮಿಸಿರುವ ಕೆ.ಎಸ್.ಆರ್.ಪಿ ಪೋಲಿಸರಿಗೆ ನಾಗರೀಕ ಸಹಕರಿಸಬೇಕು ಎಂದು ಡಿವಾಯ್ ಎಸ್ಪಿ ಉಮೇಶ ಹೇಳಿದರು.

ಪಥ ಸಂಚಲನದಲ್ಲಿ ಪೋಲಿಸ ಸಿಬ್ಬಂದಿಗಳಾದ ಸುರೇಶ ಮಂತಾ, ಕನಕಪ್ಪಜಮಾದಾರ, ಎಸ್ಎಸ್ ಹುಲ್ಲೂರು, ಎ ಎಮ್ ಮುಲ್ಲಾ, ಮಹೇಶ್ ಬಳ್ಳಾರಿ, ಚಂದ್ರಶೇಖರ ಪಾಟೀಲ, ಚಂದ್ರಶೇಖರ ಹಾದಿಮನಿ, ಪ್ರೇಮಾ ಶಿರಹಟ್ಟಿ, ಗೀತಾಉಪ್ಪಾರ, ದಾದಾಖಲಂದರ್ಆಶೆಖಾನ್, ಮುತ್ತುರಾಮ ಮೊದಲಿಯಾರ್, ಪ್ರಕಾಶಅಂಬೋರೆ, ರಾಮು ಗಟರಡ್ಡಿಹಾಳ,  ಸಂಬಾಜಿರಾವ ಭೋಸಲೆ, ಸೇರಿದಂತೆ ಆರವತ್ತಕ್ಕೂ ಹೆಚ್ಚು ಪೋಲಿಸರು ಪೇರಡ್ ನಲ್ಲಿ ಭಾಗವಹಿಸಿದ್ದರು