ಗದಗ : ಔಷಧ ವಿಜ್ಞಾನ ಶಾಸ್ತ್ರವು ನೈಸರ್ಗಿಕ ಮೂಲಗಳಿಂದ ದೊರೆಯುವ ಔಷಧಗಳ ಬಗೆಗಿನ ಅಧ್ಯಯನ: ಡಾ. ಕೊಟ್ಟುರ

ಲೋಕದರ್ಶನ ವರದಿ

ಗಜೇಂದ್ರಗಡ 01: ಗಿಡಮೂಲಿಕೆಗಳ ಔಷಧಿಯ ವ್ಯಾಪ್ತಿಯು ಕೆಲವೊಮ್ಮೆ ಶಿಲೀಂಧ್ರಗಳು ಮತ್ತು ಜೇನುಹುಳುಗಳ ಉತ್ಪನ್ನಗಳಿಗೂ ಹರಡಿದ್ದು, ಖನಿಜಾಂಶಗಳು, ಚಿಪ್ಪುಗಳು ಹಾಗೂ ಕೆಲವು ಪ್ರಾಣಿಗಳ ದೇಹದ ಭಾಗಗಳನ್ನೂ ಒಳಗೊಂಡಿರುತ್ತವೆ. ಔಷಧ ವಿಜ್ಞಾನ ಶಾಸ್ತ್ರವು ನೈಸರ್ಗಿಕ  ಮೂಲಗಳಿಂದ ದೊರೆಯುವ ಔಷಧಗಳ ಬಗೆಗಿನ ಅಧ್ಯಯನವಾಗಿದೆ ಎಂದು ಆಯುವರ್ೇದ ಕಾಲೇಜಿನ ಪ್ರಾಚಾರ್ಯರ ಡಾ. ಕೊಟ್ಟೂರು ಹೇಳಿದರು.

ಪಟ್ಟಣದ ಎಸ್ ಎಂ ಭೂಮರೆಡ್ಡಿ ಶಾಲೆ,ರೋಟರಿ ಪ್ರಾಥಮಿಕ ಶಾಲೆ, ತುಳಜಾಭವಾನಿ ಶಾಲೆ,ಸೇರಿದಂತೆ ವಿವಿಧ  ಪ್ರಾಥಮಿಕ ಶಾಲೆಯಲ್ಲಿ ಉಚಿತ ಸ್ವರ್ಣಬಿಂದು  ಔಷಧಿ ವಿತರಿಸಿ ಮಾತನಾಡಿದರು.

    ಔಷಧಗಳ ಸಾಂಪ್ರದಾಯಿಕ ಬಳಕೆಯು ಭವಿಷ್ಯದ ಔಷಧಗಳ ಸಾಮಥ್ರ್ಯವನ್ನು ತಿಳಿದುಕೊಳ್ಳುವ ಒಂದು ದಾರಿಯೆಂದು ಗುರುತಿಸಲ್ಪಟ್ಟಿದೆ. 2001ರಲ್ಲಿ ಸಂಶೋಧಕರು ಸುಮಾರು 122 ಸಂಯುಕ್ತಗಳನ್ನು ಪ್ರಚಲಿತ ಔಷಧಗಳ ಮುಖ್ಯವಾಹಿನಿಯಲ್ಲಿ ಬಳಸಿದ್ದು, ಇವೆಲ್ಲವೂ ಔಷಧ  ಮೂಲಗಳಿಂದ ಪಡೆದವುಗಳಾಗಿವೆ. ಇವುಗಳಲ್ಲಿ ಶೇಕಡಾ 80 ಸಂಯುಕ್ತಗಳು ಇದೇ ರೀತಿಯ ಬಳಕೆಗೆ ಅಥವಾ ಇದಕ್ಕೆ ಸಂಬಂಧಿಸಿದ ಸಾಂಪ್ರದಾಯಿಕ ಔಷಧ ಜನಾಂಗೀಯ ಬಳಕೆಯಲ್ಲಿ ಉಪಯೋಗಿಸಲ್ಪಡುತ್ತವೆ ಎಂದರು.

ಬಳಿಕ ಭಾಗಮಾರ ಆಯರ್ುವೇದಿಕ ಮೆಡಿಕಲ್ ಕಾಲೇಜಿನ ನಿದರ್ೇಶಕರಾದ ಪದ್ಮಾ ಅಜಿತ ಭಾಗಮಾರ ಮಾತನಾಡಿದರು ದಿನಮಾನಗಳಲ್ಲಿ ಉತ್ತಮ ಗುಣಮಟ್ಟದ ಮತ್ತು ಅಪರೂಪದ ಔಷಧಗಳನ್ನು ಮತ್ತು ಪಥ್ಯದ ಅಂಶಗಳನ್ನು ಸಸ್ಯಗಳಿಂದ ಬೇರ್ಪಡಿಸಿ ಪಡೆದುಕೊಳ್ಳಲಾಗುತ್ತಿದೆ. ಔಷಧ ವಿಜ್ಞಾನಿಗಳು, ಸೂಕ್ಷ್ಮ ಜೀವ ತಜ್ಞರುಗಳು, ಸಸ್ಯವಿಜ್ಞಾನಿಗಳು ಮತ್ತು ನೈಸಗರ್ಿಕ ಉತ್ಪನ್ನಗಳ ರಾಸಾಯನಿಕ ತಜ್ಞರುಗಳು ಸೇರಿ ರೋಗಶಾಸ್ತ್ರದ ಬೆಳವಳಣಿಗೆಗಾಗಿ ಕಾರ್ಯಕ್ರಮಗಳನ್ನು ಕೈಗೊಂಡಿರುವುದು ಬಹಳಷ್ಟು ರೋಗಗಳಿಗೆ ಶುಶ್ರೂಷೆ ನೀಡಲು ಸಹಕಾರಿಯಾಗಬಹುದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಎಂ.ಎಂ ಹೊನ್ನಕೇರಿ, ಎಲ್.ಬಿ ಪವಾರ್, ಡಾ. ವಿ.ಎಸ ಕಂಠಿ, ಚಾಂದನಿ, ಪಾಯಲ್, ಪಿಂಕಿ, ಎಸ್.ಎ.ತಾಳಿಕೋಟಿ, ಬಸವರಾಜ ಸಂಗಳದ, ಸೇರಿದಂತೆ ಮತ್ತಿತರು ಇದ್ದರು.