ಲೋಕದರ್ಶನ ವರದಿ
ಗದಗ 05: ಸಂಸತ್ತು ಕಾಯ್ದೆ ಕಾನೂನುಗಳನ್ನು ರೂಪಿಸುವ ಜನರ ಕಲ್ಯಾಣದ ಜವಾಬ್ದಾರಿಯನ್ನು ಹೊತ್ತಿರುವ ಮುಖ್ಯ ಅಂಗವಾಗಿದೆ, ನಮ್ಮ ಭಾರತ ದೇಶವು ಒಕ್ಕೂಟ ವ್ಯವಸ್ಥೆಯನ್ನು ಹೊಂದಿರುವ ದೇಶವಾಗಿದೆ, ಇದಕ್ಕಾಗಿ ರಾಜ್ಯಗಳಿಗೆ ಸ್ವಾಯತ್ತತೆಯನ್ನು ಕೊಡಿಸುವ ಬಗ್ಗೆ ಸಂಸದರು ಪಾಲರ್ಿಮೆಂಟ್ನಲ್ಲಿ ಧ್ವನಿ ಎತ್ತಬೇಕು, ಆದರೆ ಇತ್ತಿಚ್ಚಿನ ದಿನಗಳಲ್ಲಿ ಈ ಹಿಂದೆ ಆಡಳಿತದಲ್ಲಿ ಇದ್ದ ಕೇಂದ್ರ ಸಕರ್ಾರ ರಾಜ್ಯದ ಸ್ವಾಯತ್ತತೆಯನ್ನು ಕಸಿದುಕೊಂಡು ಹಿಡಿತ ಸಾಧಿಸುವುದೇ ಹೆಚ್ಚಾಗಿ ಕಂಡು ಬಂದಿದೆ, ಎನ್.ಡಿ.ಎ ಸಕರ್ಾರದ ಆಡಳಿತದಲ್ಲಿ ಕಾಯ್ದೆ ಕಾನೂನುಗಳನ್ನು ಗಾಳಿಗೆ ತೂರಿ ಸಂವಿಧಾನವನ್ನು ಬದಲಾವಣೆ ಮಾಡುವ ಕುತಂತ್ರ್ರ ನಡೆಸಿದ್ದಾರೆ, ಹಾಗಾಗಿ ಈ ಬಾರಿ ಲೋಕ ಸಭೆ ಚುನಾವಣೆಯಲ್ಲಿ ನಮ್ಮ ದೇಶದ ಸಂವಿಧಾನದ ಉಳಿವಿಗಾಗಿ ನಮ್ಮ ಮತಗಳು ಅಸ್ತ್ರವಾಗಬೇಕೆಂದು ಸ್ಲಂ ಜನಾಂದೋಲನ ಕನರ್ಾಟಕದ ರಾಜ್ಯ ಸಂಚಾಲಕರಾದ ಎ.ನರಸಿಂಹಮೂರ್ತಿ ಕರೆ ನೀಡಿದರು.
ಅವರು ಸ್ಲಂ ಜನಾಂದೋಲನ ಕನರ್ಾಟಕ ಮತ್ತು ಗದಗ ಜಿಲ್ಲಾ ಕೊಳಚೆ ನಿವಾಸಿಗಳ ಹಿತರಕ್ಷಣ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ನಗರದಲ್ಲಿ ಹಮ್ಮಿಕೊಂಡಿದ್ದ ಲೋಕ ಸಭೆ ಚುನಾವಣೆ-2019ರ ಸ್ಲಂ ಜನರ ಪ್ರಣಾಳಿಕೆ ಬಿಡುಗಡೆ ಹಾಗೂ ಪ್ರಸಕ್ತ ವಿದ್ಯಮಾನಗಳ ಕುರಿತು ನಗರ ಮಟ್ಟದ ಕಾಯರ್ಾಗಾರವನ್ನು ಉದ್ಘಾಟಿಸಿ ಮಾತನಾಡುತ್ತ 2014 ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಎನ್.ಡಿ.ಎ. ಕೂಟದ ಆಡಳಿತದಲ್ಲಿ ಸ್ಲಂ ನಿವಾಸಿಗಳಿಗೆ ಸಿಕ್ಕಿದ್ದು ಮಾತ್ರ ಶೂನ್ಯ ಈಗಾಗಲೇ ಜಾರಿಯಲ್ಲಿದ ರಾಜೀವ ಆವಾಜ್ ಯೋಜನೆಯನ್ನು ಸರ್ವರಿಗೂ ಸೂರು ಹೆಸರಿನಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಎಂದು ಮರು ವಿನ್ಯಾಸಗೊಳಿಸಿ ವಸತಿ ಯೋಜನೆಗೆ ಈ ಹಿಂದೆ ನೀಡಲಾಗುತ್ತಿದ್ದ 4 ಲಕ್ಷ ಸಬ್ಸಿಡಿಯನ್ನು ಕಡಿತಗೊಳಿಸಿ 1.5 ಲಕ್ಷಕ್ಕೆ ಇಳಿಸಲಾಯಿತು, ಸ್ಲಂ ಜನರ ಭೂಮಿಯನ್ನು ಸಾರ್ವಜನಿಕ ಸಂಪನ್ಮೂಲವೆಂದು ಘೋಷಿಸಿ ಕಾಪರ್ೊರೇಟ್ ಕಂಪನಿಗಳಿಗೆ ಕೈಗೆಟಕುವ ದರದಲ್ಲಿ ವಸತಿ ನಿಮರ್ಾಣ ಮಾಡಲು ಪ್ರೋತ್ಸಾಹಿಸಿ ವಸತಿಯನ್ನು ಒಂದು ಕೈನಿಂದ ನೀಡಿ ಮತ್ತೋಂದು ಕೈಯಿಂದ ಸ್ಲಂ ಜನರಿಂದ ಕಸಿದುಕೊಳ್ಳುವಂತೆ ಮಾಡಲಾಗಿದೆ, 500 ಮತ್ತು 1000 ರೂ ಮುಖಬೆಲೆಯ ನೋಟಿನ ಅಪಮೌಲೀಕರಣದಿಂದ ದುಡಿಯುವ ಜನರಿಗೆ ಕನಿಷ್ಟ 6 ತಿಂಗಳು ಕೊಲಿ ಸಿಗದಂತೆ ಮಾಡಿದ ಕೊಡುಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ, ಅದಾನಿ ಅಂಬಾನಿಯಂತಹ ಕಾಪರ್ೊರೇಟ್ಗಳ ಹಿತ ಕಾಯುವ ಕೆಲಸ ಪ್ರಧಾನಿ ಅವರು 5 ವರ್ಷದಿಂದ ಮಾಡುತ್ತ ಬಂದಿದ್ದಾರೆ, ನೋಟು ರದ್ದತಿಯಿಂದ ಯಾವುದೇ ಕಪ್ಪು ಹಣ ದೇಶಕ್ಕೆ ವಾಪಸ್ ಬಂದಿಲ್ಲ, ಇದರಿಂದ ದೇಶದಲ್ಲಿ 120 ಸಾಮಾನ್ಯ ಜನರು ಸತ್ತರೇ 8 ರಿಂದ 10 ಕೋಟಿ ಉದ್ಯೋಗ ದೇಶದಲ್ಲಿ ನಾಶವಾಯಿತು, ಎಲ್ಲರ ಏಳಿಗೆಯನ್ನು ಖಾತ್ರಿಗೊಳ್ಳಿಸುವ ಸಂವಿಧಾನ ಇಂದು ಅಪಾಯದಲ್ಲಿ ಸಿಲುಕಿದೆ, ಒಂದೇ ಧರ್ಮ, ಭಾಷೆ, ತೆರಿಗೆ, ಆಹಾರ, ಸಂಸ್ಕೃತಿ ನಮ್ಮ ಒಕ್ಕೂಟದ ವ್ಯವಸ್ಥೆಗೆ ಸವಾಲಾಗಿದೆ, ಸಂವಿಧಾನವನ್ನು ಸುಟ್ಟು ಹಾಕುವಂತಹ ಮನಸ್ಥಿತಿಗಳನ್ನು ದೇಶದಲ್ಲಿ ಘೋಷಿಸಲಾಗುತ್ತಿದೆ, ಆದ್ದರಿಂದ ಸಂವಿಧಾನದ ಉಳಿವಿಗಾಗಿ ನಮ್ಮ ಮತವನ್ನು ಚಲಾಯಿಸುವ ಮೂಲಕ ಸಂವಿಧಾನ ರಕ್ಷಿಸುವ ಅಸ್ತ್ರವಾಗಿಸೋಣ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗದಗ ಜಿಲ್ಲಾ ಸ್ಲಂ ಸಮಿತಿ ಜಿಲ್ಲಾ ಅಧ್ಯಕ್ಷರಾದ ಇಮ್ತಿಯಾಜ. ಆರ್. ಮಾನ್ವಿ ಮಾತನಾಡಿ ಸಂವಿಧಾನ ವಿರೋಧಿಗಳಿಗೆ ಈ ಬಾರಿ ತಕ್ಕ ಪಾಠ ಕಲಿಸಬೇಕಾಗಿದೆ, ನಾವು ಬಡವರಾದರು ನಮಗೆ ಕೈ ಮುಗಿದು ಓಟು ಕೇಳುತ್ತಾರೆ ಎಂದರೆ ಆ ಓಟಿಗೆ ಬೆಲೆಕಟ್ಟಲಾಗದು, ಸಂವಿಧಾನದ ರಕ್ಷಣೆ ಮಾಡಿ ಪ್ರಜಾಪ್ರಭುತ್ವ ಉಳಿಸಿಕೊಳ್ಳುಲು ಪ್ರತಿ ಒಬ್ಬರು ಇಂತಹ ಸಂವಿಧಾನ ವಿರೋಧಿ, ಕೋಮುವಾದಿಗಳನ್ನು ಧಿಕ್ಕರಿಸಿ ಪ್ರಜಾಪ್ರಭುತ್ವ ಉಳಿಸುವಂತಹ ಪಕ್ಷಗಳಿಗೆ ನಮ್ಮ ಮತವನ್ನು ಚಲಾಯಿಸಬೇಕು, ಹಾಗಾಗಿ ನಮ್ಮ ಸ್ಲಂ ಜನರ ಬೇಡಿಕೆಗಳ ಪ್ರಣಾಳಿಕೆಯನ್ನು ಒಪ್ಪಿಕೋಳ್ಳುವ ಅಭ್ಯಥರ್ಿಗಳಿಗೆ ನಮ್ಮ ಮತವನ್ನು ಚಲಾಯಿಸೋಣ, ಸಂವಿಧಾನ ವಿರೋಧಿಗಳನ್ನು ಮತ್ತು ಕೋಮುವಾದಿಗಳನ್ನು ನಮ್ಮ ಸ್ಲಂ ಜನರು ಧಿಕ್ಕರಿಸಬೇಕೆಂದು ಜನ ಜಾಗೃತ ಮೂಡಿಸಲು ಸ್ಲಂಗಳಲ್ಲಿ ಸಭೆಗಳನ್ನು ನಡೆಸಲಾಗುವುದೆಂದು ತಿಳಿಸಿದರು.
ಸ್ಲಂ ಸಮಿತಿ ಕಾರ್ಯದಶರ್ಿ ಅಶೋಕ ಕುಸಬಿ, ಮಹಿಳಾ ಸಮಿತಿ ಸಂಚಾಲಕಿ ಪರವೀನಬಾನು ಹವಾಲ್ದಾರ, ಯುವ ಸಮಿತಿ ಸಂಚಾಲಕ ಉಸ್ಮಾನ ಚಿತ್ತಾಪೂರ, ಅಂಜುಮನ ಸಂಸ್ಥೆ ಉಪಾಧ್ಯಕ್ಷರಾದ ಬಾಬಾಜಾನ ಬಳಗಾನೂರ, ಸಹ ಸಂಚಾಲಕಿ ತಮನ್ನಾ ಧಾರವಾಡ, ಜಿಲ್ಲಾ ಸಮಿತಿ ಸದಸ್ಯರಾದ ಅಬುಬಕರ ಮಕಾನದಾರ ವೇದಿಕೆ ಮೇಲೆ ಉಪಸ್ಥಿತರಿದ್ದರು. ಯುವ ಸಮಿತಿ ಸಂಘಟನಾ ಸಂಚಾಲಕ ಮಹ್ಮದರಫೀಕ ಧಾರವಾಡ, ನಜೀರಅಹ್ಮದ ಹಾವಗಾರ, ಕಮಲವ್ವ ಬಿದರೂರು, ಫಾರುಖ ಮಕಾನದಾರ, ಕಮಲವ್ವ ಚಲವಾದಿ ಹಾಗೂ ಗದಗ-ಬೆಟಗೇರಿ ನಗರದ ವಿವಿಧ ಸ್ಲಂಗಳಿಂದ ನೂರಾರು ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು, ಸ್ಲಂ ಸಮಿತಿ ಕಾರ್ಯದಶರ್ಿ ಅಶೋಕ ಕುಸಬಿ ಕಾರ್ಯಕ್ರಮ ನಿರೂಪಿಸಿದರು, ಪರವೀನಬಾನು ಹವಾಲ್ದಾರ ವಂದಿಸಿದರು.