ಗದಗ 17: ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಂದು ರೋಣ ತಾಲೂಕಿನ ಜಿಗಳೂರು ಕೆರೆ ನೀರು ಸಂಗ್ರಹಣೆ ಮತ್ತು ನೀರು ಶುದ್ಧೀಕರಣ ಘಟಕದ ಕಾಮಗಾರಿ ಪರಿಶೀಲನೆ ನಡೆಸಿದರು.
ರೋಣ ತಾಲೂಕು ಜಿಗಳೂರು ಕೆರೆ ಯಿಂದ ಗಜೇಂದ್ರಗಡ, ನರೇಗಲ್, ರೋಣ ಗಳಿಗೆ ಕುಡಿಯುವ ನೀರಿನ ಸಲುವಾಗಿ ಒಖಃಅ ಕೆನಲ್ದಿಂದ ಜಲಾಶಯಗಳಿಗೆ ನೀರು ಸಂಗ್ರಹಣೆ ಮಾಡಿ ಅಲ್ಲಿಂದ ಗಜೇಂದ್ರಗಡ ಮತ್ತು ನರೇಗಲ್ ಗೆ ಸೇರಿದ ದಿನಕ್ಕೆ 17 ಎಮ್ ಎಲ್ ಡಿ ಸಂಗ್ರಹಣಾ ಸಾಮಥ್ರ್ಯ ಹೊಂದಿದ ಶುದ್ಧೀಕರಣ ಘಟಕ ಹಾಗೂ ರೋಣ ದಲ್ಲಿನ 7 ಎಮ್ ಎಲ್ ಡಿ ಸಾಮಥ್ರ್ಯ ಹೊಂದಿದ ಇನ್ನೊಂದು ಶುದ್ಧೀಕರಣ ಘಟಕ ನೀರು ಸರಬರಾಜು ಮಾಡಲಾಗುವುದು. ಈ ಕಾಮಗಾರಿಯ ವೆಚ್ಚ 105 ರೂ. ಕೋಟಿ ಆಗಿದ್ದು 3 ತಿಂಗಳೊಳಗೆ ನೀರು ಸರಬರಾಜು ಕಾರ್ಯಾರಂಭ ಮಾಡಲಾಗುವುದು ಎಂದು ಕನರ್ಾಟಕ ನಗರ ನೀರು ಸರಬರಾಜು ಮಂಡಳಿಯ ಕಾರ್ಯನಿರ್ವಾಹಕ ಅಭಿಯಂತರರಾದ ಯುನೂಸ್ ಭಾಷಾ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.