ಲೋಕದರ್ಶನ ವರದಿ
ಗದಗ 31: ರೋಣ ತಾಲ್ಲೂಕಿನ ಉಣಚಗೇರಿ ಗ್ರಾಮದಲ್ಲಿ ನಾಟಕ ಪ್ರದರ್ಶನ ನಡೆಯಿತು. ಜಿಡ್ಡಿದುಗರ್ಾದೇವಿಯ 12ನೇ ಜಾತ್ರಾಮಹೋತ್ಸವ ಹಾಗೂ 6ನೇ ವರ್ಷದ ಮಹಾರತೋತ್ವವದ ಅಂಗವಾಗಿ ಜಿಡ್ಡಿದುಗರ್ಾದೇವಿ ನಾಟ್ಯ ಸಂಘ ಉಣಚಗೇರಿ ಗ್ರಾಮದಲ್ಲಿ "ದಿಲ್ಲಿ ಹೊಕ್ಲ ಪುಂಡ ಹುಲಿ" ಅಥರ್ಾರ್ಥ ಕೇರಳಿದ ಕಣರ್ಾಜರ್ುನ ಎಂಬ ಸುಂದರ ಸಾಮಾಜಿಕ ನಾಟಕವನ್ನು ಬಸವಂತಪ್ಪ.ಎಚ್.ತಳವಾರ ಬಿಜೆಪಿಯ ಎಸ್ ಟಿ ಮೊಚರ್ಾದ ಮಾಜಿ ಅಧ್ಯಕ್ಷರು ಹಾಗೂ ಮಹಷರ್ಿ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷರು ಆದ ಬಸವಂತಪ್ಪ ಎಚ್ ತಳವಾರ ಅವರು ರಿಬ್ಬನ್ ಕಟ್ಟ ಮಾಡುವ ಮೂಲಕ ನಾಟಕಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿ ನಾಟಕ ಮನರಂಜನೆಯೊಂದಿಗೆ ಸಂದೇಶ ನೀಡುವಂತಿರಲಿ ಹಬ್ಬ ಹರಿದಿನ ಜಾತ್ರೆಗಳ ಸಂದರ್ಭದಲ್ಲಿ ಪೂರ್ವಜರ ಕಾಲದಿಂದ ಗ್ರಾಮೀಣ ಪ್ರದೇಶದ ನಾಡಿನಲ್ಲಿ ಅಭಿನಯಿಸಿರುವ ಸಾಮಾಜಿಕ, ಪೌರಾಣಿಕ, ಐತಿಹಾಸಿಕ, ನಾಟಕಗಳು ಸಮಾಜದ ಪರಿವರ್ತನೆಗಾಗಿ ಕವಿಗಳು ತಮ್ಮ ಕಲ್ಪನೆಯಿಂದ ರಚಿಸಿರುವ ನಾಟಕಗಳು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಮಹಾನ್ ಸಾಧನಗಳು ನಾಟಕಗಳು ಮನರಂಜನೆಯ ಜೊತೆಗೆ ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತಿದ್ದರೆ ಕಲಾಭಿಮಾನಿಗಳು ಹೃದಯ ಪೂರ್ವಕವಾಗಿ ಸ್ವೀಕರಿಸುತ್ತಾರೆ ಇದರಿಂದ ಸಮಾಜದಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳಿಂದ ಜನತೆ ಜಾಗೃತ ಗೊಳ್ಳುವಲ್ಲಿ ನಾಟಕಗಳ ಪಾತ್ರ ಹಿರಿದಾಗಿರುವದರಿಂದ ಕಲೆ ಮತ್ತು ಕಲಾವಿದರು ಉಳಿಯಲು ಸಾದ್ಯವಿದೆ ಎಂದು ಅಭಿಪ್ರಾಯ ಪಟ್ಟರು ಸಮಾಜಕ್ಕೆ ಗಟ್ಟಿ ಸಂದೇಶ ಒದಗಿಸುವ ನಾಟಕಗಳು ಇಂದು ಗ್ರಾಮಾಂತರ ಪ್ರದೇಶದಲ್ಲಿ ಉಳಿದು ಜನರಿಗೆ ಮನರಂಜನೆ ಒದಗಿಸುತ್ತಿವೆ.
ಜಾಗತಿಕರಣದ ಭರಾಟೆಯಲ್ಲಿ ರಂಗ ಕಲೆಗಳು ನಶಿಸುತ್ತಿರುವ ಗ್ರಾಮೀಣ ಪ್ರದೇಶದಲ್ಲಿ ಟಿವಿ ಮಾದ್ಯಮಗಳ ಹಾವಳಿ ಜಾಸ್ತಿಯಾಗಿದ್ದರಿಂದ ರಾತ್ರಿ ವೇಳೆಯಲ್ಲಿ ಹೆಣ್ಣುಮಕ್ಕಳು ಟಿವಿ ನೋಡುವದರಿಂದ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ನಾಟಕಗಳು ಪ್ರದರ್ಶನ ಮಾಡಬೇಕೆಂದು ಯುವಕರಿಗೆ ಬಸವಂತಪ್ಪ.ಎಚ್.ತಳವಾರ ಕರೆ ನೀಡಿದರು. ಈ ಸಭೆಗೆ ಸಾಕ್ಷಿಯಾದ ಊರಿನ ಮುಖಂಡರಾದ ಜಿ ಎಸ್ ಸೂಗಿರಯ್ಯಮಠ, ಸಂಗಯ್ಯ ಹಿರೇಮಠ, ಕೆ ಎಸ್ ಪಟ್ಟಣಶೆಟ್ಟಿ, ಶರಣಪ್ಪ ಜಲ್ಕಲಿ,ಪರಸಪ್ಪ ಹುಡೇದ, ಯಮನಪ್ಪ ಗಾಯಕವಾಡ, ಸಿದ್ದಪ್ಪ ಹಳ್ಳದ, ವೀರಭದ್ರಪ್ಪ ಇಟಾಲಿ, ಮಲ್ಲು ಹಿರೇಕೊಪ್ಪ, ಸಂಗಮೇಶ ಹೆರಕಲ್ಲ, ಪ್ರಕಾಶ ತಳವಾರ, ಎಸ್ ಎಲ್ ಹುಡೇದ,ಹಾಗೂ ಗ್ರಾಮದ ಗುರುಹಿರಿಯರು, ಯುವಕರು ಸಭೆಯಲ್ಲಿ ಉಪಸ್ಥಿತರಿದ್ದರು ಗ್ರಾಮದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದ್ದು ಕಂಡುಬಂದಿತ್ತು.