ಲೋಕದರ್ಶನ ವರದಿ
ಗಜೇಂದ್ರಗಡ 01: ಪ್ರಸ್ತುತ ಸಮಾಜದಲ್ಲಿ ಯುವಪೀಳಿಗೆ ಮಾದಕ ವಸ್ತುಗಳ ಕಡೆಗೆ ಆಕರ್ಷಣೆ ಹೊಂದುತ್ತಿದ್ದು, ಇಂತಹ ಬೆಳವಣಿಗೆ ಒಂದು ಸಾಮಾಜಿಕ ಪಿಡುಗಾಗಿ ಮಾರ್ಪಡುತ್ತಿದೆ. ಈ ಸಾಮಾಜಿಕ ಪಿಡುಗುಗಳನ್ನು ನಾಶ ಮಾಡಿ, ಮಾದಕ ವ್ಯಸನಮುಕ್ತ ಸಮಾಜ ನಿರ್ಮಿಸುವುದರಿಂದ ಮಾತ್ರ ದೇಶದ ಉನ್ನತಿ ಸಾಧ್ಯ ಎಂದು ಎಸ್.ಎಮ್.ಭೂಮರೆಡ್ಡಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಜೆ.ಜಿ.ಕುದರಿ ಹೇಳಿದರು.
ಪಟ್ಟಣದ ಎಸ್.ಎಮ್.ಭೂಮರೆಡ್ಡಿ ಪದವಿ ಪೂರ್ವ ಕಾಲೇಜಿನಲ್ಲಿ ಎನ್.ಎಸ್.ಎಸ್.ಘಟಕದಿಂದ ನಡೆದ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ ಇಂದಿನ ಈ ಕಾರ್ಯಕ್ರಮವೂ ವ್ಯಸನಕ್ಕೆ ಒಳಗಾಗಿರುವವರಿಗೆ ಮಾತ್ರ ಅರಿವು ಕಾರ್ಯಕ್ರಮಗಳನ್ನು ಮಾಡುವುದಕ್ಕಿಂತ ಭವಿಷ್ಯದ ಪ್ರಜೆಗಳಾದ ಕಾಲೇಜಿನ ವಿದ್ಯಾಥರ್ಿಗಳಿಗೆ ಅರಿವು ಕಾರ್ಯಕ್ರಗಳನ್ನು ಮಾಡಿದಲ್ಲಿ ವಿದ್ಯಾಥರ್ಿಗಳು ಭವಿಷ್ಯದಲ್ಲಿ ಮಾದಕ ವಸ್ತುಗಳಿಂದ ದೂರ ಇರಲು ಅನುಕೂಲವಾಗುವುದು ಎಂದರು.
ಬಳಿಕ ಎನ್.ಎಸ್.ಎಸ್.ಅಧಿಕಾರಿ ಅರವಿಂದ ಎಸ್.ವಡ್ಡರ ಮಾತನಾಡಿ ಸ್ವಾಮಿ ವಿವೇಕಾನಂದರ ನುಡಿಯಂತೆ ಶಕ್ತಿಯೇ ಜೀವನ, ದೌರ್ಬಲ್ಯವೇ ಮರಣ ಎಂದು ತಿಳಿಸಿದ ಅವರು, ಮನುಷ್ಯ ಯಾವುದೇ ದೌರ್ಬಲ್ಯಗಳನ್ನು ಇಟ್ಟುಕೊಳ್ಳದೆ ಮುನ್ನಡೆದಲ್ಲಿ ಸ್ವಸ್ಥ ಹಾಗೂ ಸುರಕ್ಷಿತ ಸಮಾಜ ನಿರ್ಮಾಣ ಸಾಧ್ಯ ಎಂದು ತಿಳಿಸಿದರು. ಮಾದಕ ವಸ್ತುಗಳಿಗೆ ದಾಸರಾದಾಗ ವ್ಯಕ್ತಿಯ ಜೀವನ ಜಾರುಬಂಡಿಯ ಮೇಲೆ ಜಾರಿದಂತೆ, ಜಾರುವಾಗ ಸಿಗುವ ಸಂತೋಷ ಕೆಳಕ್ಕೆ ತಲುಪಿದಾಗ ಸಿಗುವುದಿಲ್ಲ ಹಾಗೂ ಪುನಃ ವಾಪಸ್ ಅದೇ ದಾರಿಯಲ್ಲಿ ಮೇಲೇರಲೂ ಸಾಧ್ಯವಾಗುವುದಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಜಿ ಬಿ ಗುಡಿಮನಿ,ಎಸ್ ಎಸ್ ವಾಲಿಕಾರ, ಎಂಎಲ್ ಕ್ವಾಟಿ, ಬಿ ಎಸ್ ಬೆಳಕುಣಕಿ, ವಿ ಕೆ ಚಳಗೇರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.