ಧಾರವಾಡ 02: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ 11 ನೇ ವಾರ್ಡ ವ್ಯಾಪ್ತಿಯಲ್ಲಿ ಗಾಂಧೀಚೌಕ್ ಬಳಿ ರಸ್ತೆ ಬದಿಯ ಗಟಾರೊಂದು ತೆರೆದುಕೊಂಡಿದ್ದು ವಿಪರೀತ ದುನರ್ಾತ ಹೊರಸೂಸಿ ಸಾರ್ವಜನಿಕರು ನಿತ್ಯವೂ ಸಂಕಟ ಅನುಭವಿಸುವಂತಾಗಿದೆ.
ಸ್ವಚ್ಛ ಭಾರತ ಅಭಿಯಾನದ ಲೋಗೋದಲ್ಲಿ ಗಾಂಧೀಜಿ ಕನ್ನಡಕವನ್ನೇ ಬಳಸಲಾಗಿದ್ದು, ಗಾಂಧೀಜಿ ಹೆಸರಿನ ಚೌಕ್ ಬಳಿಯೇ ಸ್ವಚ್ಛತೆಗೆ ಗಮನ ನೀಡದಿರುವುದು ಈಗ ಚಚರ್ೆಗೆ ಗ್ರಾಸ ಒದಗಿಸಿದೆ. ನಗರದ ಅತ್ಯಂತ ಜನನಿಬಿಡ ಪ್ರದೇಶವಾದ ಗಾಂಧೀಚೌಕ್ದಲ್ಲಿ ಈ ಕೊಳಕು ವಾಸನೆಯ ಚರಂಡಿ ತೆರೆದುಕೊಂಡಿದ್ದು, ಜನರು ಮೂಗುಮುಚ್ಚಿಕೊಂಡು ಓಡಾಡುವಂತಾಗಿದೆ ಎಂದು ಈ ಭಾಗದ ಹಿರಿಯ ನಾಗರಿಕರು ದೂರಿದ್ದಾರೆ.
ಈ ತೆರೆದುಕೊಂಡ ಚರಂಡಿ ಹತ್ತಿರವೇ ಔಷಧಿಯ ಅಂಗಡಿ ಇದ್ದು, ಇತ್ತೀಚೆಗೆ ವೃದ್ಧೆಯೋರ್ವಳು ಮಾತ್ರೆಗಳನ್ನು ತೆಗೆದುಕೊಳ್ಳಲು ಔಷಧಿ ಅಂಗಡಿಗೆ ಬಂದಾಗ ಈ ವಾಸನೆ ಸಹಿಸಿಕೊಳ್ಳದೇ ಸ್ಥಳದಲ್ಲಿಯೇ ವಾಂತಿ ಮಾಡಿಕೊಂಡು ತೊಂದರೆ ಅನುಭವಿಸಿದಳೆಂದು ಇಲ್ಲಿಯ ಜನರು ಹೇಳುತ್ತಾರೆ. ಸಮೀಪದಲ್ಲಿಯೇ
ಕೂಡಲೇ ಸಂಬಂಧಪಟ್ಟ ಮಹಾನಗರ ಪಾಲಿಕೆಯ ಅಧಿಕಾರಿಗಳು ತಮ್ಮ ಸಿಬ್ಬಂದಿಗೆ ಈ ಕುರಿತು ಸೂಚನೆ ನೀಡಿ ಶೀಘ್ರವಾಗಿ ಈ ತೆರೆದುಕೊಂಡ ಗಟಾರನ್ನು ಸ್ವಚ್ಛಗೊಳಿಸಿ ಮೇಲೆ ಹೊದಿಕೆಯ ವ್ಯವಸ್ಥೆ ಕಲ್ಪಿಸಿ ಕೊಳಕು ದುನರ್ಾತ ಹೊರಸೂಸದಂತೆ ಸೂಕ್ತ ದುರಸ್ತಿ ಕಾಮಗಾರಿ ಕೈಕೊಳ್ಳಬೇಕೆಂದು ಇಲ್ಲಿಯ ನಿವಾಸಿಗಳು ಮತ್ತು ವ್ಯಾಪಾರಸ್ಥರು ಆಗ್ರಹಿಸಿದ್ದಾರೆ.