ಕೊಲ್ಹಾರ ಸಕರ್ಾರಿ ಪ್ರೌಢಶಾಲೆಯಲ್ಲಿ ಅಂತರ್ಜಲ ಜಾಗೃತಿ ಶಿಬಿರ

ಲೋಕದರ್ಶನ ವರದಿ

ವಿಜಯಪುರ 12:ಜಿಲ್ಲಾ ಅಂತರ್ಜಲ ಹಿರಿಯ ಭೂ ವಿಜ್ಞಾನಿ ಇಲಾಖೆ ವತಿಯಿಂದ  ಕೊಲ್ಹಾರದ ಸಕರ್ಾರಿ ಪ್ರೌಢಶಾಲೆಯಲ್ಲಿಂದು ಮಕ್ಕಳಿಗೆ ಅಂತರ್ಜಲ ಜಾಗೃತಿ ಶಿಬಿರ ಜರುಗಿತು. ಬಸವನಬಾಗೇವಾಡಿ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ ಗುಳೆದಗುಡ್ಡ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಅಂತರ್ಜಲ ಪರಿಸ್ಥಿತಿಯಲ್ಲಿ ಅಂತರ್ಜಲ ಶಿಬಿರದ ಮಹತ್ವವನ್ನು ಪಡೆದುಕೊಂಡು ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು. 

ಶಿಕ್ಷಣ ಇಲಾಖೆ ನಿವೃತ್ತ ಅಧಿಕಾರಿ ಶ್ರೀಮತಿ ವಿಮಲಾ ಹಂದಿಗೋಳ ಅವರು ಮಾತನಾಡಿ, ಮಾನವನ ಕೃತ್ಯದಿಂದ ಇಂದು ಅಂತರ್ಜಲ ಬರಿದಾಗುತ್ತಿದೆ. ಇಂದಿನ ಶಾಲೆಯ ಮಕ್ಕಳಿಗೆ ಅಂತರ್ಜಲ ಸಂರಕ್ಷಣೆ ಕುರಿತು ಮಾಹಿತಿ ನೀಡುವುದರಿಂದ ಆ ಮಾಹಿತಿ ಪ್ರತಿ ಕುಟುಂಬಕ್ಕೂ ತಲುಪುವುದು ಎಂಬ ವಿಶ್ವಾಸದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಅಂತರ್ಜಲ ನಿದರ್ೇಶನಾಲಯದ ಹಿರಿಯ ಭೂ ವಿಜ್ಞಾನಿ ಮಾತನಾಡಿ, ಮನೆಯಲ್ಲಿರುವ ನಲ್ಲಿಗಳನ್ನು ಸೋರದಂತೆ ನೋಡಿಕೊಂಡು ನೀರನ್ನು ಉಳಿತಾಯ ಮಾಡಬೇಕು. ಮಳೆ ನೀರಿನ ಕೊಯ್ಲು ಅಳವಡಿಸುವುದು ಮತ್ತು ನೀರಿನ ಬಳಕೆಯನ್ನು ಕಡಿಮೆ ಮಾಡಿ, ಪುರ್ನಬಳಕೆ ಮಾಡಬೇಕು. ನಮ್ಮ ಸುತ್ತಮುತ್ತಲಿನ ನೀರನ್ನು ಕಲುಷಿತಗೊಳ್ಳದಂತೆ ನೋಡಿಕೊಳ್ಳಬೇಕು. ರಾಸಾಯನಿಕ ಬಳಕೆ ಮಾಡುವುದನ್ನು ಕಡಿಮೆ ಮಾಡಬೇಕು ಎಂದು ಹೇಳಿದರು. 

  ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಗುರುಗಳು, ಸಹ ಶಿಕ್ಷಕರು, ಇತರರು ಉಪಸ್ಥಿತರಿದ್ದರು. ಗ್ರಾಮೀಣ ಅಭಿವೃದ್ದಿ ಸಂಸ್ಥೆ ಡಾ.ಬಾಬು ಸಜ್ಜನ ಸ್ವಾಗತಿಸಿದರು. ಕುಲಕಣರ್ಿ ನಿರೂಪಿಸಿದರು.