ಹನುಮಾನ ಜಯಂತಿ: ವಿವಿಧ ಕಾರ್ಯಕ್ರಮ
ಸಂಬರಗಿ 10: ಕರ್ನಾಟಕ ಮಹಾರಾಷ್ಟ್ರದ ಗಡಿ ಭಾಗದಲ್ಲಿ ಇರುವ ಜಂಬಗಿ ಗ್ರಾಮದ ಮಾಳಿ ನಗರ ಬಡಾವಣೆಯಲ್ಲಿ ಸನ್ 2015ರಲ್ಲಿ 1 ಕೋಟಿ ರೂಪಾಯಿ ವೆಚ್ಚ ಮಾಡಿ, 32 ಅಡಿ ಎತ್ತರದ ಹನುಮಾನ ಮೂರ್ತಿಸ್ಥಾಪನೆ ಮಾಡಿ, ಪ್ರತಿ ವರ್ಷ ಲಕ್ಷಾಂತರ ರೂಪಾಯಿ ಹಣ ವೆಚ್ಚ ಮಾಡಿ ಹನುಮಾನ ಜಯಂತಿಯನ್ನು ಆಚರಿಸುತ್ತಿದ್ದು, ಹನುಮಾನ ಜಯಂತಿಯ ನಿಮಿತ್ಯವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ದೇಶದ ವಿವಿಧ ರಾಜ್ಯಗಳಿಂದ ಭಕ್ತರು ಆಗಮಿಸುತ್ತಿದ್ದಾರೆ.
ಜಂಬಗಿ ಗ್ರಾಮದ ಮಾಳಿ ನಗರ ಬಡಾವಣೆಯಲ್ಲಿ ವಾಸಿಸುತ್ತಿರುವ ಮಾಣಿಕ ಸೂರ್ಯವಂಶಿ ಇವರು ಬಡ ಕುಟುಂಬದಲ್ಲಿ ಜನಿಸಿ. ಹನುಮಾನ ದೇವರ ಭಕ್ತರಾಗಿ ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಾ ಬರುತ್ತಿದ್ದಾರೆ. ಹನುಮಾನನ ಭಕ್ತರಾಗಿ ಪ್ರತಿ ಶನಿವಾರ ಕೃಷ್ಣಾ ತೀರದ ಅವರಖೋಡ ಗ್ರಾಮದಲ್ಲಿ ಇರುವ ಹನುಮಾನ ದೇವಸ್ಥನಕ್ಕೆ ತಮ್ಮ ಗ್ರಾಮದಿಂದ ದೇವಸ್ಥನದವರೆಗೆ ಕಾಲ್ನಡಿಗೆಯ ಮುಖಾಂತರ ಹೋಗುತ್ತಾರೆ. ಎಷ್ಟೇ ಕಷ್ಟ ಬಂದರೂ ಹನುಮಾನ ದೇವರನ್ನು ನೆನೆಸಿದರೆ ಕಷ್ಟ ಪರಿಹಾರವಾಗುತ್ತದೆ.
ಮಾಣಿಕ ಸೂರ್ಯವಂಶಿ ಇವರು ಮರುಳು ಸಾಗಾಣಿಕೆ ಮಾಡುತ್ತಿದ್ದರು. ಆದರೆ ಈ ಕೆಲಸವನ್ನು ರದ್ದುಮಾಡಿ ಬೇರೆ ಯಾವುದಾದರು ಕೆಲಸ ಮಾಡಬೇಕೆಂದು ಆದರೆ ತಾವು ವಾಸಿಸುತ್ತಿರುವ ಸ್ಥಳದ ಹತ್ತಿರ ಹನುಮಾನ ಮೂರ್ತಿಯನ್ನು ಸ್ಥಾಪನೆ ಮಾಡಬೇಕೆಂದು ಕನಸಿನಲ್ಲಿ ಬಂದು ಹೇಳಿದ ನಂತರ ಸ್ವಂತ ಮೂರ್ತಿಯನ್ನು ಕಟ್ಟಡ ಮಾಡಿ ಪ್ರತಿ ವರ್ಷ ಹನುಮಾನ ಜಯಂತಿಯ ನಿಮಿತ್ಯವಾಗಿ ಕುಂಭ ಮೇಳ, ಸಂಸ್ಕೃತಿ ಕಾರ್ಯಕ್ರಮ, ವಿಶೇಷ ಪೂಜೆ ಹಾಗೂ ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾಟಗಳು ಏರಿ್ಡಸುತ್ತಾರೆ. ಹನುಮಾನ ಜಯಂತಿಯ ನಿಮಿತ್ಯವಾಗಿ ಸಾವಿರಾರು ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ. ದಿನನಿತ್ಯ ನೂರಾರು ಭಕ್ತರು ಶನಿವಾರ ಹಾಗೂ ಇನ್ನೀತರ ದಿನ ಬಂದು ದರ್ಶನ ಪಡೆಯುತ್ತಾರೆ. ಉತ್ತರ ಕರ್ನಾಟಕ ಹಾಗೂ ದಕ್ಷಿಣ ಮಹಾರಾಷ್ಟ್ರದಲ್ಲಿ ಇಷ್ಟು ಎತ್ತರವಾದ ಏಕೈಕ ಹನುಮಾನ ಮೂರ್ತಿ. ಪ್ರತಿ ಶ್ರಾವಣ ತಿಂಗಳಿನಲ್ಲಿ ಅಮವಾಸ್ಯೆ, ಪೂರ್ಣಿಮಾ ದರ್ಶನಕ್ಕೆ ಬರುವ ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆಯನ್ನು ಕಲ್ಪಿಸುತ್ತಿದ್ದಾನೆ. ಈ ಭಾಗದಲ್ಲಿ ಬಡ ಜನರ ಆಧಾರವಾಗಿ ನಿಂತಿದ್ದಾನೆ. ಎಲ್ಲ ದೇವತೆಗಳಿಗಿಂತ ಹನುಮಾನ ದೇವರ ಮೇಲೆ ಭಕ್ತಿ ಹಚ್ಚು ಇದ್ದು, ಪ್ರತಿ ವರ್ಷ ವಿವಿಧ ಕಾರ್ಯಕ್ರಮ ಏರಿ್ಡಸುತ್ತಿದ್ದಾನೆ. ದರ್ಶನಕ್ಕೆ ಬರುವ ಭಕ್ತರಿಗೆ ಅಥಣಿ, ಕವಟೆಮಹಾಂಕಾಳ, ಬೈಲಹೊಂಗಲ, ಬೆಳಗಾವಿ ಘಟಕದಿಂದ ಬಸ್ ಸೌಲಭ್ಯವನ್ನು ಕಲ್ಪಿಸಲಾಗಿದೆ. ಭಕ್ತರ ತಂಡ ಅಮವಾಸ್ಯೆ, ಹುಣ್ಣಿಮೆ, ಶನಿವಾರದಂದು ಹರಿದು ಬರುತ್ತದೆ.
ಬಾಕ್ಸ್
ಏಪ್ರೀಲ್ 12ರಂದು ಹನುಮಾನ ನಿಮಿತ್ಯವಾಗಿ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಜನರಲ್ ನಾಲೆಡ್ಜ ಪರೀಕ್ಷೆ ಏರಿ್ಡಸಲಾಗಿದ್ದು, ಅದರಲ್ಲಿ ಪ್ರಥಮ ಬಹುಮಾನ 25 ಸಾವಿರ, ದ್ವಿತೀಯ ಬಹುಮಾನ 15 ಸಾವಿರ, ತೃತಿಯ ಬಹುಮಾನ 10 ಸಾವಿರ ರೂಪಾಯಿ ನೀಡಲಾಗುವುದು. ಭಾಗವಹಿಸುವ ವಿದ್ಯಾರ್ಥಿಗಳು 9916565647 ಈ ನಂಬರಿಗೆ ಕರೆ ಮಾಡಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಅದೇ ದಿನ ರಾಷ್ಟ್ರದ ಮಟ್ಟ ಕುಸ್ತಿ ಪಂದ್ಯಾಟವನ್ನು ಏರಿ್ಡಸಲಾಗಿದೆ. ಈ ಕುಸ್ತಿ ಪಂದ್ಯಾಟದಲ್ಲಿ ದೇಶದ ವಿವಿದ ರಾಜ್ಯದಿಂದ ಕುಸ್ತಿ ಪಟುಗಳು ಆಗಮಿಸುತ್ತಿದ್ದಾರೆ.