ಲೋಕದರ್ಶನ ವರದಿ
ಗಜೇಂದ್ರಗಡ 07: ತಾಲೂಕಿನ ಕೊಡಗಾನೂರ ಗ್ರಾಮ ಸರಕಾರಿ ಶಾಲೆಯಲ್ಲಿ ಶೈಕ್ಷಣಿಕ ಮೂಲ ಸೌಕರ್ಯ ಜತಗೆ ಸಹ ಶಿಕ್ಷಕರ ಜತೆಗೆ ಅನಗತ್ಯ ಜಗಳವಾಡುತ್ತಿರುವ ಮುಖ್ಯ ಶಿಕ್ಷಕಿ ವಗರ್ಾವಣೆಗೆ ಆಗ್ರಹಿಸಿ ವಿದ್ಯಾಥರ್ಿಗಳು, ಪಾಲಕರು ಪ್ರತಿಭಟನೆ 2ನೇ ದಿನ ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿದ ಬಿಇಓ ಏಳು ದಿನದಲ್ಲಿ ಮುಖ್ಯ ಶಿಕ್ಷಕಿ ವರ್ಗ ಮಾಡುವ ಭರವಸೆಯಿಂದ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.
ಇದಕ್ಕೂ ಮೊದಲು ಬೆಳಗ್ಗೆ ಶಾಲೆ ಎಲ್ಲ ತರಗತಿ ಕೊಠಡಿಗಳನ್ನು ಬಂದ್ ಮಾಡಿ ತರಗತಿ ಬಹಿಷ್ಕರಿಸಿದ ಶಾಲೆ ನೂರಾರು ವಿದ್ಯಾಥರ್ಿಗಳು ಮತ್ತು ಪಾಲಕರು ಪ್ರತಿಭಟನೆ ಮುಂದುವರೆಸಿದ್ದರು. ಬಳಿಕ ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಓ) ನಂಜು ಡಯ್ಯಾ ಮತ್ತು ಪಿಎಸ್ಐ ರಮೇಶ ಜಲಗೇರಿ ಪ್ರತಿಭಟನಾ ನಿರತರ ಅಹವಾಲು ಆಲಿಸಿದರು.
ಶಾಲೆಯ ಒಳಗಡೆ ಶಿಕ್ಷಕರ ಸಭೆ ನಡೆಸಿದ ಬಳಿಕ ಬಿಇಓ ನಂಜುಡಯ್ಯಾ ಏಳು ದಿನದಲ್ಲಿ ಮುಖ್ಯ ಶಿಕ್ಷಕಿ ಅನ್ನಪೂಣರ್ಾ ರಾಠೋಡ ವರ್ಗವಣೆ ಮಾಡುವದಾಗಿ ಭರವಸೆ ನೀಡಿದರೂ ಪ್ರತಿಭಟನಾಕಾರರು ಸಮ್ಮತಿಸಲಿಲ್ಲಾ. ಬಳಿಕ ಪಿಎಸ್ಐ ರಮೇಶ ಜಲಗೇರಿ, ಅದಕ್ಕಾಗಿ ನಾನು ಸಹ ತಮ್ಮ ಬೆಂಬಲಕ್ಕೆ ಇರುವದಾಗಿ ತಿಳಿಸಿದಾಗಿ ಗ್ರಾಮಸ್ಥರು ಸಮ್ಮತಿಸಿದರು.
ಶಾಲಾ ಮೇಲುಸ್ತವಾರಿ ಸಮಿತಿ ಅಧ್ಯಕ್ಷ ಮುತ್ತಪ್ಪ ಮಾಳೋತ್ತರ, ಮಹಾಂತೇಶ ತಳವಾರ, ಮುತ್ತಯ್ಯಾ ಬಾಳಿಕಾಯಿಮಠ, ಮಹಾಂತಯ್ಯಾ ಕಪ್ಪಲಿಮಠ, ಶಿವರುದ್ರಯ್ಯಾ ಪೂಜಾರ, ವೀರಪ್ಪ ಹುಯಿಲಗೋಳ, ಹುಸೇನಸಾಬ ನಧಾಪ, ಶರಣಪ್ಪ ತಳವಾರ, ರೇಣುಕಯ್ಯಾ ಅಂಗಡಿ, ಬಸವರಾಜ ಹೂಗಾರ, ಈರಪ್ಪ ಹಡಪದ, ಈರಪ್ಪ ಬೇವೂರ, ಮಹಾಂತಯ್ಯಾ ಬಣ್ಣದಮಠ, ರಮೇಶ ರಾಮಜಿ, ಕಲ್ಲಯ್ಯಾ ಹಿರೇಮಠ, ಶಿಕ್ಷಕರಾದ ಬಿ.ಸಿ. ಅಂಗಡಿ, ಎ.ಜಿ. ಬೂದಿಹಾಳ, ವಿ.ಆರ್. ಕುಲಕಣರ್ಿ, ಎ.ಜಿ. ಹದ್ದಣ್ಣವರ, ಮೋಮಿನ್, ಅಖಿಲಾ ದಾಸರ ಇನ್ನಿತರು ಶಿಕ್ಷಕರು ಮುಖ್ಯ ಶಿಕ್ಷಕಿ ಅನ್ನಪೂಣರ್ಾ ರಾಠೋಡ ಉಪಸ್ಥಿತರಿದ್ದರು.