ಡೊಳ್ಳು ಕುಣಿತ ಕಾರ್ಯಕ್ರಮ

ಲೋಕದರ್ಶನ ವರದಿ

ಧಾರವಾಡ06 : ಕರ್ನಾಟಕ ವಿದ್ಯಾವರ್ಧಕ ಸಂಘದ  ಯುವಜನ ಮಂಟಪವು, ಬಸವ ಜಯಂತಿ ಅಂಗವಾಗಿ ದಿನಾಂಕ: 7-5-2019 ರಂದು ರವಿವಾರ ಮಧ್ಯಾಹ್ನ 3 ಗಂಟೆಗೆ ಮುರುಘಾಮಠ ಆವರಣದಲ್ಲಿ ಗಂಗವ್ವ ಆಡಿನವರ, ಶ್ರೀಶಕ್ತಿ ದ್ಯಾಮವ್ವ ಮಹಿಳಾ ಸಂಘ, ತಡಸಿನಕೊಪ್ಪ ತಂಡದವರಿಂದ 'ಡೊಳ್ಳು ಕುಣಿತ' ಕಾರ್ಯಕ್ರಮ ಏರ್ಪಡಿಸಿದೆ. 

ಧಾರವಾಡ ಮುರುಘಾಮಠದ ಉಪಾಧ್ಯಕ್ಷರಾದ ನಾಗರಾಜ ಪಟ್ಟಣಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸುವರು. 

ಸಮಾಜ ಸೇವಕರಾದ ಧಾರವಾಡದ ನಿರ್ಮಲಾ ಹೊಂಗಲ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಕನರ್ಾಟಕ ವಿದ್ಯಾವರ್ಧಕ ಸಂಘದ ಕೋಶಾಧ್ಯಕ್ಷರಾದ ಕೃಷ್ಣ ಜೋಶಿ ಹಾಗೂ ಪ್ರಧಾನ ಕಾರ್ಯದಶರ್ಿಗಳಾದ ಪ್ರಕಾಶ ಎಸ್.ಉಡಿಕೇರಿ ಅತಿಥಿಗಳಾಗಿ ಆಗಮಿಸುವರು. 

ಕಲಾವಿದರು, ಕಲಾಸಕ್ತರು, ಸಂಘದ ಸದಸ್ಯರು ಆಸಕ್ತ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘದ ಯುವಜನ ಮಂಟಪದ ಸಂಚಾಲಕರಾದ ಸತೀಶ ತುರಮರಿ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.