ಗದಗ 08: ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಎಲ್ಲರಿಗೂ ಮನೆ 2022ರ ಯೋಜನೆಯಡಿ ಗದಗ-ಬೆಟಗೇರಿ ನಗರ ಗಂಗಿಮಡಿಯಲ್ಲಿ ನಿಮರ್ಿಸುತ್ತಿರುವ 2ನೇ ಹಂತದ ವಸತಿ ಸಮುಚ್ಛಯ ಕಾಮಗಾರಿಯನ್ನು ರಾಜ್ಯದ ಕೌಶಲ್ಯಾಭಿವೃದ್ಧಿ, ಮುಜರಾಯಿ ಇಲಾಖೆಗಳ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಪಿ.ಟಿ.ಪರಮೇಶ್ವರ ನಾಯ್ಕ ಅವರಿಂದು ವೀಕ್ಷಿಸಿದರು.
ಗದಗ-ಬೆಟಗೇರಿ ನಗರ ಸಭೆಯ ಈ ವಸತಿ ಸಮುಚ್ಛಯ 51 ಎಕರೆ 27 ಗುಂಟೆ ಜಾಗೆಯಲ್ಲಿ ಮೊದಲ ಮಹಡಿ ಘಟಕದೊಂದಿಗೆ ಒಟ್ಟು 3630 ಮನೆಗಳ ನಿಮರ್ಾಣ ಯೋಜನೆ ಇದಾಗಿದೆ ಎಂದು ಶಾಸಕ ಎಚ್.ಕೆ.ಪಾಟೀಲ ನುಡಿದರು.
ಪ್ರತಿ ಮನೆಯ ಕಾಪರ್ೆಟ ಏರಿಯಾ 355 ಚದುರ ಅಡಿ ಇರಲಿದ್ದು ಈ ಯೋಜನೆಗೆ ಕೇಂದ್ರ ಸಕರ್ಾರ 54.45 ಕೋಟಿ ರೂ. ರಾಜ್ಯ ಸಕರ್ಾರ 49.42 ಕೋಟಿ ರೂ. ಫಲಾನುಭವಿಗಳ ವಂತಿಕೆ 137.65 ಕೋಟಿ ಹಾಗೂ ನಗರಸಭೆಯ ವಂತಿಕೆ 2.45 ಕೋಟಿ ರೂ. ಇರಲಿದ್ದು 2020ರ ಮಾರ್ಚ ತಿಂಗಳ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕಿದೆ ಎಂದು ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತರು ಯೋಜನೆ ವಿವರ ನೀಡಿದರು.
ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ಚವ್ಹಾಣ, ಉಪವಿಭಾಗಾಧಿಕಾರಿ ಪಿ.ಎಸ್.ಮಂಜುನಾಥ, ಜಿ.ಪಂ. ಸದಸ್ಯರಾದ ವಾಸಣ್ಣ ಕುರಡಗಿ, ಸಿದ್ದು ಪಾಟೀಲ, ಅಧಿಕಾರಿಗಳು ಉಪಸ್ಥಿತರಿದ್ದರು.