ಗದಿಗೆಯ್ಯ ಹೊನ್ನಾಪುರದು ಭೌತಿಕತೆ-ತಾತ್ವಿಕತೆಯನ್ನು ನಂಬಿಕೊಂಡಿದ್ದ ಕಾಲಘಟ್ಟ: ರುಮಾಲೆ

ಧಾರವಾಡ 13:  1903-1904ರಲ್ಲಿಯೇ ನಮ್ಮ ಯುವಕರು ಆಧುನಿಕರಾಗಬೇಕು, ಪಶ್ಚಿಮ ಮುಖಿಗಳಾಗಬೇಕು,  ಸ್ವಾವಲಂಬಿಗಳಾಗಬೇಕು. ದೇಶ ಸ್ವತಂತ್ರವಾಗಬೇಕು ಎಂದು ಹಾಗೂ ಭೌತಿಕತೆ-ತಾತ್ವಿಕತೆಯನ್ನು ನಂಬಿಕೊಂಡಿದ್ದ ಕಾಲಘಟ್ಟ ಗದಿಗೆಯ್ಯ ಹೊನ್ನಾಪುರ ಅವರದು ಎಂದು ಸಾಹಿತಿ ಮತ್ತು ಚಿಂತಕರಾದ ಹೊಸಪೇಟೆಯ ಡಾ. ಮೃತ್ಯುಂಜಯ ರುಮಾಲೆ ಹೇಳಿದರು. 

ಅವರು ಕನರ್ಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ, ಗದಿಗೆಯ್ಯ ಹೊನ್ನಾಪುರಮಠ ದತ್ತಿ ಕಾರ್ಯಕ್ರಮದಲ್ಲಿ ``ಗದಿಗೆಯ್ಯ ಹೊನ್ನಾಪುರಮಠರ ಸಾಮಾಜಿಕ ಬದ್ಧತೆ'' ವಿಷಯ ಮೇಲೆ ಅವರು ಅತಿಥಿ ಉಪನ್ಯಾಸಕರಾಗಿ  ಮಾತನಾಡುತ್ತಿದ್ದರು. 

ಸಾಮಾಜಿಕ ಸೇವೆ, ಕಾರ್ಯಗಳು, ಲಾಭದಾಯಕವಾಗಿದ್ದರೆ, ಅದರಲ್ಲಿ ಸ್ವಾರ್ಥ ಅಡಗಿದ್ದರೆ ಅದು ಎಂದೂ ಸಾಮಾಜಿಕ ಸೇವೆ ಎನಿಸುವುದಿಲ್ಲ, ಅದೊಂದು ವ್ಯಾಪಾರವಾಗುತ್ತದೆ. ಈ ಕಾಲದಲ್ಲಿ  ತಾವು ಏನು ಉದ್ಯೋಗ ಮಾಡುತ್ತೀರಿ ಎಂದು ಕೇಳಿದರೆ ಸುಮಾರು ಜನ ನಾವು ಸಾಮಾಜಿಕ ಸೇವೆ ಮಾಡುತ್ತೇವೆ ಎಂದು ಉತ್ತರ ನೀಡುತ್ತಾರೆ. ಅಂದರೆ ಇವರು ಮಾಡುವ ಸೇವೆಯಲ್ಲಿ ಸ್ವಾರ್ಥ ಹಾಗೂ ಲಾಭ ಮನೋಭಾವನೆ ಅಡಗಿರುವುದನ್ನು ಕಾಣುತ್ತೇವೆ. ಇದು ಎಂದಿಗೂ ಸಾಮಾಜಿಕ ಸೇವೆಯಾಗಲಾರದು. ಇದು ಅವರ ಉಪಜೀವನದ ಒಂದು ಕ್ರಮವಾಗಿದೆ. ಆದರೆ ಹೊನ್ನಾಪುರಮಠರು ತಮ್ಮ ಸಾಮಾಜಿಕ ಸೇವೆಯಲ್ಲಿ ಎಂದೂ ಸ್ವಾರ್ಥ ಹಾಗೂ ಲಾಭ ಮನೋಭಾವನೆ ಹೊಂದದೇ ನಿಸ್ವಾರ್ಥ ಮನೋಭಾವನೆಯಿಂದ ಪ್ರಾಮಾಣಿಕ ಸೇವೆ ಸಲ್ಲಿಸಿದ ಮಹಾನುಭಾವರು ಎಂದರು.

ಗದಿಗೆಯ್ಯ ಹೊನ್ನಾಪುರಮಠರ ಸಾಮಾಜಿಕ ಸೇವೆಯನ್ನು ಅವಲೋಕಿಸಿದಾಗ ಇಂದು ಹೆಮ್ಮರವಾಗಿ ಬೆಳೆದು ನಿಂತ ಕನರ್ಾಟಕ ವಿದ್ಯಾವರ್ಧಕ ಸಂಘದ ಸ್ಥಾಪಕ ಸದಸ್ಯರಾಗಿ, ಆಡಳಿತ ಮಂಡಳಿಯ ಸದಸ್ಯರಾಗಿ ಅಪಾರ ಸೇವೆ ಸಲ್ಲಿಸಿದ್ದನ್ನು ಕಾಣುತ್ತೇವೆ. ಮುಂಬಯಿ ಪ್ರಾಂತಿಕ ರಾಜಕೀಯ ಪರಿಷತ್ತಿನ ಸ್ವಾಗತ ಸಮಿತಿ ಸದಸ್ಯರಾಗಿ ವೀರಶೈವ ಮಹಾಸಭಾದ ಸ್ಥಾಪಕ ಸದಸ್ಯರಾಗಿ ಸ್ವದೇಶಿ ಚಳುವಳಿಯಲ್ಲಿ ಭಾಗವಹಿಸಿ ಖಾದಿಧಾರಿಗಳಾಗಿ, ಗ್ರಂಥಕರ್ತರ ಸಮ್ಮೇಳನ ಯೋಜನಾ ಸಮಿತಿ ಸದಸ್ಯರಾಗಿ, ಕನ್ನಡ ಭಾಷೆಗಳನ್ನಾಡುವ  ಪ್ರದೇಶಗಳ ಏಕೀಕರಣಕ್ಕಾಗಿ ಸ್ಥಾಪಿಸಿದ ಸಮಿತಿಯ ಸದಸ್ಯರಾಗಿ ಧಾರವಾಡ ಮುನಸಿಪಾಲಿಟಿಯ ಸಭಾ ಸದಸ್ಯರಾಗಿ, ವೀರಶೈವ ಸ್ಥಾಯಿ ಸಮಿತಿ ಪ್ರಧಾನ ಕಾರ್ಯದಶರ್ಿಯಾಗಿ, ತಮ್ಮ ಮನೆಯ ಅಟ್ಟದ ಮೇಲೆಯೇ ಕನರ್ಾಟಕ ಏಕೀಕರಣದ ಬೀಜಾಂಕುರ `ಕನರ್ಾಟಕ ಸಭೆ' ಸ್ಥಾಪನೆ ಮಾಡಿದರು. ದಾವಣಗೆರೆಯಲ್ಲಿ ಪ್ರಥಮವಾಗಿ ಮೃತ್ಯುಂಜಯಪ್ಪಗಳು ಹಾಗೂ ಹಡರ್ೇಕರ ಮಂಜಪ್ಪನವರು  ಕೂಡಿ ಬಸವಜಯಂತಿ ಆಚರಣೆ ಮಾಡುವ ವೇಳೆಯಲ್ಲಿ `ತರುಣ ವೀರಶೈವ ಸಮ್ಮೇಳನ'ದ ಅಧ್ಯಕ್ಷತೆಯನ್ನು ವಹಿಸಿದ್ದರು. ಹುಬ್ಬಳ್ಳಿ ಮೂರು ಸಾವಿರ ಮಠದ ಆಸ್ತಿ ನಿರ್ವಹಣೆಯ ಪಂಚಕಮೀಟಿ ಸದಸ್ಯರಾಗಿ ಹೀಗೆ ಹತ್ತು ಹಲವಾರು ಸಂಘ ಸಂಸ್ಥೆಗಳ ಪದಾಧಿಕಾರಿಗಳಾಗಿ ಸಮಾಜ ಮುಖಿ ಸೇವೆ ಸಲ್ಲಿಸುವ ಮುಖಾಂತರ ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ ಎಂದು ರುಮಾಲೆ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಬೆಳಗಾವಿಯ ಬಸವರಾಜ ಕಟ್ಟಿಮನಿ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಡಾ. ಮಲ್ಲಿಕಾಜರ್ುನ ಹಿರೇಮಠ ಅವರು ಮಾತನಾಡಿ, ಹೊನ್ನಾಪುರಮಠರು 33 ಅಮೂಲ್ಯ ಕೃತಿಗಳನ್ನು ಸಾರಸ್ವತಲೋಕಕ್ಕೆ ನೀಡಿದ್ದಾರೆ. ಕ.ವಿ.ವ.ಸಂಘವು ಪ್ರಕಟಿಸುತ್ತಿದ್ದ `ವಾಗ್ಭೂಷಣ' ಪತ್ರಿಕೆಯ ಸಹಸಂಪಾದಕರಾಗಿಯೂ ಕಾರ್ಯಮಾಡಿದವರು. ಗದಿಗೆಯ್ಯನವರು ಸಮಚಿತ್ತದ, ಪೂರ್ಣ ಪ್ರಮಾಣದ ಹೊಣೆಗಾರಿಕೆಯ ವ್ಯಕ್ತಿತ್ವಕ್ಕೆ ಸಾಕ್ಷಿಯಾದವರು. ಉತ್ತರ ಕನರ್ಾಟಕದ ಮೊದಲನೇ ವೀರಶೈವ ವಕೀಲರೆಂದು ಪ್ರಖ್ಯಾತಿ ಹೊಂದಿದವರಾಗಿದ್ದರು. ಅವರು ಸಾಮಾಜಿಕ ಬದ್ಧತೆಯ ವಿಷಯದಲ್ಲಿ ಹಾಗೂ ತಮ್ಮ ತತ್ವ ಸಿದ್ಧಾಂತದೊಂದಿಗೆ ಎಂದೂ ರಾಜಿಯಾಗುತ್ತಿರಲಿಲ್ಲ ಎಂದರು. 

ದಿ. ಗದಿಗೆಯ್ಯ ಹೊನ್ನಾಪುರಮಠರ ಭಾವಚಿತ್ರಕ್ಕೆ ಪುಷ್ಪನಮನದೊಂದಿಗೆ ಗೌರವ ಸಲ್ಲಿಸಲಾಯಿತು. ವೇದಿಕೆಯಲ್ಲಿ ಡಾ. ಹೇಮಾ ಪಟ್ಟಣಶೆಟ್ಟಿ ಉಪಸ್ಥಿತರಿದ್ದರು. ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ವಿಶ್ವೇಶ್ವರಿ ಹಿರೇಮಠ ಸ್ವಾಗತಿಸಿದರು. ಸತೀಶ ತುರಮರಿ ನಿರೂಪಿಸಿ, ವಂದಿಸಿದರು. ಪ್ರಧಾನ ಕಾರ್ಯದಶರ್ಿ ಪ್ರಕಾಶ ಎಸ್. ಉಡಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ನಿಂಗಣ್ಣ ಕುಂಟಿ (ಇಟಗಿ), ಕೋಶಾಧ್ಯಕ್ಷ ಕೃಷ್ಣ ಜೋಶಿ ಹಾಗೂ ಕಾ.ಕಾ.ಸಮಿತಿ ಸದಸ್ಯ ಮನೋಜ ಪಾಟೀಲ ಅತಿಥಿಗಳನ್ನು ಗೌರವಿಸಿದರು.

ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ, ಬಸಲಿಂಗಯ್ಯ ಹಿರೇಮಠ, ವೀರಣ್ಣ ಒಡ್ಡೀನ, ಮಹೇಶ ಕುಲಕಣರ್ಿ, ಮಧುಮತಿ ಸಣಕಲ್ಲ ಸೇರಿದಂತೆ ಅನೇಕರು ಭಾಗವಹಿಸಿದ್ದರು.