ವಿವಿಧ ಕ್ಷೇತ್ರಗಳ ಸಾಧಕರಿಗೆ ಗೌರವ ಸನ್ಮಾನ

ಧಾರವಾಡ 06: ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯುತ್ತಿರುವ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕೊನೆಯ ದಿನ ಸಾಹಿತ್ಯ, ಕಲೆ, ಸಕರ್ಾರಿ ಸೇವೆ ಸೇರಿದಂತೆ ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಮತ್ತು ಗಣ್ಯರನ್ನು ಸನ್ಮಾನಿಸಲಾಯಿತು. 

ಈ ವೇಳೆ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿ, ಕನ್ನಡ ಸಾಹಿತ್ಯ ಲೋಕವು ಅತ್ಯಂತ ಶ್ರೀಮಂತವಾಗಿದೆ. ನಮ್ಮ ನಾಡು ನುಡಿ ಪ್ರತಿನಿಧಿಸಿ ಈ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಈ ವೇಳೆ ಸಾಹಿತ್ಯ, ಕಲೆ, ಆಡಳಿತದ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರನ್ನು ಸನ್ಮಾನ ಮಾಡಿರುವುದು ನನ್ನ ಸೌಭಾಗ್ಯ ಎಂದು ಭಾವಿಸಿದ್ದೇನೆ ಎಂದರು.

ದ ರಾ ಬೇಂದ್ರೆ, ಶಿವರಾಮ ಕಾರಂತ, ವಿ ಕೃ ಗೋಕಾಕ, ಯು ಆರ್ ಅನಂತಮೂತರ್ಿ, ಗೀರೀಶ ಕಾನರ್ಾಡ,  ಚಂದ್ರಶೇಖರ ಕಂಬಾರ ಅಂತಹ ಸಾಹಿತ್ಯ ದಿಗ್ಗಜರು ಜ್ಞಾನಪೀಠ ತಂದುಕೊಡುವ ಮೂಲಕ ಕನ್ನಡ ನಾಡಿನ ಕೀತರ್ಿಯನ್ನು ಬೆಳೆಗಿದ್ದಾರೆ ಎಂದು ತಿಳಿಸಿದರು.

ಪ್ರಾಸ್ತಾವಿಕ ಮಾತನಾಡಿದ ಕಸಾಪ ಅಧ್ಯಕ್ಷರಾದ ಮನು ಬಳಿಗಾರ ಅವರು, ತಮ್ಮ ಇಡೀ ಜೀವನವನ್ನು ಸಾಹಿತ್ಯ, ಕಲೆ, ಸಕರ್ಾರಿ ಸೇವೆ ಮತ್ತು ಸಾಂಸ್ಕೃತಿಕ ಲೋಕದ ಉಳಿವಿಗೆ, ಪೋಷಣೆಗೆ ಮೀಸಲಿಟ್ಟ ಗಣ್ಯರನ್ನು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸನ್ಮಾನಿಸುತ್ತಿದ್ದೇವೆ. ಇದು ನಮ್ಮ ಆದ್ಯ ಕರ್ತವ್ಯ ಎಂದು ಭಾವಿಸಿದ್ದೇವೆ ಎಂದರು.

ಮಾಜಿ ಸಂಸದರಾದ ಐ.ಜಿ.ಸನದಿ, ದಕ್ಷ ಆಡಳಿತಗಾರರಾದ ಐ.ಎಂ.ವಿಠಲಮೂತರ್ಿ, ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿದರ್ೇಶಕರಾದ ಡಾ.ಸತೀಶ್ಕುಮಾರ ಹೊಸಮನಿ ಅವರು ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರಾದ ಡಾ.ಹೆಚ್.ಸಿ.ಮಹದೇವಪ್ಪ, ಮಲ್ಲಿಕಾಜರ್ುನ ಹಿರೇಮಠ, ಅಪ್ಪಾಜಿ ಸಿ.ಎಸ್.ನಾಡಗೌಡ, ನಿತಿನ್ ಷಾ, ಡಾ.ಎನ್ ಪಿ ಭಟ್, ಬಸವಂತಕುಮಾರ ಪಾಟೀಲ, ಪಿ.ಎಸ್.ಕನಮಡಿ, ನಂದಾ ಪಾಟೀಲ, ಯು.ಪಿ.ಪುರಾಣಿಕ್, ಶಶಿ ಸಾಲಿ, ಮೃತ್ಯುಂಜಯ ರುಮಾಲೆ, ವಿಮರ್ಶಕ ಪ್ರೊ.ರಂಗರಾಜ ವನದುರ್ಗ, ಎಂ.ಕೆ.ಭಾಸ್ಕರರಾವ್, ಬೆಳವಾಡಿ ಮಂಜುನಾಥ್, ಯಾಕೂಬ್ ಖಾದರ್ ಗುಲ್ವಾಡಿ, ಬಸವರಾಜ ತರಕಪ್ಪ ಶಿಗ್ಗಾವಿ ಸೇರಿದಂತೆ ಸುಮಾರು 50 ಸಾಧಕರಿಗೆ ಸನ್ಮಾನ ಮಾಡಲಾಯಿತು. 

ಸಾಹಿತ್ಯ ಸಮ್ಮೇಳನದ ಸರ್ವಧ್ಯಕ್ಷ ಡಾ.ಚಂದ್ರಶೇಖರ ಕಂಬಾರ, ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಸಿ.ಎಂ. ಲಿಂಬಣ್ಣವರ, ಪ್ರಸಾದ ಅಬ್ಬಯ್ಯ, ಕಸಾಪ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ ಹಾಗೂ ಇತರರು ಇದ್ದರು.

ಶರಣು ಗೋಗೇರಿ ನಿರೂಪಿಸಿದರು. ಮಲ್ಲಿಕಾಜರ್ುನ ಯಂಡಿಗೇರಿ ಸ್ವಾಗತಿಸಿದರು. ಬಸವಪ್ರಭು ಪಾಟೀಲ ಬೆಟ್ಟದೂರ ವಂದಿಸಿದರು.