ಧಾರವಾಡ 04: ಅಖಿಲ ಭಾರತ 84ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮುಖ್ಯಘಟ್ಟ ಮೆರವಣಿಗೆಗೆ ಕನರ್ಾಟಕ ಮಹಾವಿದ್ಯಾಲಯದ ಆವರಣದಲ್ಲಿ ಜ.4ರಂದು ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್ ಅವರು ಚಾಲನೆ ನೀಡಿದರು.
ಇದಕ್ಕೂ ಮೊದಲು ಕನರ್ಾಟಕ ಕಾಲೇಜಿನ ಆವರಣದಲ್ಲಿ ಸಂಸ್ಥಾಪಕರಾದ ಸರ್ ಸಿದ್ದಪ್ಪ ಕಂಬಳಿ, ಅರಟಾಳ ರುದ್ರಗೌಡರು, ರೊದ್ದ ಶ್ರೀನಿವಾಸ ರಾಯರ ಪುತ್ಥಳಿಗಳಿಗೆ ಹಾಗೂ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಸಮ್ಮೇಳನಾಧ್ಯಕ್ಷರಾದ ಡಾ.ಚಂದ್ರಶೇಖರ ಕಂಬಾರ, ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ವಿ.ದೇಶಪಾಂಡೆ, ಪೌರಾಡಳಿತ ಸಚಿವರಾದ ಸಿ.ಎಸ್.ಶಿವಳ್ಳಿ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಚೈತ್ರಾ ಶಿರೂರ, ಕಸಾಪ ರಾಜ್ಯಾಧ್ಯಕ್ಷರಾದ ಮನು ಬಳಿಗಾರ, ಶಾಸಕರಾದ ಶ್ರೀನಿವಾಸ ಮಾನೆ, ಅಮೃತ ದೇಸಾಯಿ, ಜಿಲ್ಲಾಧಿಕಾರಿಗಳು, ಕಸಾಪ ಜಿಲ್ಲಾಧ್ಯಕ್ಷರಾದ ಎಲ್.ಆರ್.ಅಂಗಡಿ ಅವರು ಮಾಪಾರ್ಪಣೆ ಮಾಡಿ ಗೌರವಿಸಿದರು.
ಆನಂತರ ಅಲಂಕೃತ ಸಾರೋಟಿನಲ್ಲಿ ಸಮ್ಮೇಳನಾಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಹಾಗೂ ಸತ್ಯಭಾಬಾ ಕಂಬಾರ ದಂಪತಿಯನ್ನು ಮತ್ತು ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ ಅವರನ್ನು ಗೌರವ ಪೂರ್ವಕವಾಗಿ ಆಸೀನರನ್ನಾಗಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಹು-ಧಾ ಮಹಾನಗರ ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ್, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿವರ್ಾಹಕ ಅಧಿಕಾರಿ ಡಾ.ಬಿ.ಸಿ. ಸತೀಶ್, ಡಿಸಿಪಿಗಳಾದ ರವೀಂದ್ರ ಗಡಾದಿ, ಬಿ.ಎಸ್. ನೇಮಗೌಡ, ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ಉಪವಿಭಾಗಾಧಿಕಾರಿ ಮಹಮ್ಮದ್ ಜುಬೇರ, ಹು-ಧಾ ಮಹಾನಗರ ಪಾಲಿಕೆ ಆಯುಕ್ತ ಶಕೀಲ್ ಅಹ್ಮದ್ ಹಾಗೂ ಮತ್ತಿತರರು ಇದ್ದರು.
ರೋಮಾಂಚನಗೊಳಿಸಿದ ಕಹಳೆಗಳು: ಮೆರವಣಿಗೆ ಆರಂಭವಾಗುತ್ತಿದ್ದಂತೆ ಏಕಕಾಲದಲ್ಲಿ ಮೊಳಗಿದ 25ಕ್ಕೂ ಹೆಚ್ಚು ಕಹಳೆಗಳ ನಾದ ನೆರೆದ ಸಹಸ್ರಾರು ಕನ್ನಡಿಗರ ಕನ್ನಡಾಭಿಮಾನವನ್ನು ಬಡಿದೆಬ್ಬಿಸಿತು. ಬಾನೆತ್ತರದಲ್ಲಿ ಹಾರಾಡಿದ ಕನ್ನಡ ಧ್ವಜ ಸಂಕೇತಿಸುವ ಬಲೂನುಗಳು ಚಿತ್ತಾರ ಮೂಡಿಸಿದವು.
ಗಮನ ಸೆಳೆದ ಸ್ತಬ್ಧಚಿತ್ರ, ಕಲಾ ತಂಡಗಳು: ಈ ಮೆರವಣಿಗೆಯಲ್ಲಿ 15 ಸ್ತಬ್ಧಚಿತ್ರಗಳು, 58 ಕಲಾತಂಡಗಳು ಕಂಡು ಬಂದವು. ಡೊಳ್ಳು, ಸೋಮನ ಕುಣಿತ, ವೀರಗಾಸೆ, ಜಗ್ಗಲಿಗೆ, ಕೋಲಾಟ, ಗೊಂಬೆ ಕುಣಿತ, ನಗಾರಿ ಸೇರಿದಂತೆ ಮತ್ತಿತರ ವೈವಿದ್ಯಮಯ ಕಲೆಗಳ ಅನಾವರಣವು ಮೆರವಣಿಗೆಯುದ್ದಕ್ಕೂ ಕಂಡು ಬಂದಿತು. ಪೂರ್ಣಕುಂಭ ಹೊತ್ತು ಸಾಲಾಗಿ ನಡೆದ ಮಹಿಳೆಯರು ಗಮನ ಸೆಳೆದರು.
ಮೆರವಣಿಗೆ ಮಾರ್ಗ: ಮೆರವಣಿಗೆಯು ಕೆಸಿಡಿ ಕಾಲೇಜು ರಸ್ತೆಯಿಂದ ಆರಂಭಗೊಂಡು ಆಲೂರ ವೆಂಕಟರಾವ್ ವೃತ್ತ, ಆಝಾದ ರಸ್ತೆ ಮುಖಾಂತರ ಹಳೇ ಬಸ್ನಿಲ್ದಾಣ, ವಿವೇಕಾನಂದ ವೃತ್ತ, ಅಕ್ಕಿಪೇಟ 01 ನೇ ಅಡ್ಡರಸ್ತೆ, ಸಿಬಿಟಿ, ಆಕಳವಾಡಿ ಬುಕ್ ಡಿಪೋ ಮುಖಾಂತರ ಅಂಜುಮನ್ ವೃತ್ತ, ಮಹಾನಗರ ಪಾಲಿಕೆ ವೃತ್ತ, ಹಳೇ ಎಸ್.ಪಿ. ಕಚೇರಿ ಕ್ರಾಸ್, ಉಪನಗರ ಪೊಲೀಸ್ ಠಾಣೆ ಕ್ರಾಸ್, ಹೊಸ ಬಸ್ ನಿಲ್ದಾಣ ಮೂಲಕ ಕೃಷಿ ವಿಶ್ವವಿದ್ಯಾಲಯ ಮುಖ್ಯ ವೇದಿಕೆಗೆ ಬಂದು ತಲುಪಿತು. ಬಳಿಕ ಮುಖ್ಯ ವೇದಿಕೆಯ ಕಾರ್ಯಕ್ರಮ ಆರಂಭಗೊಂಡಿತು.