ಮಾನವೀಯ ಸಂಬಂಧ ಬೆಸೆಯುವ ಕಾರ್ಯವೂ ಪರಿಸರದ ಭಾಗ: ಜೋಶಿ

ಹುಬ್ಬಳ್ಳಿ 07: ಮನುಷ್ಯ-ಮನುಷ್ಯರಲ್ಲಿ ಉತ್ತಮ ಬಾಂಧವ್ಯ ಹೊಂದುವುದು ಪರಿಸರದ ಭಾಗವಾಗಿದೆ. ಗಿಡಗಳನ್ನು ನೆಡಬೇಕು, ಬೆಳೆಸುವ ಕೆಲಸವು ಆಗಬೇಕು. ಬರೇ ಗಿಡಗಳನ್ನು ಹಚ್ಚಿ ನೀರು ಬಿಟ್ಟರೇ ಮಾತ್ರ ಪರಿಸರ ಅಂತಹ ತಿಳಿದುಕೊಂಡಿದ್ದೇವೆ. ಆರೋಗ್ಯಕರ ಸಮಾಜಕ್ಕೆ ಮಾನವೀಯ ಗುಣಗಳುಳ್ಳ ಜನರ ಸಂಖ್ಯೆ ಹೆಚ್ಚಬೇಕು. ಮಾನವೀಯ ಸಂಬಂಧ ಬೆಸೆಯುವ ಕೆಲಸವು ಸಮಾಜದಲ್ಲಿ ನಡೆದು ಸುಖವಾಗಿ ಜೀವಿಸಲು ಬೇಕಾಗುವ ಉತ್ತಮ ವಾತಾವರಣ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ನಿಮರ್ಾಣ ಮಾಡಬೇಕು ಎಂದು ಕೆ.ಎಲ್.ಇ ತಾಂತ್ರಿಕ ಮಹಾವಿದ್ಯಾಲಯದ ಶೈಕ್ಷಣಿಕ ವಿಭಾಗದ ಡೀನ್ ಡಾ. ಶರದ್ ಜೋಶಿ ಹೇಳಿದರು.

  ಅವರು ರಾಜಧಾನಿ ಕಾಲೋನಿಯ ಪ್ರೊಬಸ್ ಕ್ಲಬ್ನ ಮಾಸಿಕ ಸಭೆಯಲ್ಲಿ ಪರಿಸರ ಸಂರಕ್ಷಣೆ ಕುರಿತು ಮಾತನಾಡಿದರು.

ಮನುಷ್ಯ ಯಾಂತ್ರಿಕ ಬದುಕಿನಲ್ಲಿ ಮಾನವೀಯ ಸಂಬಂಧಗಳನ್ನು ಮರೆತು ವತರ್ಿಸುತ್ತಿದ್ದಾನೆ. ಮನಸ್ಸಿನಲ್ಲಿರುವ ಕೊಳೆಯನ್ನು ತೊಳೆಯಬೇಕು. ವಿಲಾಸಿ ಜೀವನಕ್ಕಾಗಿ ಪರಿಸರವನ್ನು ಹಾಳು ಮಾಡುತ್ತಿದ್ದಾನೆ. ಗಿಡಗಳನ್ನು ಕಡೆದಿದ್ದಾನೆ. ಕೆರೆ, ಭಾವಿಗಳನ್ನು ಹಾಳು ಮಾಡಿದ್ದಾನೆ. ಮಣ್ಣು ಕಲುಸಿತಗೊಳಿಸಿದ್ದಾನೆ. ಯಾವ ಪ್ರಾಣಿಯು ಭೂಮಿಯ ಮೇಲೆ ಮನುಷ್ಯನಷ್ಟು ಪರಿಸರವನ್ನು ಹಾಳು ಮಾಡಿದ ಉದಾಹರಣೆ ಸಿಗುವುದಿಲ್ಲ. ಜನರಲ್ಲಿ ನಾಗರಿಕ ಪ್ರಜ್ಞೆ ಬೆಳೆಯಬೇಕು ಎಂದರು. 

ಪರಿಸರ ಮಾಲಿನ್ಯಕ್ಕೆ ಕಾರಣ ಆಗುವ ವಸ್ತುಗಳ ಬಳಕೆ ಮಾಡಬಾರದು. ಪ್ಲಾಸ್ಟಿಕ  ಭೂಮಿಗೆ ಹೆಚ್ಚು ಕ್ರಿಮಿನಾಶಕಗಳನ್ನು ಬಳಸಬಾರದು. ಕೆರೆ, ಭಾವಿ, ನದಿಗಳಲ್ಲಿ ನಿರೂಪಯುಕ್ತ ವಸ್ತುಗಳನ್ನು ಹಾಕಬಾರದು. ಮುಂದಿನ ಜನಾಂಗಕ್ಕೆ ಉತ್ತಮ ಪರಿಸರವನ್ನು ಬಿಟ್ಟು ಹೋಗುವ ನಿಟ್ಟಿನಲ್ಲಿ ಎಲ್ಲ ಹಿರಿಯ ನಾಗರಿಕರಿಂದ ಪ್ರಾಮಾಣಿಕ ಪ್ರಯತ್ನ ನಡೆಯಲಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರೊಬಸ್ ಕ್ಲಬ್ನ ಅಧ್ಯಕ್ಷ ಪ್ರೊ ಎಸ್.ವಿ.ಪಟ್ಟಣಶೆಟ್ಟಿ ಮಾತನಾಡಿ ಅಂದ-ಚೆಂದದ ಭೂಮಿಗೆ ಬಂದು ಸ್ವರ್ಗವನ್ನೇಕೆ ಬಯಸುವುದು ಎಂಬ ಕವಿ ವಾಣಿಯನ್ನು ಉಲ್ಲೇಖಿಸಿ ಪರಿಸರ ಸಂರಕ್ಷಣೆ ಮಾಡಿ, ನಮ್ಮ ನಮ್ಮ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಂಡರೆ, ಈ ಭೂಮಿಯೇ ಸ್ವರ್ಗವಾಗುತ್ತದೆ ಎಂದರು.

ಕ್ಲಬ್ನ ಎನ್.ಬಿ.ಬೆಳ್ಳಿಗಟ್ಟಿ, ಪ್ರೊ ವಿ.ಬಿ.ಮಾಗನೂರು, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದಶರ್ಿ, ಕನರ್ಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ,  ಗ್ರಂಥಪಾಲಕ ಸುರೇಶ ಡಿ. ಹೊರಕೇರಿ, ಪ್ರೊ ಬಸವರಾಜ ಕೆಂಧೂಳಿ,  ಎಂ.ಎ.ಹಿರೇಮಠ, ಸುರೇಶ ಶೇಠ, ಪ್ರೊ ಕುಂಬಾರ,  ಬಸವರಾಜ ಹೊಸಕೇರಿ, ಅನಂತ ಕುಲಕಣರ್ಿ, ಹೊಸಮನಿ, ಮುಂತಾದವರು ಇದ್ದರು.