ನನಗೆ ಯಾವುದೇ ಬಂಧನದ ಭೀತಿಯಿಲ್ಲ: ಶಾಸಕ ರಾಜೀವ್

ಚಿಕ್ಕೋಡಿ 08: ನನಗೆ ಯಾವುದೇ ಬಂಧನದ ಭೀತಿಯಿಲ್ಲ ಎಂದು ಕುಡಚಿ ಶಾಸಕ ಪಿ.ರಾಜೀವ್ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ

            ಮಾಜಿ ಶಾಸಕ ಶ್ಯಾಮ ಘಾಟಗೆ ಮನೆಗೆ ಹೋಗಿ ಧಮ್ಕಿ ಹಾಕಿದ ಆರೋಪ ಪ್ರಕರಣ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಹಾಜರಾಗದ ಕಾರಣ ಮೀಸಲು ಕ್ಷೇತ್ರದ ಬಿಜೆಪಿ ಶಾಸಕ ಪಿ.ರಾಜೀವ್ ಕುಡಚಿ ವಿರುದ್ಧ ವಾರೆಂಟ್ ಜಾರಿಮಾಡಿದ ಹಿನ್ನೆಲೆಯಲ್ಲಿ ಶಾಸಕರು ಇಂದು ಸ್ಪಷ್ಟನೆ ನೀಡಿದ್ದಾರೆ

            ಮಾಧ್ಯಮಗಳೊಂದಿಗೆ ಮಾತ ನಾಡಿದ ಅವರು, ಕೆಲವು ಮಾಧ್ಯಮಗಳು ಬಂಧನ ಭೀತಿ ಇದೆ ಎಂಬ ಸುಳ್ಳು ಸುದ್ದಿ ಪ್ರಸಾರ ಮಾಡುತ್ತಿದ್ದು, ಇದನ್ನು ನೊಡಿ  ನನಗೆ  ಆಶ್ಚರ್ಯ ಆಗಿದೆ. ಸ್ವಾತಂತ್ರ್ಯ ಭಾರತದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿರುವ ಸಂವಿಧಾನದ ಅಡಿಯಲ್ಲಿ ಅಮಾಯಕ, ನಿರಪರಾಧಿಗೆ ಯಾವ ಬಂಧನದ ಭೀತಿ ಇರುತ್ತೆ? ನನಗೆ ಯಾವ ಬಂಧನ ಬೀತಿಯಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ. ಪೊಲೀಸರು ಸರಿಯಾದ ತನಿಖೆ ಮಾಡದೆ ಸುಳ್ಳು ಜಾಜರ್್ ಶೀಟ್ ಹಾಕಿರುವುದರಿಂದ ಗೊಂದಲವುಂಟಾಗಿದೆ ಎಂದಿದ್ದಾರೆ

            ನನ್ನ ಪತ್ನಿಗೆ ಆರೋಗ್ಯ ಸರಿಯಿಲ್ಲದ ಕಾರಣದಿಂದಾಗಿ ನಾನು ಆಸ್ಪತ್ರೆಗೆ ಬಂದಿದ್ದು, ನನಗೆ ಯಾವುದೇ ಬಂಧನದ ಭೀತಿಯಿಲ್ಲ ಎಂದು ಪಿ.ರಾಜೀವ್ ಸ್ಪಷ್ಟನೆ ನೀಡಿದ್ದಾರೆ.